ಕೂಡಿಗೆ, ಸೆ. ೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್.ಆರ್ ಸುನಿಲ್ ರಾವ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಹಾಸನ ಹಾಲು ಒಕ್ಕೂಟದ ವಿಸ್ತಾರಣಾಧಿಕಾರಿ ಬಿ.ವಿ. ವೀಣಾ ಅವರು ಸಭೆಯನ್ನು ಉದ್ಘಾಟಿಸಿದರು. ಮೊದಲು ಸಭೆಯಲ್ಲಿ ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಿ, ನಂತರ ವಾರ್ಷಿಕ ಮಹಾಸಭೆ ಆಹ್ವಾನ ಪತ್ರಿಕೆ ಹಾಗೂ ಹಿಂದಿನ ಸಾಲಿನ ವಾರ್ಷಿಕ ಮಹಾಸಭೆ ವರದಿ ಓದಿ ಅಂಗೀಕರಿಸಲಾಯಿತು.

ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ ವೀಣಾ ಅವರು ಸಂಘದ ೨೦೨೫-೨೬ನೇ ಸಾಲಿನ ಆಡಿಟ್ ವರದಿ ವಾಚಿಸಿದರು. ಸಂಘದಲ್ಲಿ ಹಾಲಿನ ಶೇಖರಣಾ ಪ್ರಮಾಣ ಹೆಚ್ಚಿಸಲು ರೈತರು ಹೆಚ್ಚು ಹಾಲನ್ನು ಸಂಘಕ್ಕೆ ಹಾಕಬೇಕು. ಹಾಲಿನ ಗುಣಮಟ್ಟ ಕೂಡ ಮತ್ತಷ್ಟು ವೃದ್ಧಿಸಬೇಕಿದೆ. ಸಂಘದ ಅಭಿವೃದ್ಧಿಗೆ ಸದಸ್ಯರು ಹೆಚ್ಚಿನ ಸಹಕಾರ ಅಗತ್ಯವಿದೆ ಎಂದು ಈ ಸಂದರ್ಭ ಅವರು ಹೇಳಿದರು.

ಸಂಘದ ಅಧ್ಯಕ್ಷ ಎಸ್.ಆರ್ ಸುನಿಲ್ ರಾವ್ ಅಧ್ಯಕ್ಷತೆ ವಹಿಸಿ ಮಾತಾನಾಡಿ, ಸಂಘದ ಸದಸ್ಯರ ಸಹಕಾರದೊಂದಿಗೆ ಸಂಘದ ಅಭಿವೃದ್ಧಿ ಸಾಧ್ಯ, ಜೊತೆಯಲ್ಲಿ ಸದಸ್ಯರು ಗುಣಮಟ್ಟದ ಹಾಲನ್ನು ಸಂಘಕ್ಕೆ ಹಾಕುವುದರ ಮೂಲಕ ರೈತ ಸದಸ್ಯರ ಪ್ರಗತಿ ಮತ್ತು ಸಂಘದ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಉಪಾಧ್ಯಕ್ಷ ಬಿ.ಆರ್ ತಮ್ಮಯ್ಯ, ನಿರ್ದೇಶಕರಾದ ವೆಂಕಟನಾಯಕ್, ಹೆಚ್.ಆರ್.ಕೃಷ್ಣ, ಸುರೇಶ್ ವಿ.ಸಿ, ವಸಂತ ಬಿ.ಎ, ಮಂಜುಳಾ, ಗಾಯತ್ರಿ ಕೆ.ಕೆ, ಚಂದ್ರಿಕಾ, ದೇವೀರಮ್ಮ, ಗಿರಿಜಾ ವೈ.ಆರ್, ಮುಖ್ಯ ಕಾರ್ಯದರ್ಶಿ ಎಂ.ಎನ್. ಯೋಗೇಶ್ ಸ್ವಾಗತಿಸಿ, ವಂದಿಸಿದರು.