ಗೋಣಿಕೊಪ್ಪಲು, ಆ. ೩೦: ಗೋಣಿಕೊಪ್ಪ ರೋಟರಿ ಕ್ಲಬ್ ಸದಸ್ಯರು ಪಾಲಿಬೆಟ್ಟದಲ್ಲಿರುವ ಚೈಷರ್ ಹೋಂಗೆ ಭೇಟಿ ನೀಡಿ ಅಲ್ಲಿನ ವಿಶೇಷಚೇತನ ಮಕ್ಕಳಿಗೆ ಅಗತ್ಯವಿರುವ ಆಹಾರ ಸಾಮಗ್ರಿಗಳು, ವಿದ್ಯಾಭ್ಯಾಸಕ್ಕೆ ಬೇಕಾದ ಪುಸ್ತಕಗಳನ್ನು ವಿತರಿಸಿದರು.
ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ಎಂ.ಪಿ. ಪ್ರಮೋದ್ ಕಾಮತ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಚೈಷರ್ ಹೋಂನ ಮಕ್ಕಳು ನೃತ್ಯ ಪ್ರದರ್ಶಿಸುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಮಕ್ಕಳನ್ನು ಪಾಲನೆ ಮಾಡುತ್ತಿರುವ ಚೈಷರ್ ಹೋಂನ ಪ್ರಮುಖರಾದ ಗೀತಾ ಮಾತನಾಡಿ, ರೋಟರಿ ಸಂಸ್ಥೆಯ ಸಹಾಯ ಹಸ್ತವನ್ನು ಶ್ಲಾಘಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಪ್ರಮೋದ್ ಕಾಮತ್ ಮಾತನಾಡಿ, ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿಯೂ ಚೈಷರ್ ಹೋಂಗೆ ಅಗತ್ಯ ಸಹಾಯವನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ನಿರ್ವಾಹಕ ಶಿವರಾಜ್ ಸ್ವಾಗತಿಸಿ, ವಂದಿಸಿದರು.
ರೋಟರಿ ಕ್ಲಬ್ ಸದಸ್ಯರಾದ ಕೆ.ಎಂ. ಕಾವೇರಪ್ಪ, ಮಾಚಯ್ಯ, ಕೆ.ಬಿ. ನವೀನ್, ಅರುಣ್ ಪಿ.ಆರ್., ವಿಜಯ್ ರಾಜೀವ್, ಸರಿನಾ, ಸುಭಾಷಿಣಿ, ಪವಿತ್ರ, ನಿರ್ಮಲಾ, ಸಜನ್ ಚಂಗಪ್ಪ ಹಾಗೂ ಸುಷ್ಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.