ಕಾಡಿನಿAದ ನಾಡಿನತ್ತ ಕಾಡಾನೆಗಳು ಬರುವುದನ್ನು ತಡೆಯಲು ರಾಜ್ಯದಲ್ಲಿ ೧೫೨೯ ಕಿ.ಮೀ. ಸೌರಶಕ್ತಿ ಬೇಲಿ ನಿರ್ಮಿಸಲಾಗಿದೆ. ೨೨೪೪.೫ ಕಿ.ಮೀ. ಆನೆ ತಡೆ ಕಂದಕವನ್ನು ತೋಡಲಾಗಿದೆ. ೪೩೫.೯ ಕಿ.ಮೀ. ದೂರದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ೨೦೨೦ರಲ್ಲಿ ಆನೆ ಕಾರ್ಯಪಡೆಗಳನ್ನು ಜಿಲ್ಲೆಗಳಲ್ಲಿ ರಚಿಸಲಾಗಿದ್ದು, ೧೦ ಮಂದಿಯ ತಂಡ ಕಾರ್ಯನಿರ್ವಹಿಸುತ್ತಿದೆ. ಆನೆ ಕಾರ್ಯ ಪಡೆ ನಿರ್ವಹಿಸಲು ೨೪x೭ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಆನೆ ಹಾವಳಿ ತಪ್ಪಿಸಲು ರೈತರಿಗೆ ಹಾಗೂ ಬೆಳೆಗಾರರಿಗೆ ಸಬ್ಸಿಡಿ ದರದಲ್ಲಿ ಸೋಲಾರ್ ಬೇಲಿ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಉತ್ತೇಜನ ನೀಡುತ್ತಿದೆ.

ಕಾಡು ಪ್ರಾಣಿಗಳಿಂದಾಗಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ತಲಾ ೨೦ ಲಕ್ಷ ಪರಿಹಾರ, ಶಾಶ್ವತ ಅಂಗವಿಕಲತೆಗೆÀ ೧೦ ಲಕ್ಷ ರೂಪಾಯಿ, ಭಾಗಶಃ ಅಂಗವಿಕಲತೆಗೆ ೫ ಲಕ್ಷ, ಗಾಯಗೊಂಡವರಿಗೆ ಗರಿಷ್ಠ ೬೦ ಸಾವಿರ, ಪ್ರಾಣ ಹಾನಿ ಹಾಗೂ ಪೂರ್ಣ ಅಂಗವಿಕಲತೆಗೆ ಒಳಗಾದವರ ಕುಟುಂಬಕ್ಕೆ ೫ ವರ್ಷದವರೆಗೆ ೪ ಸಾವಿರ ಮಾಸಾಶನ ನೀಡಲಾಗುತ್ತಿದೆ.

ದುಬಾರೆಯಲ್ಲಿ ಒಟ್ಟು ೩೧ ಆನೆಗಳು ಹಾಗೂ ಹಾರಂಗಿಯಲ್ಲಿ ೬ ಆನೆಗಳಿದ್ದು, ರಾಜ್ಯದ ವಿವಿಧ ಆನೆ ಶಿಬಿರಗಳಲ್ಲಿ ೧೧೬ ಆನೆಗಳನ್ನು ಸಾಕಲಾಗುತ್ತಿದೆ. ಹೊಸ ನಿಯಮದಂತೆ ಒಂದು ಶಿಬಿರದಲ್ಲಿ ಗರಿಷ್ಠ ೫ ಆನೆಗಳನ್ನು ಮಾತ್ರ ಸಾಕಲು ಸಾಧ್ಯವಿದ್ದು, ಹೊಸ ಶಿಬಿರಗಳ ರಚನೆ ಮಾಡಲಾಗುವುದು ಎಂದು ಸರ್ಕಾರ ವಿವರಿಸಿದೆ.