ಕೊಯನಾಡು, ಆ. ೩೦: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ೧೫೦೧ನೇ ಜನ್ಮದಿನಾಚರಣೆಯ ಪ್ರಯುಕ್ತ ಯೂತ್ ಫ್ರೆಂಡ್ಸ್ ಕೊಯನಾಡು ವತಿಯಿಂದ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಸಾರ್ವಜನಿಕ ಸೇವೆಯ ಉದ್ದೇಶದಿಂದ ಆಯೋಜಿಸಿದ್ದ ಶಿಬಿರಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನ ದೊರೆಯಿತು. ರಕ್ತದಾನ ಶಿಬಿರದಲ್ಲಿ ೩೦ ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ೫೫ ಮಂದಿ ಭಾಗವಹಿಸಿ ತಪಾಸಣೆಯ ಪ್ರಯೋಜನ ಪಡೆದರು. ಹಿಜಾಮಾ ಶಿಬಿರದಲ್ಲಿ ೨೮ ಮಂದಿ ಪಾಲ್ಗೊಂಡು ಸೇವೆಯ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಊರಿನ ಸಾರ್ವಜನಿಕರು, ಸರ್ವ ಜಮಾಅತ್ ಸದಸ್ಯರು, ಹಿರಿಯರು, ಪೋಷಕರು, ಮಕ್ಕಳು ಹಾಗೂ ಯುವಕರು ಸೇರಿದಂತೆ ಹಲವರು ಉಪಸ್ಥಿತರಿದ್ದು ಶಿಬಿರಕ್ಕೆ ಸಹಕಾರ ನೀಡಿದರು.