ಪೊನ್ನಂಪೇಟೆ, ಸೆ. ೨: ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಚುನಾವಣೆ ಮೂಲಕ ನಡೆಸಲಾಯಿತು.

ಸಂಘದ ಉಪಾಧ್ಯಕ್ಷನಾಗಿ ತೃತೀಯ ಬಿ.ಕಾಂ ವಿದ್ಯಾರ್ಥಿ ಬೆಳ್ಳಿಯಪ್ಪ ಎಂ.ಜಿ, ಕಾರ್ಯದರ್ಶಿಯಾಗಿ ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ಪ್ರಿನ್ಸಿ ದೇವಮ್ಮ ಎಂ.ಪಿ, ಕ್ರೀಡಾ ಕಾರ್ಯದರ್ಶಿಯಾಗಿ ತೃತೀಯ ಬಿ.ಸಿ.ಎ ವಿದ್ಯಾರ್ಥಿ ಪೊನ್ನಣ್ಣ ಸಿ.ಎಸ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ಸುರಕ್ಷಾ ವಿ.ಎಸ್, ಜಂಟಿ ಕಾರ್ಯದರ್ಶಿಗಳಾಗಿ ದ್ವಿತೀಯ ಬಿ.ಕಾಂ ವಿದ್ಯಾರ್ಥಿಗಳಾದ ನಿತಿನ್ ಬೋಪಣ್ಣ ಕೆ.ಬಿ ಹಾಗೂ ರೋನಿಕ್ ಕೆ.ಎನ್ ಅವರು ಆಯ್ಕೆಯಾದರು.

ಈ ಸಂದರ್ಭ ಮಾತನಾಡಿದ ಪ್ರಾಂಶುಪಾಲ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಎಂ.ಬಿ. ಕಾವೇರಿಯಪ್ಪ ಅವರು, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ ಹಾಗೂ ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಂತಹ ಚುನಾವಣೆಗಳು ಮಹತ್ವದ್ದಾಗಿವೆ. ಗೆಲುವು ಸಾಧಿಸಿದ ವಿದ್ಯಾರ್ಥಿಗಳು ಸೋತ ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಕಾಲೇಜಿನ ಏಳಿಗೆಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲೆ ಪ್ರೊ. ಎಂ.ಎಸ್. ಭಾರತಿ, ಐಕ್ಯೂಎಸಿ ಸಂಚಾಲಕಿ ಡಾ. ನಯನಾ ತಮ್ಮಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಕೆ.ಎ. ಕವಿತ, ತರಗತಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಚುನಾವಣಾಧಿಕಾರಿಯಾಗಿ ಉಪನ್ಯಾಸಕ ವಿ.ಎಸ್. ಅಜಯ್ ಕುಮಾರ್, ಸಹ ಚುನಾವಣಾಧಿಕಾರಿಗಳಾಗಿ ಸಿ.ಎಂ. ಕಿರಣ್, ಎಸ್.ಎಂ. ರಜನಿ, ಡಾ. ಎಂ.ಸಿ. ಸೀಮಾ, ಕೆ.ಟಿ. ಸೀತಮ್ಮ, ಸಿ.ಸಿ. ಪೊನ್ನಮ್ಮ, ಅಕ್ಷತಾ ಸಿ, ವಚನ್ ಎಸ್.ಡಿ ಕಾರ್ಯನಿರ್ವಹಿಸಿದರು.