ಭಾಗಮಂಡಲ, ಆ. ೩೦: ಸಣ್ಣಗೆ ಜಿನುಗುತ್ತಿದ್ದ ಮಳೆ.. ನಡುನಡುವೆ ಕಾಣಿಸಿಕೊಂಡ ಬಿಸಿಲು.. ಎಳಿರಾ ..ಬಲಿರಾ.. ಎಂಬ ಕ್ರೀಡಾಭಿಮಾನಿಗಳ ಹರ್ಷೋದ್ಘಾರಗಳು.. ಇವುಗಳ ನಡುವೆ ಎರಡು ದಿನಗಳ ಕಾಲ ಅಯ್ಯಂಗೇರಿಯ ಗೌಡ ಯುವ ಒಕ್ಕೂಟದ ವತಿಯಿಂದ ನಡೆದ ಪ್ರಥಮ ವರ್ಷದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಕ್ರೀಡಾಪ್ರೇಮಿಗಳನ್ನು ರಂಜಿಸಿತು. ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲಿ ಜರುಗಿದ ಕ್ರೀಡಾಕೂಟವನ್ನು ಉದ್ಘಾಟಿಸಿದ ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡಾ ಉತ್ಸವಗಳು ರಾಜರ ಕಾಲದಿಂದಲೇ ಪ್ರಖ್ಯಾತಿ ಪಡೆದಿದ್ದು, ಇಂದಿಗೂ ಗ್ರಾಮೀಣ ಕ್ರೀಡೆಗಳು ಅಲ್ಲಲ್ಲಿ ಜರುಗಿ ಕ್ರೀಡಾ ಪ್ರೇಮಿಗಳನ್ನು ಸೆಳೆಯುತ್ತಿವೆ. ಇವತ್ತಿನ ಕಾಲಘಟ್ಟದಲ್ಲಿ ಜನರು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಕ್ರೀಡೆಗಳು ಮುಖ್ಯ ಎಂದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವಿಕೆ ಮುಖ್ಯ ಎಲ್ಲವನ್ನು ಧನಾತ್ಮಕವಾಗಿ ತೆಗೆದುಕೊಂಡು ಯುವ ಜನರು ಸಂಭ್ರಮಿಸಬೇಕು ಎಂದರು.

ಬಳಿಕ ವಿವಿಧ ಕ್ರೀಡಾಕೂಟಗಳು ಜರುಗಿದವು. ಓಟದ ಸ್ಪರ್ಧೆಯಲ್ಲಿ ಎಲ್‌ಕೆಜಿ ಮತ್ತು ಒಂದನೇ ತರಗತಿ ಬಾಲಕರ ವಿಭಾಗದಲ್ಲಿ ಬೊಳ್ಳುಮಾನಿ ಕಹನ್ ಪ್ರಥಮ ಸ್ಥಾನವನ್ನು, ನವದೀಪ್ ದ್ವಿತೀಯ ಸ್ಥಾನವನ್ನು, ಕಾವೇರಿಮನೆ ಅನ್ವಿತ ತೃತೀಯ ಸ್ಥಾನವನ್ನು ಪಡೆದರು. ಬಾಲಕಿಯರ ವಿಭಾಗದಲ್ಲಿ ನಿಶ್ಚಿತ ಪ್ರಥಮ, ತನ್ವಿಕ ದ್ವಿತೀಯ ಸ್ಥಾನವನ್ನು ಪಡೆದರು. ೨-೪ ವಯೋಮಿತಿಯ ಬಾಲಕರ ವಿಭಾಗದಲ್ಲಿ ಮುರಳಿ ಕುಯ್ಯಮುಡಿ ಪ್ರಥಮ, ಗಾಯನ್ ಕಾವೇರಿಮನೆ ದ್ವಿತೀಯ ಸ್ಥಾನವನ್ನು ಹಾಗೂ ಚಿಂಗಾAಡ ಗಾನವ್ ತೃತೀಯ ಸ್ಥಾನವನ್ನು ಪಡೆದರು. ಬಾಲಕಿಯರ ವಿಭಾಗದಲ್ಲಿ ವರ್ಷಿಣಿ ಬೆಳ್ಳಿಪಾಡಿ ಪ್ರಥಮ, ಚೈತನ್ಯ ಕುದುಪಜೆ ದ್ವಿತೀಯ, ಯಶಸ್ವಿನಿ ಸುಳ್ಯಕೊಡಿ ತೃತೀಯ ಸ್ಥಾನ ಗಳಿಸಿದರು.

೫-೭ ವಯೋಮಿತಿಯ ಬಾಲಕರ ವಿಭಾಗದಲ್ಲಿ ಸ್ವಾತಿ ಪ್ರಥಮ, ಆಶಿತ್ ಶಿರಕಜೆ ದ್ವಿತೀಯ ಸ್ಥಾನವನ್ನು, ಚಂದನ್ ಕಾವೇರಿ ಮನೆ ತೃತೀಯ ಸ್ಥಾನವನ್ನು ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಭವಾನಿ ಪ್ರಥಮ ಸ್ಥಾನವನ್ನು ನಿರೀಕ್ಷಾ ದ್ವಿತೀಯ ಸ್ಥಾನವನ್ನು ಲಹರಿ ಕುಂಜಿಲನ ತೃತೀಯ ಸ್ಥಾನವನ್ನು ಪಡೆದರು.

ಪ್ರೌಢಶಾಲಾ ಬಾಲಕರ ವಿಭಾಗದ ಸ್ಪರ್ಧೆಯಲ್ಲಿ ಜಿತನ್ ಬೋಪಣ್ಣ ಪ್ರಥಮ, ಕೀರ್ತನ್ ದ್ವಿತೀಯ, ಗೌತಮ್, ಪನ್ನುಕಂಡ ತೃತೀಯ ಸ್ಥಾನವನ್ನು ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಕೀರ್ತನ ಪ್ರಥಮ, ಪ್ರಜ್ಞಾ ಬಿದ್ದಿಯಂಡ ದ್ವಿತೀಯ ಸ್ಥಾನ ಚೈತನ್ಯ ರಾಜೇಶ್ ತೃತೀಯ ಸ್ಥಾನ ಗಳಿಸಿದರು.

ಪಿಯುಸಿ ಮತ್ತು ಪದವಿ ಭಾಗದಲ್ಲಿ ಬಾಲಕರ ಕ್ರೀಡಾಕೂಟದಲ್ಲಿ ಜನಿತ್ ಬೋಪಣ್ಣ ಪ್ರಥಮ, ನಿಶಾಂತ್ ನಂಜಪ್ಪ ದ್ವಿತೀಯ, ಜೀವನ್ ತೃತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಯಶಿಕ ಪ್ರಥಮ, ಬಿಂದು ದ್ವಿತೀಯ ಸ್ಥಾನ ಹಾಗೂ ಸೌಜನ್ಯ ಕುಯ್ಯಮುಡಿ ತೃತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಲಹರಿ ಸÀಂಕರನ ಪ್ರಥಮ, ನಿರ್ಮಲ ದ್ವಿತೀಯ, ಭವ್ಯ ಮುಕ್ಕಾಟಿ ತೃತೀಯ ಸ್ಥಾನ ಗಳಿಸಿದರು.

೩೦-೪೦ ವಯೋಮಾನದ ವಿಭಾಗದಲ್ಲಿ ಸ್ವಾತಿ ಬಿದ್ದಿಯಂಡ ಪ್ರಥಮ ಸ್ಥಾನ ಕಾವೇರಿಮನೆ ಸುಗು, ದ್ವಿತೀಯ ಲೋಕೇಶ್ ಬಾರಿಕೆ ತೃತೀಯ ಸ್ಥಾನವನ್ನು ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಸೌಜನ್ಯ ಪ್ರಥಮ,ರೂಪ ಸುಳ್ಯಕೊಡಿ ದ್ವಿತೀಯ ಮೈನ ಕಾವೇರಿಮನೆ ತೃತೀಯ ಸ್ಥಾನ ಗಳಿಸಿದರು.

೪೦ -೫೦ ವಯೋಮಾನದ ವಿಭಾಗದಲ್ಲಿ ಭರತ್ ಕಾವೇರಿ ಮನೆ ಪ್ರಥಮ, ತೀರ್ಥ ಕುಮಾರ್ ದ್ವಿತೀಯ, ಬಿದ್ದಂಡ ಬಾಬಿ ತೃತೀಯ ಸ್ಥಾನ ಗಳಿಸಿದರು.

೫೦ ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಧನು ಕುಯ್ಯಮುಡಿ ಪ್ರಥಮ, ಹರೀಶ್ ನಿಡ್ಯಮಲೆ ದ್ವಿತೀಯ ಸ್ಥಾನ, ಉದ್ದಿಯನ ಲವ ತೃತೀಯ ಸ್ಥಾನ ಗಳಿಸಿದರು.

ಪುರುಷರ ವಾಲಿಬಾಲ್ ಸ್ಪರ್ಧೆಯಲ್ಲಿ ಆರ್ಸಿಬಿ ಭಾಗಮಂಡಲ ಪ್ರಥಮ ಸ್ಥಾನ,ಎಂಸಿಬಿ ಗೋಳಿಕಟ್ಟೆ ದ್ವಿತೀಯ ಸ್ಥಾನ ಗಳಿಸಿತು.

ಕೆಸರಗದ್ದೆ ವಾಲಿಬಾಲ್ ಕ್ರೀಡಾಕೂಟದಲ್ಲಿ ೧೧ ತಂಡಗಳು ಪಾಲ್ಗೊಂಡಿದ್ದವು.

ಕೆಸರುಗದ್ದೆ ಕ್ರಿಕೆಟ್ ಸ್ಪರ್ಧೆಯಲ್ಲಿ ಕ್ರಿಯೇಟಿವ್ ಭಗವತಿ ತಂಡ ಪ್ರಥಮ ಸ್ಥಾನ, ಓಂಸಿಸಿ ತಂಡ ದ್ವಿತೀಯ ಸ್ಥಾನ ಗಳಿಸಿತು. ಬೆಸ್ಟ್ ಬ್ಯಾಟ್ಸ್ಮನ್ ಆಗಿ ಡ್ಯಾನಿ, ಬೆಸ್ಟ್ ಬೌಲರ್ ಆಗಿ ಲಿಖಿತ್ ಹೊರಹೊಮ್ಮಿದರು.

ಮಹಿಳೆಯರ ಥ್ರೋಬಾಲ್ ಪಂದ್ಯದಲ್ಲಿ ೧೦ ತಂಡಗಳು ಪಾಲ್ಗೊಂಡಿದ್ದು ಮಹಾಲಿಂಗೇಶ್ವರ ಮೂಡಬಿದ್ರೆ ಪ್ರಥಮ ಸ್ಥಾನವನ್ನು ಬ್ಲಾಕ್ ಪ್ಲಾಂಟರ್ಸ್ ಮರಗೋಡು ತಂಡ ದ್ವಿತೀಯ ಸ್ಥಾನ ಗಳಿಸಿತು.

ಪುರುಷರ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಶ್ರೀ ರಾಮಾಂಜನೇಯ ಭಕ್ತ ವ್ಯಾಯಾಮ ಸಂಪಾಜೆ ಪ್ರಥಮ, ಆದರ್ಶ ಫ್ರೆಂಡ್ಸ್ ಚಡಾವು ಸಂಪಾಜೆ ತಂಡ ದ್ವಿತೀಯ ಸ್ಥಾನ ಗಳಿಸಿತು.

ಮಹಿಳೆಯರ ಕೆಸರುಗದ್ದೆ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ನಾಗಬ್ರಹ್ಮ ಕೋಡಿಯಾಳ ಪ್ರಥಮ ಸ್ಥಾನ, ಗೌಡ ಮಹಿಳಾ ಒಕ್ಕೂಟ ಎ ತಂಡ ದ್ವಿತೀಯ ಸ್ಥಾನ ಗಳಿಸಿತು. ಹಗ್ಗಜಗ್ಗಾಟ ಪಂದ್ಯಾಟವನ್ನು ಅಯ್ಯಂಗೇರಿ ಗೌಡ ಒಕ್ಕೂಟದ ಕ್ರೀಡಾ ಅಧ್ಯಕ್ಷ ಬಾರಿಕೆ ಅರುಣ್ ಮಂದಣ್ಣ, ವಾಲಿಬಾಲ್ ಪಂದ್ಯಾಟವನ್ನು ಗೌಡ ಯುವ ಒಕ್ಕೂಟದ ಖಜಾಂಚಿ ಕಾವೇರಿ ಮನೆ ಸುಗು ಉದ್ಘಾಟಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಯ್ಯಂಗೇರಿ ಗೌಡ ಯುವ ಒಕ್ಕೂಟ ಅಧ್ಯಕ್ಷ ಕಾವೇರಿಮನೆ ಭರತ್ ವಹಿಸಿದ್ದರು. ಬೆಂಗಳೂರಿನ ಲೀಡಿಂಗ್ ಅಂಡ್ ಅಡ್ವಟೈಸ್ ಇಂಡಿಯಾ ಪ್ರೆöÊವೇಟ್ ಲಿಮಿಟೆಡ್‌ನ ಎಡಿಕೇರಿ ಪ್ರಸನ್ನ ಕುಶಾಲಪ್ಪ, ಗದ್ದೆ ದಾನಿ ಕುದುಪಜೆ ಕುಶಾಲಪ್ಪ, ಅಯ್ಯಂಗೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಯ್ಯಮುಡಿ ರಂಜು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಗಜಾನನ ಯುವಕ ಸಂಘದ ಅಧ್ಯಕ್ಷ ಗೌರೀಶ್, ದಾನಿಗಳಾದ ಇಂದುಮತಿ, ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಕುಯ್ಯಮುಡಿ ಮನೋಜ್, ಕ್ರೀಡಾ ನಿರೂಪಕರಾದ ದೇವಸ್ಯ ನಿರಂಜನ್, ಕಟ್ಟೆಮನೆ ಸೋನಾಜಿತ್ ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ಅಯ್ಯಂಗೇರಿ ಗೌಡ ಯುವ ಒಕ್ಕೂಟದ ಸದಸ್ಯರಾದ ಬಾರಿಕೆ ದೀಪಕ್, ಬಾರಿಕೆ ಲಿಖಿತ್ ಸೇರಿದಂತೆ ಯುವ ಒಕ್ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

- ಸುನಿಲ್ ಕುಯ್ಯಮುಡಿ