ಮಡಿಕೇರಿ, ಸೆ.೧; ಮಡಿಕೇರಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವ ಸಲುವಾಗಿ ನಗರ ಸಭೆ ವತಿಯಿಂದ ಕ್ರಮ ಕೈಗೊಳ್ಳಲಾಗಿದ್ದು, ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತç ಚಿಕಿತ್ಸೆ ಮಾಡುವ ಕಾರ್ಯ ಆರಂಭಿಸಲಾಗಿದೆ.
ಇಂದು ಬೆಳಿಗ್ಗೆಯಿಂದ ನಾಯಿಗಳನ್ನು ಹಿಡಿಯುವ ಕಾರ್ಯ ಆರಂಭವಾಗಿದ್ದು, ಮೈತ್ರಿ ಸಮುದಾಯ ಭವನದ ಬಳಿ ನಿರ್ಮಿಸಲಾಗಿರುವ ಶೆಡ್‌ನಲ್ಲಿ ಅವುಗಳಿಗೆ ಶಸ್ತç ಚಿಕಿತ್ಸೆ ಮಾಡಿ, ಅಲ್ಲಿಯೇ ಆರೈಕೆ ಮಾಡಿ ರೇಬೀಸ್ ಲಸಿಕೆ ನೀಡಿ ನಂತರ ಹಿಡಿದ ಜಾಗದಲ್ಲಿಯೇ ಮತ್ತೆ ಬಿಡುವ ಕಾರ್ಯ ನಡೆಯಲಿದೆ. ಉತ್ತರ ಕನ್ನಡ ಜಿಲ್ಲೆಯ ಸಿಬ್ಬಂದಿಗಳು ಈ ಕಾರ್ಯದಲ್ಲಿ ತೊಡಗಿದ್ದು. ಒಂದು ನಾಯಿಯ ಶಸ್ತç ಚಿಕಿತ್ಸೆಗೆ ರೂ.೧೪೩೦ ವೆಚ್ಚ ತಗುಲಲಿದ್ದು, ಇದನ್ನು ನಗರಸಭೆಯಿಂದ ಭರಿಸಲಾಗುತ್ತದೆ. ಎರಡು ತಿಂಗಳುಗಳ ಕಾಲ ಈ ಪ್ರಕ್ರಿಯೆ ನಡೆಯಲಿದ್ದು, ದಿನಕ್ಕೆ ೪೦ರಿಂದ ೫೦ ನಾಯಿಗಳನ್ನು ಹಿಡಿದು ಚಿಕಿತ್ಸೆ ಮಾಡಲಾಗುತ್ತದೆ ಎಂದು ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ ತಿಳಿಸಿದ್ದಾರೆ.