ಕೂಡಿಗೆ, ಆ. ೨೯: ಕೂಡಿಗೆಯಲ್ಲಿರುವ ಕೃಷಿ ಕ್ಷೇತ್ರದ ಆವರಣದ ಗದ್ದೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಭತ್ತದ ನಾಟಿ, ಬೀಜದ ಬಿತ್ತನೆ ಕುರಿತು ಮಾಹಿತಿಯನ್ನು ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಶಿವಮೂರ್ತಿ ನೀಡಿದರು.

ಕೃಷಿ ಕ್ಷೇತ್ರಕ್ಕೆ ಆಗಮಿಸಿದ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಸಸಿ ಮಡಿ ತಯಾರಿಕೆ, ನರ್ಸರಿ ಟ್ರೇ ತಯಾರಿಕೆ ಹಾಗೂ ವಿವಿಧ ಪ್ರಾತ್ಯಕ್ಷಿತೆ ಘಟಕಗಳಾದ ಸೀಡ್ ಡ್ರಂ ಬಿತ್ತನೆ, ಯಾಂತ್ರಿಕೃತ ನಾಟಿ ಹಾಗೂ ಕೈ ನಾಟಿ ಪ್ರಾತ್ಯಕ್ಷಿತೆ ಸೇರಿದಂತೆ ವಿವಿಧ ಘಟಕಗಳ ಬಗ್ಗೆ ಮತ್ತು ಭತ್ತದ ಕೃಷಿ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಪ್ರಾತ್ಯಕ್ಷಿತೆಯ ಮೂಲಕ ತಿಳಿಸಿದರು.

ಶಾಲಾ ವಿದ್ಯಾರ್ಥಿಗಳು ಕೆಸರು ಗದ್ದೆಗಳಲ್ಲಿ ನಾಟಿ ಮಾಡುವ ಮೂಲಕ ಅನುಭವಪಟ್ಟರು.