ಮಡಿಕೇರಿ, ಆ. ೨೯: ಶ್ರೀ ಓಂಕಾರೇಶ್ವರ ದೇವಾಲಯ ವ್ಯಾಪ್ತಿಯ ಆಂಜನೇಯ ಕ್ಷೇತ್ರದಲ್ಲಿ ಈಗಾಗಲೇ ಶ್ರೀ ಉಚ್ಚಿಲ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನವಗ್ರಹ ಪ್ರತಿಷ್ಠಾಪಿಸಲಾಗಿದ್ದು, ತಂತ್ರಿ ಅವರ ಸಲಹೆ ಮೇರೆಗೆ ಪ್ರತಿ ತಿಂಗಳ ಪ್ರಥಮ ಮಂಗಳವಾರ ಸಾಮೂಹಿಕ ನವಗ್ರಹ ಪೂಜೆಯನ್ನು ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ ೧ ರಂದು ಆಂಜನೇಯ ದೇವಾಲಯದ ನವಗ್ರಹ ಸನ್ನಿಧಿಯಲ್ಲಿ ಪೂಜೆಯನ್ನು ನಡೆಸಲಾಗುತ್ತದೆ.

ಬೆಳಿಗ್ಗೆ ೯.೩೦ ರಿಂದ ೧೦.೩೦ ಗಂಟೆವರೆಗೆ ಪೂಜೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ೯೪೪೮೮೯೯೫೬೭ ಸಂಪರ್ಕಿಸಬಹುದಾಗಿದೆ.