ಶನಿವಾರಸಂತೆ, ಆ. ೨೯: ಪಟ್ಟಣದ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲ ಫಾದರ್ ಜಿಬಿ ಥೋಮಸ್ ನೇತೃತ್ವದಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು.

ಹಬ್ಬದ ಪ್ರಯುಕ್ತ ಶಾಲಾ ಆವರಣದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ವಿವಿಧ ಬಗೆಯ ಬಣ್ಣಬಣ್ಣದ ಹೂವುಗಳಿಂದ ಸುಂದರವಾದ ಪೂಕಳಂ (ಹೂವಿನ ರಂಗೋಲಿ) ರಚಿಸಿ, ಹಣತೆ ಬೆಳಗಿಸಿ, ಪೂಜಿಸಿ ಪ್ರಾರ್ಥಿಸಿದರು.

ಶಿಕ್ಷಕಿಯರು ಕೇರಳದ ಸಾಂಪ್ರದಾಯಿಕ ಸಂಸ್ಕೃತಿಯನ್ನು ಬಿಂಬಿಸುವAತೆ ಶ್ವೇತವರ್ಣದ ಸೀರೆಯನ್ನು ಧರಿಸಿ ಬಂದಿದ್ದು ಓಣಂ ಹಬ್ಬದಾಚರಣೆಗೆ ಮೆರಗು ನೀಡಿತು. ಶಿಕ್ಷಕರು, ಉಪನ್ಯಾಸಕರು ಸಾಂಪ್ರದಾಯಿಕ ಹಾಡುಗಳಿಗೆ ಹೆಜ್ಜೆ ಹಾಕಿ, ಉತ್ಸಾಹದಿಂದ ನೃತ್ಯ ಮಾಡಿ ಸಂಭ್ರಮಿಸಿದರು.

ಓಣA ಹಬ್ಬವು ಸೌಹಾರ್ದತೆ, ಸಮಾನತೆ, ಸಂತೋಷ ಹಾಗೂ ಒಗ್ಗಟ್ಟಿನ ಸಂಕೇತವಾಗಿದ್ದು, ಆಚರಣೆಯ ಮೂಲಕ ವಿದ್ಯಾರ್ಥಿಗಳಿಗೆ ಧಾರ್ಮಿಕ ಹಬ್ಬದ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯ ಪರಿಚಯ ಮಾಡಿಕೊಡಲಾಯಿತು ಎಂದು ಫಾದರ್ ಜಿಬಿ ಥೋಮಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಓಣಂ ಹಬ್ಬದಾಚರಣೆಯಲ್ಲಿ ಪಾಲ್ಗೊಂಡರು.