ಮಡಿಕೇರಿ, ಸೆ. ೨: ಕೊಡಗು ವಿದ್ಯಾಲಯದ ಎನ್.ಸಿ.ಸಿ ಕೆಡೆಟ್ ಗೋಲ್ಡನ್ ಸಾರ್ಜೆಂಟ್ ಜೇಷ್ಟ ಸುಬ್ಬಯ್ಯ ಎಂ.ಹೆಚ್ ಅಖಿಲ ಭಾರತ ತಲ್ ಸೈನಿಕ್ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ಈ ಶಿಬಿರವು ಆಗಸ್ಟ್ ೩೧ ರಿಂದ ಆರಂಭಗೊAಡಿದ್ದು, ಸೆಪ್ಟೆಂಬರ್ ೧೧ ರವರೆಗೆ ನವದೆಹಲಿಯಲ್ಲಿ ನಡೆಯಲಿದೆ. ಫೈರಿಂಗ್ (ಗ್ರೂಪಿಂಗ್) ವಿಭಾಗದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದಿಂದ ೩ ಕೆಡೆಟ್‌ಗಳು ಮಾತ್ರ ಆಯ್ಕೆಯಾಗಿದ್ದು, ಅದರಲ್ಲಿ ಜೇಷ್ಟ ಸುಬ್ಬಯ್ಯ ಒಬ್ಬರಾಗಿದ್ದಾರೆ.

ಕರ್ನಾಟಕದ ವಿವಿಧೆಡೆ ನಡೆದ ೭ ಆಯ್ಕೆ ಶಿಬಿರಗಳಲ್ಲಿ ಜೇಷ್ಟ ಸುಬ್ಬಯ್ಯ ಭಾಗವಹಿಸಿ, ಗ್ರೂಪಿಂಗ್ ಶೂಟಿಂಗ್ ಸ್ಪರ್ಧೆಯಲ್ಲಿ ೧.೨ ಸೆಂ.ಮೀ ಗ್ರೂಪಿಂಗ್ ಸಾಧನೆ ಮಾಡುವ ಮೂಲಕ ಈ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾನೆ ಎಂದು ಶಾಲಾ ಪ್ರಾಂಶುಪಾಲೆ ಸುಮಿತ್ರಾ ತಿಳಿಸಿದ್ದಾರೆ.

ಜೇಷ್ಟ ಸುಬ್ಬಯ್ಯ ಮರಗೋಡುವಿನ ಕೃಷಿಕ ಮಂಡಿರ ಎಂ.ವಿ. ಹರೀಶ್ ಮತ್ತು ವಿಮಾ ದಂಪತಿಯ ಪುತ್ರನಾಗಿದ್ದು ೧೯ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿಯ ಕೆಡೆಟ್ ಆಗಿದ್ದಾರೆ.