ಆಗಸ್ಟ್ ೨೬ ರಂದು ನೇಪಾಳದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಹಸ್ರ ಮಂದಿ ಮೃತಪಟ್ಟಿದ್ದು, ಇನ್ನೂ ಸಹಸ್ರಾರು ಮಂದಿ ಪತ್ತೆಯಾಗಿಲ್ಲ. ಪ್ರವಾಹಕ್ಕೆ ನಿಖರ ಕಾರಣ ಹುಡುಕುವಲ್ಲಿ ವಿಜ್ಞಾನಿಗಳು, ಹವಾಮಾನ ತಜ್ಞರು ನಿರತರಾಗಿದ್ದು, ಈ ನಡುವೆ ಕೆಲ ಮಾಧ್ಯಮಗಳು, ಸಾಮಾಜಿಕ ಜಾಲತಣಗಳಲ್ಲಿ ವೈಜ್ಞಾನಿಕ ಪುರಾವೆಗಳಿಲ್ಲದ ಊಹಾಪೋಹಗಳನ್ನು ಸೃಷ್ಟಿಸಿ ಇವೇ ಪ್ರವಾಹಕ್ಕೆ ಕಾರಣ ಎಂದು ಬಿಂಬಿಸಲಾಗುತ್ತಿದೆ. ಕೆಲ ಮಾಧ್ಯಮಗಳಲ್ಲಿ ಚೀನಾ ದೇಶವು ನೀರು ಹರಿಸಿ ಪ್ರವಾಹ ಸೃಷ್ಟಿಸಿದ್ದಾಗಿಯೂ ಪ್ರಚಾರಪಡಿಸಲಾಗುತ್ತಿದೆ.
ಈ ನಡುವೆ ಯು.ಎಸ್ ಜಿಯೋಲಾಜಿಕ ಸರ್ವೆ ಇಲಾಖೆಯು ಉಪಗ್ರಹ ಚಿತ್ರಗಳು, ಭೂಕಂಪ ಮಾಪನ ಪರಿಕರ ಸೇರಿದಂತೆ ದಶಕಗಳಿಂದ ಈ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸಿದ್ದ ವರದಿಗಳ ಆಧಾರದಲ್ಲಿ ಪ್ರವಾಹ ಸಂಭವ ಸಂಬAಧಿಸಿದAತೆ ನಂಬಲರ್ಹವಾದ ವಿವರವೊಂದನ್ನು ನೀಡಿದೆ.
ವಿವರ ಇಂತಿದೆ:
ಹಿಮನದಿ ಕುಸಿತವೇ ಪ್ರವಾಹಕ್ಕೆ ಕಾರಣ ಎಂಬುದಾಗಿ ಯು.ಸ್ ಜಿಯಾಲಾಜಿಕಲ್ ಸರ್ವೆ ಹೇಳುತ್ತದೆ. ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದ ನೇಪಾಳದಲ್ಲಿ ೩ ಸಾವಿರಕ್ಕೂ ಅಧಿಕ ಬೃಹತ್ ಹಿಮನದಿ(ಗ್ಲೇಸಿಯರ್)ಗಳು ಕರಗುವ ಅಪಾಯವನ್ನು ಹೊಂದಿವೆ. ಪ್ರಸ್ತುತ ಹಿಮನದಿ ಕುಸಿದ ಸ್ಥಳವು ಯಾಲಾ ಹಿಮನದಿ ಪ್ರದೇಶ ಎಂದು ಗುರುತಿಸಲಾಗಿದೆ. ಈ ಯಾಲಾ ಹಿಮನದಿಯು ೧೯೭೦ ಇಸವಿಗೆ ಹೋಲಿಸಿದರೆ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಶೇ.೬೬ ರಷ್ಟು ಪ್ರಮಾಣದಲ್ಲಿ ಕರಗಿ ಹೋಗಿದೆ. ಕಳೆದ ದಶಕದಲ್ಲಿ ಈ ಕರಗುವಿಕೆ ವೇಗ ಪಡೆದಿದ್ದು, ಮೇ.೨೦೨೫ ರಲ್ಲಿ ಈ ಹಿಮನದಿಯನ್ನು ಅಧಿಕೃತವಾಗಿ ‘ನಶಿಸಿಹೋಗಿದೆ’ ಎಂದು ಪ್ರಕಟಿಸಲಾಗಿದೆ.
ಆಗಸ್ಟ್ ೨೬ ರಂದು ಕುಸಿದ ಹಿಮನದಿಯು ಯಾಲಾ ಪ್ರದೇಶದಿಂದ ಇನ್ನೂ ಎತ್ತರದಲ್ಲಿದ್ದು, ಪರ್ವತಕ್ಕೆ ಅಂಟಿಕೊAಡಿತ್ತು. ಕುಸಿದ ಈ ಹಿಮನದಿಯು ಒಂದೂವರೆ ಕಿ.ಮೀ ಅಗಲವಿತ್ತು. ಈ ಪ್ರದೇಶವು ಸಮುದ್ರ ಮಟ್ಟದಿಂದ ೧೬,೭೦೦ ಅಡಿ ಎತ್ತರದಲ್ಲಿದೆ. ೨೬ ರಂದು ಬೆಳಿಗ್ಗೆ ೧೦:೫೨ಕ್ಕೆ ಈ ಹಿಮನದಿ ಕೆಳಕ್ಕೆ ಕುಸಿದಿದೆ. ನೇಪಾಳವು ದಾಖಲೆಯ ಅತಿಹೆಚ್ಚು ತಾಪಮಾನವನ್ನು ಪ್ರಸ್ತುತ ಬೇಸಿಗೆಯಲ್ಲಿ ಅನುಭವಿಸುತ್ತಿದೆ. ಪ್ರಸ್ತುತ ಕುಸಿದ ಹಿಮನದಿಯ ಮೇಲೆ ಜನವರಿ ತಿಂಗಳಿನಲ್ಲಿ ಹಿಮಪಾತವಾಗಿತ್ತು. ನೇರ ಸೂರ್ಯನ ಕಿರಣಗಳು ಎಷ್ಟೇ ಪ್ರಮಾಣದಲ್ಲಿ ಹಿಮನದಿಯ ಮೇಲಿನ ಈ ಹಿಮದ ಮೇಲೆ ಬಿದ್ದರೂ ಬಿಳಿಯ ಬಣ್ಣದ ಈ ಹಿಮವು ಆಗಸಕ್ಕೆ ಅದನ್ನು ಪ್ರತಿಬಿಂಬಿಸುತ್ತದೆ(ಬಿಳಿ ಬಣ್ಣವು ಅತಿಹೆಚ್ಚು ಪ್ರಮಾಣದಲ್ಲಿ ಪ್ರತಿಬಿಂಬಿಸುವ ಗುಣ ಹೊಂದಿದೆ), ಇದರಿಂದಾಗಿ ದಟ್ಟ ಹಿಮದಡಿಯ ಹಿಮನದಿಯು ಕರಗದೆ ಸುರಕ್ಷಿತವಾಗಿತ್ತು. ಆದರೆ ಈ ಬಾರಿಯ ಬೇಸಿಗೆಯ ಹೆಚ್ಚಿನ ತಾಪಮಾನಕ್ಕೆ ಹಿಮನದಿಯ ಮೇಲಿದ್ದ ದಟ್ಟವಾದ ಹಿಮವು ಕರಗಿದೆ. ಕಲ್ಲುಬಂಡೆಯAತಿರುವ ಗಟ್ಟಿ ಪದರ ಹೊಂದಿರುವ ಹಾಗೂ ಸ್ವಲ್ಪ ಬೂದು ಬಣ್ಣದಲ್ಲಿರುವ ಹಿಮನದಿಯು ಈ ಕಾರಣದಿಂದ ನೇರವಾಗಿ ಸೂರ್ಯನ ಕಿರಣಕ್ಕೆ ಗುರಿಯಾಗಿದೆ. ಬೂದು ಬಣ್ಣ ಬಿಳಿ ಬಣ್ಣದಂತೆ ಕಿರಣವನ್ನು ಪ್ರತಿಬಿಂಬಿಸದ ಕಾರಣ ಹೆಚ್ಚು ಕಿರಣಗಳನ್ನು ಹೀರಿಕೊಂಡು ಬಿಸಿಯಾದ ಹಿಮನದಿಯು ಕರಗಿ ಕುಸಿದು ಬಿದ್ದಿದೆ. (ಜನವರಿಯ ಚಳಿಗಾಲದಲ್ಲಿ ತೆಗೆದಿದ್ದ ಉಪಗ್ರಹ ಚಿತ್ರಗಳನ್ನು ಗಮನಿಸಿದರೆ, ಹಿಮನದಿ ಮೇಲೆ ಬಿದ್ದಿರುವ ಹಿಮಪಾತದ ಹಿಮವು ಚದುರಿ ಹೋದಂತಿದೆ. ಇದಕ್ಕೆ ಹಲವಾರು ಕಾರಣಗಳಿದ್ದು, ಸಣ್ಣ ಪ್ರಮಾಣದ ಕಂಪನ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ, ಈ ಕಂಪನ ಜನವರಿಯಲ್ಲಿ ಆಗಿರಬಹುದು ಹೊರತು ಆಗಸ್ಟ್ನಲ್ಲಿ ಅಲ್ಲ).
ಕುಸಿದು ಬಿದ್ದ ಒಂದೂವರೆ ಕಿ.ಮೀ ಅಗಲದ ಹಿಮನದಿಯು ೧೬,೭೦೦ ಅಡಿ ಎತ್ತರದಿಂದ ಈ ಹಿಂದೆ ಅದರ ಕೆಳಗಿದ್ದ ಯಾಲಾ ಹಿಮನದಿಯ ಪ್ರದೇಶಕ್ಕೆ ಬಿದ್ದಿದೆ. ಯಾಲಾ ಹಿಮನದಿ ಕರಗುವಿಕೆಯಿಂದ ಆ ಪ್ರದೇಶದಲ್ಲಿ ಬಾಕಿ ಉಳಿದಿದ್ದ ಹೂಳು, ಮಣ್ಣು ಎಲ್ಲವನ್ನು ಒಂದೂವರೆ ಕಿ.ಮೀ ಅಗಲದ ಕುಸಿದ ಈ ಹಿಮನದಿ ಚದುರಿಸಿದೆ. ನಂತರ ಸುಮಾರು ೫.೪ ಕಿ.ಮೀ ದೂರದ ಪರ್ವತಗಳ ನಡುವಿನ ಕಣಿವೆಯಲ್ಲಿ ಜಾರಿ ಸರಿದ ಹಿಮನದಿಯು ಇಷ್ಟು ದೂರ ಚಲಿಸುವಷ್ಟರಲ್ಲಿ ತನ್ನ ಮೂಲ ಎತ್ತರ ೧೬,೭೦೦ ಅಡಿಯಿಂದ ಸುಮಾರು ೯,೦೦೦ ಅಡಿ ಎತ್ತರಕ್ಕೆ, ಅಂದರೆ ೭ ಸಾವಿರ ಅಡಿಯಷ್ಟು ಕುಸಿದಿದೆ. ಪರಿಣಾಮ ಹಿಮನದಿ ಬಹುತೇಕ ಕರಗಿ ೫.೪ ಕಿ.ಮೀ ದೂರದಲ್ಲಿನ ನೀರಿನ ನದಿಯನ್ನು ಸೇರಿದೆ.
ಸಾಧಾರಣವಾಗಿ ಹಿಮಾಲಯ ಕಣಿವೆಯಲ್ಲಿನ ಬೃಹತ್ ಪರ್ವತಗಳ ಇಳಿಜಾರಿನಲ್ಲಿ ಕಿಷ್ಕಿಂದೆಯAತೆ ಹರಿಯುತ್ತಿದ್ದ ನದಿಗೆ ಒಂದೂವರೆ ಕಿ.ಮೀ ಅಗಲ ಹಿಮನದಿಯ ನೀರು ಕ್ಷಣಾರ್ಧದಲ್ಲಿ ಸೇರಿರುವುದೇ ದಿಢೀರ್ ಪ್ರವಾಹಕ್ಕೆ ಕಾರಣವಾಗಿದೆ. ಪರ್ವತಗಳ ನಡುವಿನ ಕಣಿವೆಯಲ್ಲಿ ನದಿಯ ನೀರು ಸಾಧಾರಣ ಮಟ್ಟಕ್ಕಿಂತ ೩೦೦ ಅಡಿ ಏರಿಕೆಯಾಗಿದೆ..!
೩೦೦ ಅಡಿಯ, ಸುನಾಮಿ ಅಲೆಗಿಂತಲೂ ಭಯಂಕರವಾದ ನೀರು ಕೆಲವೇ ನಿಮಿಷಗಳಲ್ಲಿ ಕುಸಿತ ಸಂಭವಿಸಿದ ಸ್ಥಳದಿಂದ ೨೧ ಕಿ.ಮೀ ದೂರದಲ್ಲಿ ನದಿಯ ಬದಿಯಲ್ಲೇ ಇದ್ದ ಚೀನಾ-ನೇಪಾಳ್ ಚೆಕ್‌ಪೋಸ್ಟ್ ಅನ್ನು ತಲುಪಿದೆ. ಈ ಚೆಕ್‌ಪೋಸ್ಟ್ ಸಮುದ್ರ ಮಟ್ಟದಿಂದ ೬ ಸಾವಿರ ಅಡಿ ಎತ್ತರದಲ್ಲಿತ್ತು. ಇಲ್ಲಿಗೆ ಹಿಮನದಿಯ ನೀರು ತಲುಪಲು ತನ್ನ ಮೂಲ ಎತ್ತರ ೧೬,೭೦೦ ಅಡಿಯಿಂದ ೬,೦೦೦ ಅಡಿ-ಅಂದರೆ ೧೦ ಸಾವಿರಕ್ಕೂ ಮಿಗಿಲು ಅಡಿ ಕುಸಿದಿದೆ.
ಕೇವಲ ೨೧ ಕಿ.ಮೀ ದೂರ ಚಲಿಸುವಷ್ಟರಲ್ಲಿ ನೀರು (ಕರಗಿದ ಹಿಮನದಿ) ೧೦,೦೦೦ ಅಡಿ ಇಳಿದಿದೆ(ಅತಿ ಹೆಚ್ಚು ಇಳಿಜಾರು). ೭ ನಿಮಿಷಗಳಲ್ಲಿ ಇದು ಸಂಭವಿಸಿದ್ದು, ಗಂಟೆಗೆ ೧೬೮ ಕಿ.ಮೀ ವೇಗದಲ್ಲಿ ನೀರು ಹರಿದ ಪರಿಣಾಮ ಚೆಕ್‌ಪೋಸ್ಟ್ನ ವ್ಯಾಪ್ತಿಯೇ ಸರ್ವನಾಶವಾಗಿದೆ. (ಹೋಲಿಕೆಗೆ: ಕಾವೇರಿಯು ಕೇವಲ ಸಮುದ್ರ ಮಟ್ಟದಿಂದ ೪,೦೦೦ ಅಡಿ ಎತ್ತರದಿಂದÀ ಬಂಗಾಳ ಕೊಲ್ಲಿ ತಲುಪಲು ೮೦೦ ಕಿ.ಮೀ ನಷ್ಟು ದೂರ ಹರಿಯಬೇಕು, ಅಂದರೆ ಇಳಿಜಾರು ಬಹಳ ಕಡಿಮೆ)
ಈ ಚೆಕ್‌ಪೋಸ್ಟ್ ನಾಶಪಡಿಸಿ ಕೆಳಕ್ಕೆ ಸಾಗಿದ ನೀರು ಹಿಮನದಿ ಕುಸಿತದಿಂದ ೭೨ ಕಿ.ಮೀ ಚಲಿಸಿದ ಬಳಿಕವೂ ನದಿ ದಂಡೆಯ ಪ್ರದೇಶಗಳು, ಸೇತುವೆಯನ್ನು ಸಂಹರಿಸಿದೆ. ಜಾಗತಿಕ ತಾಪಮಾನ ಏರಿಕೆಯಿಂದ ಭೂಮಿಯ ಉತ್ತರ-ದಕ್ಷಿಣ ಧ್ರುವಗಳಲ್ಲಿನ ಹಿಮನದಿಗಳು ಕರಗುತ್ತಿದ್ದು ಸಮುದ್ರ ಮಟ್ಟ ಏರಿಕೆಗೆ ಕಾರಣವಾಗಿವೆ. ಹಿಮಾಲಯದಂತಹ ಎತ್ತರ ಪ್ರದೇಶದಲ್ಲಿ ಹಿಮನದಿ ಕರಗಿದಲ್ಲಿ ಗಣನೀಯ ಪ್ರಮಾಣದಲ್ಲಿ ನದಿಗೆ ನೀರು ಸೇರಿ ಪ್ರವಾಹ ಸೃಷ್ಟಿಸುತ್ತದೆ.
ನೇಪಾಳ ದುರಂತದಲ್ಲಿ ಹಿಮಾಲಯದಂತಹ ಸೂಕ್ಷö್ಮ ಪ್ರದೇಶದಲ್ಲಿರುವ ದಶ ಸಾವಿರ ಸಂಖ್ಯೆಯಲ್ಲಿನ ಹಿಮನದಿಗಳ ಪೈಕಿ ಕರಗಿ ಬಿದ್ದಿದ್ದು ಕೇವಲ ಒಂದು ಹಿಮನದಿ..! ನೇಪಾಳ ರಾಷ್ಟç ಒಂದರಲ್ಲೇ ೩ ಸಾವಿರಕ್ಕೂ ಅಧಿಕ ಹಿಮನದಿಗಳು ಕರಗುವ ಭೀತಿ ಎದುರಿಸುತ್ತಿವೆ..!
-ಪಿ.ಜಿ.ಆರ್