ಮಡಿಕೇರಿ, ಆ.೩೦: ಹೊಸ ತಂತ್ರಜ್ಞಾನದ, ನವನವೀನ ಆವಿಷ್ಕಾರದ ಇಂದಿನ ದಿನಗಳಲ್ಲಿ ನಮ್ಮ ಪ್ರಾಚೀನ ಸಂಸ್ಕೃತಿ, ಆಚರಣೆೆಯನ್ನು ಮರೆಯದೇ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಗರದ ವೈದ್ಯ, ಸಾಹಿತಿ ಡಾ. ನಡಿಬೈಲು ಉದಯಶಂಕರ್ ಕರೆ ನೀಡಿದರು.

ನಗರದ ಶ್ರೀ ಲಕ್ಷಿö್ಮ ನರಸಿಂಹ ಕಲ್ಯಾಣ ಮಂಟಪದಲ್ಲಿ ಶೃತಿಲಯ ತಂಡದಿAದ ಕೊಡಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಸಹಯೋಗದಲ್ಲಿ ಆಯೋಜಿತವಾದ ಶ್ರೀ ರಾಘವೇಂದ್ರ ಆರಾಧನೆ, ವಿಶ್ವಸಂಗೀತ ದಿನದ ಅಂಗವಾಗಿ ದಾಸರ ಕೀರ್ತನೆ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಾಸ ಪರಂಪರೆ ಈ ನಾಡಿನಲ್ಲಿ ಶ್ರೀಮಂತವಾಗಿದೆ. ಎಂತಹ ಸಂಕಷ್ಟ, ಸವಾಲು ಎದುರಾದರೂ ದೇವರು ನಮ್ಮನ್ನು ಸುರಕ್ಷಿತವಾಗಿ ಇರಿಸುತ್ತಾನೆ ಎಂಬ ನಂಬಿಕೆಯನ್ನು ದಾಸ ಪರಂಪರೆ ಸೃಷ್ಟಿಸಿದೆ ಎಂದು ಅವರು ಹೇಳಿದರು.

ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ರಾಮಚಂದ್ರ ಮೂಗೂರು ಮಾತನಾಡಿ, ಕಲೆ, ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಇಂತಹ ಕಾರ್ಯಕ್ರಮಗಳಿಗೆ ಸಹಯೋಗ ನೀಡುತ್ತದೆ ಎಂದರು.

“ಶಕ್ತಿ'' ಸಂಪಾದಕರಾದ ಜಿ. ಚಿದ್ವಿಲಾಸ್ ಮಾತನಾಡಿ, ನಮ್ಮೊಳಗಿನ ನೋವು, ಸಂಕಟವನ್ನು ಮರೆಸುವಂತಹ ಶಕ್ತಿ ಸಂಗೀತ ಪ್ರಾಕಾರಕ್ಕಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅಂದಿನ ಕಾಲದಲ್ಲಿಯೇ ಹರಿದಾಸರು ಭಕ್ತಿ ಸಂಗೀತದ ಮೂಲಕ ಸಮಾಜದಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ಸೃಷ್ಟಿಗೆ ಕಾರಣರಾಗಿದ್ದರು ಎಂದರು.

ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಹೆಚ್ಚಿನ ಕಲಾವಿದರು ಸಕ್ರಿಯರಾಗಿ ಜಿಲ್ಲೆಯಲ್ಲಿ ಕಲಾಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿದ್ದರೂ ಜಿಲ್ಲಾ ಕೇಂದ್ರ ಮಡಿಕೇರಿ, ತಾಲೂಕು ಕೇಂದ್ರಗಳಲ್ಲಿ ಕಲಾವಿದರಿಗೆ ಉತ್ತಮ ಗುಣಮಟ್ಟದ ಸರ್ಕಾರಿ ಕಲಾಭವನ ಇನ್ನೂ ದೊರಕದೇ ಇರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ಕಲಾವಿದರೆಲ್ಲರೂ ಒಗ್ಗಟ್ಟಾಗಿ ಸರ್ಕಾರದ ಗಮನ ಸೆಳೆದು ಉತ್ತಮ ಕಲಾಭವನ ಶೀಘ್ರವಾಗಿ ದೊರಕುವಂತೆ ಮಾಡಬೇಕಾಗಿದೆ ಎಂದರು.

ಶೃತಿಲಯ ತಂಡದ ಅಧ್ಯಕ್ಷೆ ವೀಣಾ ಎಸ್. ಹೊಳ್ಳ ಮಾತನಾಡಿ, ೭ ವರ್ಷಗಳ ಹಿಂದೆ ೪ ಮಹಿಳೆಯರಿಂದ ಆರಂಭವಾದ ಶೃತಿಲಯ ತಂಡ ಇಂದು ೧೩ ಮಹಿಳೆಯರೊಂದಿಗೆ ಜಿಲ್ಲೆ ಮಾತ್ರ ಅಲ್ಲದೆ ರಾಜ್ಯದ ವಿವಿಧೆಡೆ ಸಂಗೀತದ ಅನೇಕ ಕಾರ್ಯಕ್ರಮ ನೀಡುತ್ತಾ ಬಂದಿದೆ ಈ ಮೂಲಕ ಯುವಪೀಳಿಗೆಯಲ್ಲಿ ಸಂಗೀತದ ಅಭಿರುಚಿ ಉಂಟುಮಾಡಿದ ತೃಪ್ತಿ ತಂದಿದೆ ಎಂದರು.

ಗೀತಾ ಸಂಪತ್ ಕುಮಾರ್, ಲಕ್ಷಿö್ಮ ಈಶ್ವರ ಭಟ್, ಸ್ವಾತಿ ಅರುಣ್, ತನುಶ್ರೀ ರಾವ್, .ಚೈತ್ರ ಗುರುಪ್ರಸಾದ್ ಪ್ರಾರ್ಥಿಸಿ, ಸವಿತಾ ಗುರುಪ್ರಸಾದ್ ಸ್ವಾಗತಿಸಿ, ಡಾ.ಗಾಯತ್ರಿ ದೇವಿ ನಿರೂಪಿಸಿ, ಮಮತಾ ಶಾಸ್ತಿç ವಂದಿಸಿದರು. ಉದ್ಘಾಟನಾ ಕಾರ್ಯಕ್ರಮದ ಸಂದರ್ಭ ಹಿರಿಯ ಕಲಾವಿದರಾದ ಜಿ. ಚಿದ್ವಿಲಾಸ್ ಮತ್ತು ಸಂಧ್ಯಾ ಚಿದ್ವಿಲಾಸ್ ಭಕ್ತಿಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿತ ದಾಸರ ಕೀರ್ತನೆ ಕಾರ್ಯಕ್ರಮದಲ್ಲಿ ಜಿಲ್ಲೆಯ ೧೫ ತಂಡಗಳು ಪಾಲ್ಗೊಂಡಿದ್ದವು.

ಶ್ರೀ ವಿನಾಯಕ ಸೇವಾ ಟ್ರಸ್ಟ್ ಕತ್ತಲೆಕಾಡು. ಜಯಲಕ್ಷಿö್ಮ ಕೆ ಮತ್ತು ತಂಡ. ಮಡಿಕೇರಿ., ಆರ್ಯ ವೈಷ್ಯ ಭಜನಾ ತಂಡ, ಕುಶಾಲನಗರ, ವಿಜಯ ವಿನಾಯಕ ತಂಡ, ಮಡಿಕೇರಿ. ದೇವರಕೊಲ್ಲಿ ಭಜನಾ ತಂಡ, ಭಗವತಿ ವಿಪ್ರ ಮಹಿಳಾ ಸಂಘ, ಗೋಣಿಕೊಪ್ಪ, ಮೇಘಾ ಭಟ್ ಮತ್ತು ತಂಡ, ಮಡಿಕೇರಿ. ಕೋದಂಡ ರಾಮ ಭಜನಾ ತಂಡ. ಮಡಿಕೇರಿ, ಪ್ರಜ್ಞಾ ಕಲಾ ಕೇಂದ್ರ ಮಡಿಕೇರಿ, ಶ್ರೀ ವತ್ಸ ಸಂಘ, ಮಡಿಕೇರಿ, ಕನ್ನಿಕಾ ಪರಮೇಶ್ವರಿ ತಂಡ ಮಡಿಕೇರಿ., ನೃತ್ಯ ಭಜನೆ ತಂಡ ಉಡುವತ್ ಮೊಟ್ಟೆ (ಎ ), ನೃತ್ಯ ಭಜನೆ ತಂಡ ಉಡುವತ್‌ಮೊಟ್ಟೆ(ಬಿ), ರಾಮಾಂಜನೇಯ ಭಜನಾ ಮಂಡಳಿ ಮಹಿಳೆಯರ ತಂಡ , ರಾಮಾಂಜನೇಯ ಭಜನಾ ಪುರುಷರ ತಂಡ, ಮಡಿಕೇರಿ ದಿನವಿಡೀ ದಾಸರಕೀರ್ತನೆಯ ವೈಭವ ಕಂಡುಬAತು.