ಮಡಿಕೇರಿ, ಆ. ೨೮: ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಆತಂಕಮೂಡಿಸಿರುವ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿಚಾರದಲ್ಲಿ ಕೈಗೊಳ್ಳಬೇಕಾಗಿರುವ ನಿರ್ಧಾರದ ಬಗ್ಗೆ ವಿಶೇಷ ಅಧಿವೇಶ ನಡೆಸಿ ಚರ್ಚಿಸಲಾಗುವುದು. ಅದೇ ರೀತಿ ಕೊಡಗು ಜಿಲ್ಲೆಯಲ್ಲಿ ಕಾಡುತ್ತಿರುವ ವನ್ಯಜೀವಿ-ಮಾನವ ಸಂಘರ್ಷ ಸೇರಿದಂತೆ ವಿವಿಧ ವಿಷಯಗಳ ಕುರಿತು ತಾ. ೩೧ ರಂದು ಬೆಂಗಳೂರಿನಲ್ಲಿ ವಿಶೇಷ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರೋಪಾಯಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವರಾದ ರಾಮಲಿಂಗಾರೆಡ್ಡಿ ಭರವಸೆಯ ಮಾತುಗಳನ್ನಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾನವ - ವನ್ಯಜೀವಿ ಸಂಘರ್ಷ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಾರ್ವಜನಿಕರು, ರಾಜಕೀಯ ಪಕ್ಷ, ಸಂಘ - ಸಂಸ್ಥೆಗಳ ಪ್ರಮುಖರೊಂದಿಗೆ ಸಮಾಲೋಚನಾ ಸಭೆ ನಡೆಯಿತು.

ವಿಧಾನಸಭಾ ಹಾಗೂ ಪರಿಷತ್ ಕಲಾಪದ ಸಂದರ್ಭ ಕೊಡಗಿನ ಜನಪ್ರತಿನಿಧಿಗಳು ಅರಣ್ಯ ವಿಷಯದಲ್ಲಿ ಹಲವು ವಿಷಯ ಪ್ರಸ್ತಾಪಿಸಿದ್ದರು. ಅಂದು ತಾನು ಕೊಡಗಿಗೆ ಬರುವುದಾಗಿ ಹೇಳಿದ್ದೆ. ಇದೀಗ ಅದೇ ರೀತಿ ಕೊಡಗಿಗೆ ಬಂದು ಸಮಸ್ಯೆ ಆಲಿಸುತ್ತಿದ್ದೇನೆ ಎಂದರು.

ಕಸ್ತೂರಿ ರಂಗನ್ ವರದಿಯನ್ನು ಈಗಾಗಲೇ ರಾಜ್ಯ ಸರಕಾರ ತಿರಸ್ಕಾರ ಮಾಡಿದೆ. ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಹೆಚ್ಚಿನ ಒತ್ತಾಯ ಜನರಿಂದ ಕೇಳಿಬಂದಿದೆ. ಅದರೊಂದಿಗೆ ಪರಿಹಾರವನ್ನು ಹೆಚ್ಚಳ ಮಾಡುವ ಮನವಿ ಇದೆ. ಆನೆ ಹಾವಳಿ ತಡೆಗೆ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಕಾರಿಡಾರ್ ಮಾಡಬೇಕು. ಇದಕ್ಕೆ ಸರ್ವೆ ನಡೆಸಬೇಕಾಗಿದೆ. ರೈಲ್ವೆ ಬ್ಯಾರಿಕೇಡ್‌ಗಳನ್ನು ಮೇಲ್ದರ್ಜೆಗೆ ತರಬೇಕಾಗಿದ್ದು, ಕಂದಕಗಳನ್ನು ಸುಸ್ಥಿತಿಯಲ್ಲಿಡಬೇಕಾಗಿದೆ. ನಾಗರಹೊಳೆಯಿಂದ ಹುಲಿ ಪ್ರವೇಶಿಸದಂತೆ ಯೋಜನೆ ರೂಪಿಸುವ ಸಲಹೆಯೂ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಸಚಿವರು ಮಾಹಿತಿ ಒದಗಿಸಿದರು.

ಸೆಕ್ಷನ್-೪, ಸಿ ಮತ್ತು ಡಿ ಲ್ಯಾಂಡ್, ಹಾರಂಗಿ ಜಲಾಶಯ ನಿರ್ಮಾಣ ಸಂದರ್ಭ ಜಾಗ ಮುಳುಗಡೆಗೊಂಡವರಿಗೆ ಪರ್ಯಾಯ ಜಾಗ ನೀಡುವ ವಿಚಾರದಲ್ಲೂ ಮುಖ್ಯಮಂತ್ರಿ, ಕಂದಾಯ ಸಚಿವರೊಂದಿಗೆ ಸಭೆ ನಡೆಸಲಾಗುವುದು. ಅತ್ತೂರು, ಯಡವನಾಡು ಕಂದಾಯ ಗ್ರಾಮದ ಘೋಷಣೆಗೂ ಕ್ರಮಕೈಗೊಳ್ಳಲಾಗುವುದು. ಮರ ಕಡಿಯಲು ಅನುಮತಿ ವಿಳಂಬ ಮಾಡದಂತೆ ಸೂಚಿಸಲಾಗುವುದು ಎಂದರು.

ಅರಣ್ಯದಲ್ಲಿಯೇ ಕಾಡಾನೆಗಳಿಗೆ ಅಗತ್ಯ ಆಹಾರ, ನೀರು ಒದಗಿಸಲು ಯೋಜನೆ ಕೈಗೊಳ್ಳಲಾಗುವುದು. ಕೇಂದ್ರ ಸರಕಾರದಿಂದಲೂ ಅನುದಾನ ನೀಡುವ ಅವಕಾಶವಿದ್ದು, ಅದನ್ನು ಪಡೆಯಲು ಪ್ರಯತ್ನಿಸಲಾಗುವುದು ಎಂದು ವಿವರಿಸಿದರು.

ಸಮಸ್ಯೆ ವಿವರಿಸಿದ ಕೆ.ಜಿ.ಬಿ

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ವನ್ಯಜೀವಿ-ಮಾನವ ಸಂಘರ್ಷ ಮಿತಿಮೀರಿದೆ. ನಿಮ್ಮ ಅವಧಿಯಲ್ಲಿ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ. ಹಲವು ವರ್ಷಗಳಿಂದ ಈ ಸಮಸ್ಯೆಯಿದೆ. ನಾಲ್ಕು ವನ್ಯಜೀವಿ ವಿಭಾಗದಲ್ಲಿ ಪ್ರಾಣಿಗಳಿಗೆ ಅವಶ್ಯಕವಾದ ಆಹಾರ ಮತ್ತು ನೀರಿನ ವ್ಯವಸ್ಥೆ ಇಲ್ಲ ಎಂದು ಗಮನಕ್ಕೆ ತಂದರು.

ಆನೆಗಳ ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭ ಬೆಳೆಗಾರರಿಗೆ ಫಸಲು ನಾಶವಾಗುತ್ತಿದೆ. ಹಾಗಾಗಿ ಆನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕಾಗಿದೆ. ರೈಲ್ವೆ ಬ್ಯಾರಿಕೇಡ್, ಕಂದಕದಿAದ ಪ್ರಯೋಜನವಾಗುತ್ತದೆ. ಸೋಲಾರ್ ಬೇಲಿ ಯೋಜನೆ ವಿಫಲವಾಗಿದೆ. ಕಂದಕ ನಿರ್ಮಾಣ ಸಂದರ್ಭ ಬಂಡೆಕಲ್ಲುಗಳ ಸ್ಫೋಟಕ್ಕೆ ಅನುಮತಿ ನೀಡದೆ ಯೋಜನೆಗೆ ಅಡ್ಡಿ ಉಂಟಾಗುತ್ತಿದೆ. ಜಿಲ್ಲೆಯಲ್ಲಿ ಹುಲಿಗಳ ಹಾವಳಿಯೂ ಹೆಚ್ಚಾಗಿದೆ. ಜಾನುವಾರುಗಳು ಬಲಿಯಾಗುತ್ತಿವೆ. ಹುಲಿಗಳು ನಾಗರಹೊಳೆಯಿಂದಲೇ ದಾಟದಂತೆ ಎಚ್ಚರವಹಿಸಬೇಕಾಗಿದೆ. ಸಿ ಮತ್ತು ಡಿ ಲ್ಯಾಂಡ್ ವಿಚಾರದಲ್ಲಿ ಅರಣ್ಯ ಪೈಸಾರಿ ಎಂದು ಆರ್‌ಟಿಸಿಯಲ್ಲಿ ಉಲ್ಲೇಖಿಸಲಾಗಿದೆ. ಸಾಗುವಳಿ ಭೂಮಿಗೆ ಆರ್‌ಟಿಸಿ ನೀಡಬೇಕೆಂಬ ಆದೇಶವಿದ್ದರೂ ಅರಣ್ಯ ಇಲಾಖೆಯ ಅಡ್ಡಿಯಿಂದ ಇದು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಕ್ಕೋಡ್ಲು ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ಏಕಾಏಕಿ ನಾಶಗೊಳಿಸಿದೆ. ಕಸ್ತೂರಿ ರಂಗನ್ ವರದಿ ವಿರುದ್ಧ ಈಗಾಗಲೇ ರಾಜಕೀಯ ರಹಿತವಾದ ಸಮಿತಿಯಿದ್ದು, ವರದಿಯನ್ನು ಸಂಪೂರ್ಣ ತಿರಸ್ಕಾರ ಮಾಡಲಾಗುವುದಿಲ್ಲ ಎಂದರು.

ಮಡಿಕೇರಿ ನಗರಸಭೆಯು ಕಸವಿಲೇವಾರಿಗಾಗಿ ೧೦ ಎಕರೆ ಜಾಗ ಗುರುತಿಸಿದ್ದು, ಇನ್ನೇನೂ ಕಾಮಗಾರಿ ಆರಂಭಿಸುವಾಗ ಅರಣ್ಯ ಇಲಾಖೆ ಅಡ್ಡಿ ಮಾಡಿದೆ. ಈ ಬಗ್ಗೆ ತಕ್ಷಣ ಕ್ರಮವಹಿಸುವಂತೆ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಲೋಕೇಶ್ ಮಾತನಾಡಿ, ಹಾರಂಗಿ ಜಲಾಶಯ ನಿರ್ಮಾಣದಿಂದ ಜಾಗ ಕಳೆದುಕೊಂಡವರಿಗೆ ಇಂದಿಗೂ ಪರಿಹಾರ ಲಭಿಸಿಲ್ಲ ಎಂದು ಪ್ರಸ್ತಾಪಿಸಿದರು.

ಈ ವಿಷಯದಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಈ ವಿಚಾರ ನ್ಯಾಯಾಲಯದಲ್ಲಿದೆ ಎಂದು ತಿಳಿಸಿದರು.

ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಸುಪ್ರೀಂ ಕೋರ್ಟ್ಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅರ್ಜಿ ಸಲ್ಲಿಸಬೇಕು ಎಂದರು.

ಕಾರ್ಮಿಕ ಮುಖಂಡ ಪಿ.ಆರ್. ಭರತ್ ಕುಮಾರ್ ಮಾತನಾಡಿ, ವನ್ಯಜೀವಿಯಿಂದ ಜನರಿಗೆ ವಿಮೋಚನೆ ಇಲ್ಲದಾಗಿದೆ. ಪರಿಹಾರ ಕ್ರಮ ಒದಗಿಸಬೇಕು. ತೋಟದಿಂದ ತೋಟಕ್ಕೆ ಓಡಿಸುವುದನ್ನು ಮೊದಲು ನಿಲ್ಲಿಸಬೇಕು. ಇದರಿಂದ ಸಾವು ಹೆಚ್ಚಾಗುತ್ತಿದೆ. ೨೪೦ ಆನೆಗಳು ತೋಟದಲ್ಲಿ ಬದುಕು ನಡೆಸುತ್ತಿವೆ. ಏಕಕಾಲದಲ್ಲಿ ಸೆರೆಹಿಡಿದು ಸ್ಥಳಾಂತರಕ್ಕೆ ಕ್ರಮವಹಿಸಬೇಕು. ವಿಶೇಷ ಪ್ಯಾಕೇಜ್ ಘೋಷಣೆಯಾಗಬೇಕು. ಸಮಸ್ಯೆಯನ್ನು ಕೊನೆಗಾಣಿಸಬೇಕು. ಪರಿಹಾರ ಮೊತ್ತ ಹೆಚ್ಚಳ ಮಾಡಬೇಕು. ದಾಳಿಯಿಂದ ಅಂಗಾAಗ ಕಳೆದುಕೊಳ್ಳುತ್ತಿದ್ದು, ಅಂತವರಿಗೆ ಮಾಸಿಕ ಪಿಂಚಣಿ ರೀತಿ ಹಣ ನೀಡಬೇಕು ಎಂದು ಒತ್ತಾಯಿಸಿದರು.

ರವಿ ತಮ್ಮಯ್ಯ ಮಾತನಾಡಿ, ಮಾಂದಲಪಟ್ಟಿ ವಾಣಿಜ್ಯ ಚಟುವಟಿಕೆಯಾಗಿ ಬದಲಾಗಿದೆ. ಇದನ್ನು ಸೂಕ್ತ ರೀತಿಯಲ್ಲಿ ರಕ್ಷಣೆ ಮಾಡಬೇಕು ಎಂದರು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಸೆಕ್ಷನ್ ೪ ಹೆಸರಲ್ಲಿ ರೈತರು ನ್ಯಾಯಾಲಯದ ಮೆಟ್ಟಿಲೇರಿರುವ ಸ್ಥಿತಿ ಸೃಷ್ಟಿಯಾಗಿದೆ. ಜನರು ತೊಂದರೆಗೀಡಾಗಿದ್ದಾರೆ. ದುಬಾರೆಯಲ್ಲಿ ನಡೆದ ಘಟನೆ ನಂತರ ಚಟುವಟಿಕೆ ಸ್ಥಗಿತಗೊಂಡಿದೆ. ಇದರಿಂದ ಅಲ್ಲಿನ ರ‍್ಯಾಫ್ಟಿಂಗ್ ಸೇರಿದಂತೆ ವ್ಯಾಪಾರಕ್ಕೆ ಸಮಸ್ಯೆಯಾಗಿದೆ. ತೂಗುಸೇತುವೆ ಕಾಮಗಾರಿಯೂ ನಡೆಯುತ್ತಿದೆ. ಆನೆ ಶಿಬಿರ ಪುನರಾರಂಭ ಸಂಬAಧ ಎಸ್‌ಓಪಿ ರೂಪಿಸಿ ಪ್ರವೇಶ ಮುಕ್ತಗೊಳಿಸಬೇಕೆಂದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾಕುಶಾಲಪ್ಪ ಮಾತನಾಡಿ, ಅರಣ್ಯ ಇಲಾಖೆಯಿಂದ ಜನರು ಕಿರುಕುಳ ಅನುಭವಿಸುತ್ತಿದ್ದಾರೆ. ಕೇರಳ ಗಡಿಯಲ್ಲಿ ಅರಣ್ಯವೇ ಮಾಯವಾಗಿದೆ. ಖಾಸಗಿ ಜಾಗದಲ್ಲಿರುವ ಮರವನ್ನು ಕಡಿಯಲು ಒಂದು ತಿಂಗಳಿನಲ್ಲಿ ಅನುಮತಿ ನೀಡಬೇಕು ಎಂದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ವನ್ಯಜೀವಿ ವಿಭಾಗದ ಪಿಸಿಸಿಎಫ್ ಪುಷ್ಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಮಡಿಕೇರಿ ವಿಭಾಗದ ಡಿಎಫ್‌ಓ ಅಭಿಷೇಕ್, ವೀರಾಜಪೇಟೆ ವಿಭಾಗದ ಡಿಎಫ್‌ಓ ವಿನಿತಾ ಚೌಹಾಣ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.