ಮಡಿಕೇರಿ, ಸೆ. ೧: ಕೊಡಗು ಜಿಲ್ಲೆಯಲ್ಲಿ ೨೦೨೫-೨೬ ಮತ್ತು ೨೦೨೬-೨೭ ಪ್ರಸ್ತುತ ದಿನಾಂಕದವರೆಗೆ ಒಟ್ಟು ೮೯೯ ಆಹಾರ ಮಾದರಿಗಳನ್ನು ಮೈಸೂರಿನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿದ್ದು. ೪ ಆಹಾರ ಮಾದರಿಯ ವಿಶ್ಲೇಷಣಾ ವರದಿಯೂ ಅಸುರಕ್ಷಿತ ಮತ್ತು ೨ ಆಹಾರ ಮಾದರಿಯ ವಿಶ್ಲೇಷಣಾ ವರದಿಯೂ ಕಡಿಮೆ ಗುಣಮಟ್ಟ ಎಂದು ವರದಿ ಬಂದಿದೆ.
ಅಸುರಕ್ಷಿತ ಆಹಾರ ಪದಾರ್ಥ ತಯಾರು/ ಮಾರಾಟ ಮಾಡುತ್ತಿರುವವರ ವಿರುದ್ಧ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಹಾಗೂ ಕಡಿಮೆ ಗುಣಮಟ್ಟದ ಆಹಾರ ಪದಾರ್ಥ ತಯಾರು, ಮಾರಾಟ ಮಾಡುತ್ತಿರುವವರ ವಿರುದ್ಧ ಅಪರ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯ ನಿರ್ಣಾಯಾಧಿಕಾರಿಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ೨೦೦೬ ನಿಯಮ ನಿಬಂಧನೆಗಳು -೨೦೧೧ ರ ಅನುಸಾರ ಸೆಕ್ಷನ್ ೫೧ ಮೊಕದ್ದಮೆ ದಾಖಲಿಸಿಲಾಗಿದೆ ಮತ್ತು ಆಹಾರ ಪದಾರ್ಥ ತಯಾರು, ಮಾರಾಟಗಾರರಿಗೆ ಅಪರ ಜಿಲ್ಲಾಧಿಕಾರಿ ಹಾಗೂ ನ್ಯಾಯ ನಿರ್ಣಾಯಾಧಿಕಾರಿಗಳು ಒಟ್ಟು ರೂ.೧೦ ಸಾವಿರ ದಂಡವನ್ನು ವಿಧಿಸಿದ್ದಾರೆ
ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಮಾರಾಟವಾಗುತ್ತಿರುವ ಸ್ಪೆöÊಸಸ್(ಮಸಾಲೆ ಪದಾರ್ಥಗಳು) ಹಾಗೂ ಚಾಕೊಲೇಟ್ಸ್ ಅಂಗಡಿಗಳು, ವ್ಯಾಪಾರ ಹಾಗೂ ಮಸಾಲೆ ಪದಾರ್ಥಗಳ ಮಾರಾಟ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ನಡೆಸುತ್ತಿರುವ ಘಟಕಗಳ ತಪಾಸಣೆ ನಡೆಸಿದಾಗ ಆಹಾರ ಪದಾರ್ಥಗಳಿಗೆ ಆಹಾರ ಪರವಾನಿಗೆ ಹಾಗೂ ಲೇಬಲಿಂಗ್ ನಿಯಮ ಪಾಲನೆ ಮಾಡದಿರುವುದು ಕಂಡು ಬಂದಿದ್ದು, ಸುಮಾರು ೧೭ ಅಂಗಡಿಗಳ ವಿರುದ್ಧ ಅಪರ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯ ನಿರ್ಣಾಯಾಧಿಕಾರಿಗಳು, ಸೆಕ್ಷನ್ ೫೨ ರಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ರೂ.೮೫ ದಂಡ ವಿಧಿಸಲಾಗಿದೆ.
ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕುಗಳಲ್ಲಿ ಸೆಕ್ಷನ್ ೫೬ ಮತ್ತು ಸೆಕ್ಷನ್ ೬೩ ರ ಅಡಿಯಲ್ಲಿ ಒಟ್ಟು ರೂ.೪೦ ಸಾವಿರ ದಂಡವನ್ನು ವಿಧಿಸಲಾಗಿದೆ. ಅಂಕಿತಾಧಿಕಾರಿಗಳ ನೋಟಿಸ್ ಮತ್ತು ಗ್ರಾಹಕರ ದೂರುಗಳಿಗೆ ಸಂಬAಧಪಟ್ಟAತೆ ೨೦೨೫-೨೬ ಮತ್ತು ೨೦೨೬-೨೭ ಪ್ರಸ್ತುತ ದಿನಾಂಕದ ವರೆಗೆ ಒಟ್ಟು ರೂ.೧ ಲಕ್ಷಕ್ಕೂ ಹೆಚ್ಚು ದಂಡ ವಿಧಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಂಕಿತ ಅಧಿಕಾರಿ ಡಾ.ಅನಿಲ್ ಧಾವನ್ ಇ. ತಿಳಿಸಿದ್ದಾರೆ.