ಮಡಿಕೇರಿ, ಆ. ೩೧: ಪುಣೆಯ ಪಿಡಿಎಮ್‌ಬಿಎ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಆಗಸ್ಟ್ ೨೫ ರಿಂದ ೩೦ ರವರೆಗೆ ನಡೆಸಲಾದ ಯೋನೆಕ್ಸ್ ಸನ್ ರೈಸ್ ಇಂಡಿಯ ಜೂನಿಯರ್ ಇಂಟರ್‌ನ್ಯಾಷನಲ್ ಗ್ರ‍್ಯಾಂಡ್ ಪ್ರಿ ಬ್ಯಾಡ್ಮಿಂಟನ್ ನಲ್ಲಿ ಟೂರ್ನಿಯ ನಾಲ್ಕನೇ ಶ್ರೇಯಾಂಕಿತ ಕೊಡಗಿನ ದಿಯಾ ಭೀಮಯ್ಯ ಬಾಲಕಿಯರ ಡಬಲ್ಸ್ ನಲ್ಲಿ ತೆಲಂಗಾಣದ ಕೀರ್ತಿ ಮಂಚಾಲ ಜೊತೆಗೂಡಿ ಬೆಳ್ಳಿಯ ಪದಕ ಗಳಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಅವರು ಥೈಲ್ಯಾಂಡ್‌ನ ಚಾಂತ್ರಾತ್ ಮರ್ಡಾಂಕುಲ್ ಮತ್ತು ಪೀರ್ಪ್ಲಾಯಿ ಸುಟ್ಟಿವಾರಯನೊನ್ ಜೋಡಿ ಎದುರು ೧೫-೨೧, ೧೧-೨೧ ಅಂಕಗಳಿAದ ಸೋಲು ಅನುಭವಿಸಿದರು. ಈ ಮೂಲಕ ಬೆಳ್ಳಿ ಪದಕಕ್ಕೆ ಭಾಜನರಾದರು. ಟೂರ್ನಿಯಲ್ಲಿ ಭಾರತ ಒಡಗೂಡಿ ಇಂಡೊನೇಷಿಯ, ಮಲೇಶಿಯಾ , ಥೈಲ್ಯಾಂಡ್, ಯು.ಎಸ್.ಎ, ಯು.ಎ.ಇ,ದೇಶದ ಆಟಗಾರರು ಭಾಗವಹಿಸಿದ್ದರು. ೧೯ ವರ್ಷ ವಯೋಮಿತಿಯ ಜೂನಿಯರ್ ವಿಭಾಗದಲ್ಲಿ ದಿಯಾ ಅವರು ಗಳಿಸಿದ ನಾಲ್ಕನೆಯ ಅಂತರರಾಷ್ಟಿçÃಯ ಪದಕ ಇದಾಗಿದೆ. ಈ ಮೊದಲು ನೇಪಾಳದಲ್ಲಿ ನಡೆದ ನೇಪಾಳ ಇಂಟರ್ನ್ಯಾಷನಲ್ ಸೀರಿಸ್ ೨೦೨೪ ರಲ್ಲಿ ಬಾಲಕಿಯರ ವಿಭಾಗದ ಡಬಲ್ಸ್ ನಲ್ಲಿ ಬೆಳ್ಳಿಯ ಪದಕ ಮತ್ತು ಸಿಂಗಲ್ಸ್ ನಲ್ಲಿ ಕಂಚಿನ ಪದಕ ಗಳಿಸಿದ್ದರು ಇತ್ತೀಚಿಗೆ ನಡೆದ ಕೊಟಕ್ ಇಂಡಿಯ ಜೂನಿಯರ್ ಇಂಟರ್ನ್ಯಾಷನಲ್ ಸೀರಿಸ್ ೨೦೨೬ ರಲ್ಲಿ ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದರು. ದಿಯಾ ಅವರು ಮಡಿಕೇರಿ ನಿವಾಸಿ ಬೊಪ್ಪಂಡ ಭೀಮಯ್ಯ - ಕುಸುಮ ದಂಪತಿಯ ಪುತ್ರಿ.