ವೀರಾಜಪೇಟೆ, ಆ. ೩೦: ಕೂರ್ಗ್ ಮಾರ್ಕ್ಸ್ಮೆನ್ ವೀರಾಜಪೇಟೆ ಇವರ ವತಿಯಿಂದ ಪ್ರತಿವರ್ಷದಂತೆ ನಡೆಯುವ ಕೈಲ್‌ಪೊಳ್ದ್ ಹಬ್ಬದ ಪ್ರಯುಕ್ತ ೧೨ನೇ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಸೆಪ್ಟೆಂಬರ್ ೩ ರಂದು ಮಧ್ಯಾಹ್ನ ೨ ಗಂಟೆಯಿAದ ವೀರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಸಲಿರುವರೆಂದು ಮಾರ್ಕ್ಸ್ಮೆನ್ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ತಿಳಿಸಿದ್ದಾರೆ.
ಆಸಕ್ತ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದೆಂದು ಕಾರ್ಯದರ್ಶಿ ಮಾದೆಯಂಡ ಸಂಪಿ ಪೂಣಚ್ಚ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಮೊ. ೮೩೧೭೩೯೭೧೮೪ನ್ನು ಸಂಪಕಿಸಬಹುದಾಗಿದೆ.