ಮಡಿಕೇರಿ, ಆ.೨೯: ಐತಿಹಾಸಿಕ ಹಿನ್ನೆಲೆಯಿರುವ ಮಡಿಕೇರಿ ದಸರಾ ನಾಡಹಬ್ಬ ಆಚರಣೆಯ ಪೂರ್ವಭಾವಿ ಸಭೆ ನಡೆಯಿತು.
ನಗರದ ಹೊಟೇಲ್ ರಾಜ್ದರ್ಶನ್ ಸಭಾಂಗಣದಲ್ಲಿ ನಡೆದ ಸಭೆಯನ್ನು ನಗರಸಭಾ ಅಧ್ಯಕ್ಷರೂ ಆದ ದಸರಾ ಸಮಿತಿ ಅಧ್ಯಕ್ಷೆ ಕಲಾವತಿ ಉದ್ಘಾಟಿಸಿದರು.
ಸಭೆಯಲ್ಲಿ ದಸರಾ ಉತ್ಸವವು ಜನರ ನಿರೀಕ್ಷೆಯಂತೆ ನಡೆಯದಿರುವ ಬಗ್ಗೆ ಮತ್ತು ಅಚ್ಚುಕಟ್ಟುತನ ಇಲ್ಲದಿರುವ ಬಗ್ಗೆ ಅಭಿಪ್ರಾಯಗಳು ಮೂಡಿಬಂದವು. ಬೈಲಾ ರಚನೆ ಬಗ್ಗೆ ನಿರ್ಲಕ್ಷö್ಯ, ತೀರ್ಪುðಗಾರಿಕೆ ಸಂದರ್ಭ ಕಂಡುಬರುವ ಪ್ರತಿಭಟನೆಗಳು, ಜನರಿಗೆ ನಿರಾಸೆ ತರುವ ಶೋಭಾಯಾತ್ರೆ, ಸೌಲಭ್ಯಗಳ ಕೊರತೆ ಬಗ್ಗೆ ಹಲವರು ಸಭೆಯಲ್ಲಿ ಪ್ರಸ್ತಾಪಿಸಿದರು.
ಹಿರಿಯ ಗೌರವ ಸಲಹೆಗಾರ ಟಿ. ಪಿ. ರಮೇಶ್ ಮಾತನಾಡಿ; ಸಾಂಪ್ರದಾಯಿಕ ದಸರಾ ಆಚರಣೆಯಲ್ಲಿ ಮಕ್ಕಳಾಟಿಕೆ ಬೇಡ ಎಂದು ಎಚ್ಚರಿಸಿದರು. ಬೈಲಾ ತಿದ್ದುಪಡಿಗೆ ಸಮಿತಿ ಆಸಕ್ತವಾಗಿಲ್ಲ. ಅನುದಾನ ಹೆಚ್ಚಿಗೆ ಸಿಗುತ್ತಿರುವುದರಿಂದ ಕ್ರಿಯಾಯೋಜನೆ ರೂಪಿಸಿ ಯೋಜನಾಬದ್ಧವಾಗಿ ಉತ್ಸವ ಆಚರಿಸಬೇಕು. ದಸರಾ ಕಳೆದ ಬಳಿಕ ಲೆಕ್ಕಪತ್ರ ಮಂಡನೆ ಮತ್ತು ಮಹಾಸಭೆ ನಡೆಯಬೇಕೇ ಹೊರತು, ವರ್ಷದ ನಂತರ ನಡೆಸತಕ್ಕದ್ದಲ್ಲ. ಇವೆಲ್ಲ ಸಮಸ್ಯೆಗಳಿಂದ ಮುಕ್ತರಾಗದÀ ಹೊರತು ಯಾವ ಘಳಿಗೆಯಲ್ಲಾದರೂ ದಸರಾ ಉತ್ಸವ ಅಧಿಕಾರಿಗಳ ಕೈಗೆ ಹೋಗಬಹುದು ಎಂದು ರಮೇಶ್ ಎಚ್ಚರಿಕೆ ನೀಡಿದರು. ಲಕ್ಷಾಂತರ ಜನ ಸೇರುವ ಉತ್ಸವದಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲದಿರುವುದು ದುರಂತ ಎಂದ ಅವÀರು, ಬನ್ನಿಕಡಿಯುವ ಸಂಪ್ರದಾಯವನ್ನು ಮಂಟಪಗಳು ಮರೆತಿರುವುದು ವಿಪರ್ಯಾಸ ಎಂದರು. ಕಳೆದ ದಸರಾ ಉತ್ಸವಕ್ಕೆ ದುಂದುವೆಚ್ಚವಾಗಿರುವದು ಕಂಡುಬAದಿದೆ ಎಂದು ರಮೇಶ್ ಸೂಕ್ಷö್ಮವಾಗಿ ಹೇಳಿದರು.
ದಸರಾ ಸಮಿತಿ ಗೌರವ ಸಲಹೆಗಾರ ಬೈ. ಶ್ರೀ. ಪ್ರಕಾಶ್ ಮಾತನಾಡಿ; ಶೋಭಾಯಾತ್ರೆಯ ಅವ್ಯವಸ್ಥೆಯನ್ನು ಎತ್ತಿ ಹೇಳಿದರು. ಲಕ್ಷಾಂತರ ಜನರು ಸೇರುವ ದಸರಾದಲ್ಲಿ ಯಾವುದೇ ಮಂಟಪದ ಪ್ರದರ್ಶನ ನೋಡಲು ಸಾಧ್ಯವಾಗುತ್ತಿಲ್ಲ. ಎರಡು ಮೂರು ಬಾರಿಯಾದರೂ ಪ್ರದರ್ಶನ ನಡೆಯುವಂತಾಗÀಬೇಕೆAದರು. ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೋಳಿ ಮಾತನಾಡಿ; ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳುವಾಗ ಎಲ್ಲರೂ ಒಟ್ಟಾಗಿ ಹೋಗುವ ಸಂಪ್ರಾದಾಯ ಪಾಲಿಸಬೇಕು ಎಂದು ಸಲಹೆ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮ ಆರಂಭಕ್ಕೂ ಮುನ್ನ ದಸರಾ ಸಮಿತಿಯವರ ವೇದಿಕೆ ಕಾರ್ಯಕ್ರಮಗಳಲ್ಲಿ ಸಮಯ ಪಾಲನೆಯಾಗÀದಿರುವ ಬಗ್ಗೆ ಗೌರವ ಸಲಹೆಗಾರ ಸತೀಶ್ ಪೈ ಹೇಳಿದರು. ಕೋಟಿಗಟ್ಟಲೆ ಅನುದಾನಸಿಗುವುದರಿಂದ ಗುಣಮಟ್ಟದ ಸ್ಮರಣಿಕೆ ನೀಡಬೇಕು, ಮಂಟ¥ಗಳ ತಯಾರಿಗೆ ಅಪಾರ ಶ್ರಮ ಹಾಕಿದರೂ ಕೊನೆಯಲ್ಲಿ ಒಂದೇ ಪ್ರದರ್ಶನ ನೀಡÀÄತ್ತಿರುವುದು ವಿಪರ್ಯಾಸ. ಬಹುಮಾನ ವಿತರಣೆ ವೇಳೆ ಪ್ರತಿಭಟನೆಗಳು ಎದುರಾಗುತ್ತಿದ್ದು, ಇದನ್ನು ತಿದ್ದಿಕೊಂಡು ಸರಿಪಡಿಸುವಂತಾಗಬೇಕೆAದು ಸತೀಶ್ ಪೈ ಸಲಹೆ ನೀಡಿದರು.
ಮೈಸೂರು ದಸರಾ ಮಾದರಿಯಲ್ಲಿ ನಗರ ಅಲಂಕಾರ ಮತ್ತು ಮಂಟಪಗಳಿಗೆ ಹೆಚ್ಚಿನ ಅನುದಾನ ನೀಡಬೇಕೆÀಂದು ದಶಮಂಟಪ ಸಮಿತಿ ಮಾಜಿ ಅಧ್ಯಕ್ಷ ಜಿ.ಸಿ. ಜಗದೀಶ್ ಮನವಿ ಮಾಡಿದರು. ಹೆಚ್ಚಿನ ಅನುದಾನ ಸಿಗುವುದರಿಂದ ದಸರಾ ಮತ್ತು ದಶಮಂಟಪ ಸಮಿತಿ ಒಟ್ಟಾಗಿ ಅರ್ಥಪೂರ್ಣ ದಸರಾ ಆಚರಿಸುವಂತಾಗಬೇಕೆAದು ಗೌರವ ಸಲಹೆಗಾರ ಪಿ.ಡಿ. ಪೊನ್ನಪ್ಪ ಸಲಹೆ ನೀಡಿದರು. ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಬೇಕು. ಕೇವಲ ಅಲಂಕಾರಕ್ಕೆ ಆದ್ಯತೆ ನೀಡದೆ, ನಗರದ ಸ್ವಚ್ಛತೆಗೂ ಗಮನ ಹರಿಸಬೇಕು. ಶೌಚಾಲಯಗÀಳ ವ್ಯವಸ್ಥೆಯಾಗÀಬೇಕೆಂದು ಪೊನ್ನಪ್ಪ ಗಮನ ಸೆಳೆದರು. ಲೋಪಗಳನ್ನು ಸರಿಪಡಿಸಿ ದಸರಾ ಆಚರಣೆಯಾಗÀದಿದ್ದರೆ ಉತ್ಸವವೇ ಅಧಿಕಾರಿಗಳ ಹಿಡಿತಕ್ಕೆ ಹೋಗುವ ಆಪಾಯವಿದೆ ಎಂದು ಅವರು ಹೇಳಿದರು. ದಸರಾ ಸಂದರ್ಭ ಶೌಚಾಲಯ ವ್ಯವಸ್ಥೆ ಆಗಲೇಬೇಕು ಎಂದು ಸಮಿತಿ ಉಪಾಧ್ಯಕ್ಷ ಮಹೇಶ್ ಜೈನಿ ಮತ್ತು ಅಧ್ಯಕ್ಷೆ ಕಲಾವತಿ ಕೂಡ ಅಭಿಪ್ರಾಯ
ವ್ಯಕ್ತಪಡಿಸಿದರು. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಸಭೆಯಲ್ಲಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ದಸರಾ ಉತ್ಸವ ಆಚರಿಸಿದ ಕುರಿತು ಮಾಹಿತಿ ನೀಡಿದರಲ್ಲದೆ, ಮುಂಬರುವ ಉತ್ಸವ ಆಚರಣೆ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಸಮಿತಿ ಖಜಾಂಚಿ ಸಬಿತಾ ಕಳೆದ ಬಾರಿಯ ರೂ. ೧,೪೯,೮೩,೫೨೦ ವೆಚ್ಚದ ಲೆಕ್ಕಪತ್ರ ಮಂಡಿಸಿದರು.
ಸಭೆಯಲ್ಲಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಪದಾಧಿಕಾರಿಗಳಾದ ಮುದ್ದುರಾಜ್, ವಿ.ಜಿ.ಮೋಹನ್, ಗಜೇಂದ್ರ, ಒ.ಎಸ್.ಬಾಬು, ದಶಮಂಟಪ ಸಮಿತಿ ಅಧ್ಯಕ್ಷ ಪಾಂಡೀರ ಪೂಣಚ್ಚ, ಮಾಜಿ ಅಧ್ಯಕ್ಷ ಬಿ.ಎಂ. ಹರೀಶ್, ನಗರಸಭಾ ಆಯುಕ್ತ ಹಾಗೂ ದಸರಾ ಸಮಿತಿ ಕಾರ್ಯದರ್ಶಿ ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.
ರಾಮ ಮಂದಿರದಲ್ಲಿ ವಿಶೇಷ ಪೂಜೆ
ಮಡಿಕೇರಿ ದಸರಾ ಸಮಿತಿಯಿಂದ ನಗರದ ಇತಿಹಾಸ ಪ್ರಸಿದ್ದ ಪೇಟೆ ಶ್ರೀ ರಾಮ ಮಂದಿರದಲ್ಲಿ ನಿನ್ನೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಡಿಕೇರಿ ದಸರಾ ಉತ್ಸವದ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ರಾಜ್ಯ ಸರಕಾರ ಈಗಾಗಲೇ ಮಡಿಕೇರಿ ದಸರಾ ಉತ್ಸವಕ್ಕೆ ೨ ಕೋಟಿ ರೂ. ಅನುದಾನವನ್ನು ಘೋಷಿಸಿದ್ದು, ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದಸರಾ ಸಮಿತಿಗಳ ಪ್ರಮುಖರು ಜನೋತ್ಸವದ ಯಶಸ್ಸಿಗಾಗಿ ಪ್ರಾರ್ಥಿಸಿದರು.
ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ನಗರಸಭಾ ಅಧ್ಯಕ್ಷೆ ಪಿ.ಕಲಾವತಿ, ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ದಶಮಂಟಪ ಸಮಿತಿ ಅಧ್ಯಕ್ಷ ಪಾಂಡೀರ ಪೂಣಚ್ಚ, ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ, ಪದಾಧಿಕಾರಿಗಳಾದ ಚುಮ್ಮಿ ದೇವಯ್ಯ, ಸವಿತಾ ರಾಕೇಶ್, ಬೈ.ಶ್ರೀ ಪ್ರಕಾಶ್, ಅರುಣ್ ಶೆಟ್ಟಿ ಸೇರಿದಂತೆ ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿ ಹಾಗೂ ವಿವಿಧ ಉಪಸಮಿತಿಗಳ ಸದಸ್ಯರು ಹಾಗೂ ಸಾರ್ವಜನಿಕರು ಪೂಜೆಯಲ್ಲಿ ಪಾಲ್ಗೊಂಡರು.