ಮಡಿಕೇರಿ, ಸೆ. ೧: ಪಾರಾಣೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ನಿಂದ ಹಿರಿಯ ನಾಗರಿಕರಿಗೆ ಗೌರವ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ.ಎ. ಉಮ್ಮರ್, ನಿವೃತ್ತ ನಾಯಕ್ ಸುಬೇದಾರ್ ನಾಯಕಂಡ ಬೋಪಣ್ಣ ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು.
ಮಾತೃ ಭಾಷೆಯಾದ ಕನ್ನಡ ಮಾಧ್ಯಮದಲ್ಲಿ ಓದಿ ಸಮಾಜದಲ್ಲಿ ಉನ್ನತ ಹುದ್ದೆಯನ್ನು ಪಡೆಯಲು ಸಾಧ್ಯವಿದೆ. ಮನಸಿದ್ದರೆ ಮಾರ್ಗ ಎಂಬAತೆ ಪ್ರತಿಯೊಬ್ಬರು ಏಕಾಗ್ರತೆಯಿಂದ ಓದಿ ಉತ್ತಮ ನಾಗರೀಕರಾಗಿ ಸಂಸ್ಕಾರವAತ ಸಮಾಜ ನಿರ್ಮಾಣ ಮಾಡುವಂತೆ ಉಮ್ಮರ್ ಕರೆ ನೀಡಿದರು. ಹಿರಿಯರು ನಮ್ಮ ಕುಟುಂಬದ ನಾವಿಕರು. ಅವರ ಮಾತುಗಳಿಗೆ ನಾವು ಕಿವಿಯಾಗಬೇಕು. ಅವರನ್ನು ಗೌರವಿಸುವುದು, ಪ್ರೀತಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ವಿದ್ಯಾರ್ಥಿಗಳು ಹಿರಿಯರಿಗೆ ನುಡಿ ನಮನ ಸಲ್ಲಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಪರವಾಗಿ ಮಾತನಾಡಿದ ಡಾ.ಶುಭಾ ಕೆ.ಜಿ, ಶಿಕ್ಷಣ, ಆರೋಗ್ಯ, ಪ್ರಕೃತಿ ವಿಕೋಪದಂಥ ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ಸಕ್ರಿಯವಾಗಿ ಕಳೆದ ೨೨ ವರ್ಷಗಳಿಂದ ಪಾಲ್ಗೊಳ್ಳುತ್ತಿದೆ. ಇಂದಿನ ಮಕ್ಕಳು ನಮ್ಮ ಹಿರಿಯರಿಗೆ ಗೌರವ, ಪ್ರೀತಿ, ಸಮಯ ನೀಡಿ ಅವರ ಅನುಭವಗಳನ್ನು ನಮ್ಮ ಜೀವನ ಪಾಠವನ್ನಾಗಿ ಮಾಡಿಕೊಳ್ಳುವುದು ಅತ್ಯವಶ್ಯಕ ಎಂದು ಕರೆ ನೀಡಿದರು.
ಮುಖ್ಯ ಶಿಕ್ಷಕ ಕಿಶೋರ್, ಪಾರಾಣೆಯ ಸರಕಾರಿ ಹೋಮಿಯೋಪತಿ ಚಿಕಿತ್ಸಾಲಯದ ಡಾ.ಚಂದನ್ ಹಾಜರಿದ್ದರು.
ದೃಶ್ಯ, ನವ್ಯ, ದಿಶಾ ಪ್ರಾರ್ಥಿಸಿ, ಕಿಶೋರ್ ಸ್ವಾಗತಿಸಿ, ಕೆ.ವಿ. ಸಂಗೀತ ನಿರೂಪಿಸಿದರು.