ಬೆAಗಳೂರು, ಆ. ೩೦: ಪೊಲೀಸರು ಯೂನಿಫಾರ್ಮ್ ಧರಿಸಿದ ಕಾರಣಕ್ಕೆ ಜನರಿಗೆ ಸಂವಿಧಾನದತ್ತವಾಗಿ ನೀಡಿರುವ ಸ್ವಾತಂತ್ರö್ಯ ಮೊಟಕುಗೊಳಿಸಲು ಅವಕಾಶವಿಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿರುವ ರಾಜ್ಯ ಹೈಕೋರ್ಟ್ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು ಸುಪ್ರೀಂ ಕೋರ್ಟ್ನ ಬಂಧನ ಹಾಗೂ ನೋಟಿಸ್‌ಗೆ ಸಂಬAಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ತಕ್ಷಣವೇ ಸುತ್ತೋಲೆ ಹೊರಡಿಸಬೇಕು. ಈ ನಿಯಮಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ವೈಯಕ್ತಿಕ ದಂಡ ವಿಧಿಸಲಾಗುವುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಬೇಕು ಎಂದೂ ಸೂಚನೆ ನೀಡಿದೆ.
ಅರ್ಜಿದಾರ ಹಿಂದು ರಾಷ್ಟç ಸಮನ್ವಯ ಸಮಿತಿ ಮುಖಂಡ ಮೋಹನ್ ಗೌಡ ಅವರು ಕಳೆದ ಎರಡು ತಿಂಗಳ ಹಿಂದೆ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಗದಿಯಾಗಿದ್ದ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಕೋರಿ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಠಾಣಾಧಿಕಾರಿಗಳು, ಮನವಿ ಸಂಬAಧ ಕ್ರಮಕೈಗೊಳ್ಳಲಾಗುವುದು, ಕಾರ್ಯಕ್ರಮ ರದ್ದುಪಡಿಸಲಾಗುವುದು ಎಂಬ ಭರವಸೆ ನೀಡಿದ್ದರು.
ಇದೇ ವಿಚಾರಕ್ಕೆ ಸಂಬAಧ ಅರ್ಜಿದಾರ ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊAಡು ಕಾರ್ಯಕ್ರಮ ರದ್ದು ಮಾಡುವ ಸಂಬAಧ ಅಧಿಕಾರಿಗಳು ಭರವಸೆ ನೀಡಿದ್ದು, ಇದು ನಮಗೆ ಜಯ ಸಿಕ್ಕಂತಾಗಿದೆ ಎಂಬುದು ಸೇರಿದಂತೆ ಹಲವು ಅಂಶಗಳ ಬಗ್ಗೆ ಮಾತನಾಡಿದ್ದರು. ಇದರಿಂದ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ವಿಚಾರಣೆಗೆ ಹಾಜರಾಗುವಂತೆ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿದ್ದರು. ಅಲ್ಲದೇ, ಉಡುಪಿಗೆ ಹೋಗಿ ಅಲ್ಲಿಂದ ಅರ್ಜಿದಾರರನ್ನು ಬೆಂಗಳೂರಿಗೆ ಕರೆದುಕೊಂಡು ಠಾಣೆಗೆ ಬಂದು ವಿಚಾರಣೆಗೆ ಒಳಪಡಿಸಿ ಬಂಧಿಸಿ ಬಿಡುಗಡೆ ಮಾಡಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ವಾದ ಮಂಡಿಸಿದ್ದ ವಕೀಲ ಗಿರೀಶ್ ಭಾರದ್ವಾಜ್ ಪೊಲೀಸರ ಕಾನೂನು ಬಾಹಿರ ಕೃತ್ಯವನ್ನು ಕೋರ್ಟ್ ಗಮನಕ್ಕೆ ತಂದಿದ್ದರು. ಹೀಗೆ ವೈಟ್ ಫೀಲ್ಡ್ ಪೊಲೀಸರ ಮೇಲಿನ ಸಾಲು ಸಾಲು ಆರೋಪಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಪೊಲೀಸರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಶನಿವಾರ ಖುದ್ದಾಗಿ ಹಾಜರಾಗುವಂತೆ ತನಿಖಾಧಿಕಾರಿ, ಎಸಿಪಿ ಹಾಗೂ ಡಿಸಿಪಿಗೆ ಸೂಚನೆ ನೀಡಿತ್ತು. ಅದರಂತೆ ಶನಿವಾರ ಡಿಸಿಪಿ ಸೈದುಲು ಅಡಾವತ್, ಎಸಿಪಿ ರೀನಾ ಸುವರ್ಣ ಹಾಗೂ ತನಿಖಾಧಿಕಾರಿ ಖುದ್ದಾಗಿ ಹಾಜರಾಗಿದ್ದರು. ಆಗ ವಿಚಾರಣೆಯಲ್ಲಿ ಪೋಲೀಸರ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪೀಠ ವೈಟ್ ಫೀಲ್ಡ್ ಠಾಣೆಯನ್ನು ಡಾರ್ಕ್ ಫೀಲ್ಡ್ ಎಂದು ಬದಲಿಸುವುದು ಸೂಕ್ತ. ಬೆಳಗಿನ ಜಾವ ಎರಡು ಘಂಟೆಗೆ ಏಫ್‌ಐಆರ್ ದಾಖಲಿಸಿ ಉಡುಪಿಗೆ ಹೋಗಿ ಮೋಹನ್ ಗೌಡ ಅವರನ್ನು ಬಂಧಿಸುವ ಅವಶ್ಯಕತೆ ಏನಿತ್ತು? ನಿಮ್ಮ ಮೇಲೆ ಇಲಾಖಾ ತನಿಖೆ ನಡೆಸಲು ಆದೇಶಿಸಲಾಗುವುದು ಎಂದಿತು. ಇದಕ್ಕೆ ಉತ್ತರಿಸಿದ ಡಿಸಿಪಿ ಅವರು ಸಾಲು ಸಾಲು ಟ್ವೀಟ್ ಮಾಡಿದ್ದರು, ಅವರ ಕಾರಿನಲ್ಲೇ ಕರೆದುಕೊಂಡು ಬಂದು ಹೇಳಿಕೆ ಪಡೆದು ಬಿಟ್ಟಿದ್ದೇವೆ ಎಂದು ತಿಳಿಸಿದರು.
ಈ ಉತ್ತರದಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪೀಠ ಅವರು ಟ್ವೀಟ್ ಮಾಡಿದರೆ ಬಂಧಿಸಬೇಕೆAಬ ಕಾನೂನು ಇದೆಯಾ? ಅವರಿಗೆ ನೋಟೀಸ್ ನೀಡಿ ಹಾಜರಾಗಲು ಸಮಯವೇಕೆ ಕೊಟ್ಟಿಲ್ಲ ?ಯಾರೂ ದೂರು ನೀಡದಿದ್ದರೂ ಕಾನ್ಸ್ಟೇಬಲ್ ದೂರು ದಾಖಲಿಸಿದ್ದಾರೆ. ಕೋಮು ಸಾಮರಸ್ಯಕ್ಕೆ ಧಕ್ಕೆ ಎಂದು ಊಹೆ ಮಾಡಿಕೊಂಡು ಕೇಸ್ ದಾಖಲಿಸಿದ್ದಾರೆ. ಡಿಜಿ ಐಜಿಗೆ ಠಾಣೆಗಳಲ್ಲಿ ಏನಾಗುತ್ತಿದೆ ತಿಳಿದಿರಬೇಕು. ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲಿಸಲು ಕ್ರಮಕೈಗೊಳ್ಳಬೇಕು. ಸಂವಿಧಾನದ ಅಡಿಯಲ್ಲಿ ಪೊಲೀಸರು ಕೆಲಸ ಮಾಡಬೇಕು. ತಾವೇ ಕಾನೂನು ಎಂದು ಪೊಲೀಸರು ಭಾವಿಸಬಾರದು. ಬಂಧಿಸುವ ಅಧಿಕಾರವನ್ನು ಇಚ್ಚೆ ಬಂದAತೆ ಬಳಸಬಾರದು ಎಂದು ಖಡಕ್ ಆಗಿ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.