ಮಡಿಕೇರಿ, ಆ. ೩೦: ಅಂತರರಾಷ್ಟಿçÃಯ ಖ್ಯಾತಿಯ, ೯ ಬಾರಿ ರಾಷ್ಟಿçÃಯ ಚಾಂಪಿಯನ್ ಆಗಿದ್ದ ರ್ಯಾಲಿಪಟು ಮಾಳೇಟಿರ ಜಗತ್ ನಂಜಪ್ಪ (೬೮) ಅವರು ತಾ. ೩೦ ರಂದು ಮೈಸೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೋಟಾರ್-ಬೈಕ್ ರ್ಯಾಲಿಯಲ್ಲಿ ಹಲವಷ್ಟು ಪ್ರಶಸ್ತಿಗಳನ್ನು ಇವರು ಗಳಿಸಿದ್ದರು. ಇವರ ಪತ್ನಿ ಅನಿತಾ ನಂಜಪ್ಪ ಅವರೂ ಕೂಡ ಪತಿಯೊಂದಿಗೆ ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಜೋಡಿಯ ಸಾಧನೆಗಳು ಹಲವಷ್ಟು ಇರುವದನ್ನು ಸ್ಮರಿಸಬಹುದಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಜಗತ್ ನಂಜಪ್ಪ ಅವರು ಭಾನುವಾರ ಸಂಜೆ ೫ ರ ಸುಮಾರಿಗೆ ಮೃತಪಟ್ಟಿದ್ದಾರೆ. ಮೂಲತಃ ಕುಂದ-ಕುಕ್ಲೂರು ಗ್ರಾಮದವರಾದ ಇವರು ನಲ್ವತೊಕ್ಕಲುವಿನಲ್ಲಿ ನೆಲೆಸಿದ್ದರು. ಅಂತ್ಯಕ್ರಿಯೆ ತಾ. ೩೧ ರಂದು (ಇಂದು) ಸಂಜೆ ೪ಕ್ಕೆ ನಲ್ವತ್ತೊಕ್ಕಲುವಿನಲ್ಲಿ ನಡೆಯಲಿದೆ.