ವೀರಾಜಪೇಟೆ, ಆ. ೨೮: ಮೀನುಪೇಟೆಯ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ೧೮ನೇ ವರ್ಷದ ಓಣಂ ಆಚರಣೆಯನ್ನು ಸೆಪ್ಟೆಂಬರ್ ೬ ರಂದು ಚೈತನ್ಯ ಮಠಪುರ ಶ್ರೀ ಮುತ್ತಪ್ಪ ಕಲಾಮಂಟಪದಲ್ಲಿ ವಿಜೃಂಭಣೆಯಿAದ ಆಯೋಜಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ೮.೩೦ ಗಂಟೆಗೆ ಮಹಾಬಲಿಯನ್ನು ಬರಮಾಡಿಕೊಂಡು, ಮುತ್ತಪ್ಪ ಸನ್ನಿಧಿಯಲ್ಲಿ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಬಳಿಕ ಮಹಾಬಲಿಯ ಮೆರವಣಿಗೆ ಬೆಳಿಗ್ಗೆ ೯.೩೦ಕ್ಕೆ ಶ್ರೀ ಮುತ್ತಪ್ಪ ದೇವಾಲಯದಿಂದ ಪ್ರಾರಂಭವಾಗಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ವಾದ್ಯಘೋಷಗಳೊಂದಿಗೆ ವೈಭವದ ಮೆರವಣಿಗೆ ಸಾಗಲಿದೆ.
ಇದೇ ವೇಳೆ ಹೂವಿನ ರಂಗೋಲಿ ಸ್ಪರ್ಧೆ ಪೂಕಳಂ ಬೆಳಿಗ್ಗೆ ೯ ರಿಂದ ೧೧ ಗಂಟೆಯವರೆಗೆ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ ೧೨ ಗಂಟೆಗೆ ಸಾಂಪ್ರದಾಯಿಕ ಓಣಂ ಭೋಜನ ಉಣಬಡಿಸಲಾಗುತ್ತದೆ ಎಂದರು.
ಮಧ್ಯಾಹ್ನ ೨ ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್, ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯನ್, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಸುರೇಶ್, ಎಸ್.ಎನ್.ಡಿ.ಪಿ. ಶಾಖೆಯ ಅಧ್ಯಕ್ಷ ನಾರಾಯಣ ಟಿ.ಎ., ಪ್ರಾಂಶುಪಾಲ ಡಾ. ರಾಮಚಂದ್ರ, ಮಾಜಿ ಬ್ಯಾಂಕ್ ವ್ಯವಸ್ಥಾಪಕ ಅಮ್ಮಣಿಚಂಡ ಸಾಬು ಸುಬ್ಬಯ್ಯ ಹಾಗೂ ಲೇಖಕಿ ಕೃಪಾ ದೇವರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
೨.೩೦ಕ್ಕೆ ತಿರುವಾದಿರೆ ನೃತ್ಯದೊಂದಿಗೆ ವೈವಿಧ್ಯಮಯ ಸಾಂಸ್ಕöÈತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ೧ ರಿಂದ ಸಂಜೆ ೬ ಗಂಟೆಯವರೆಗೆ ಪ್ರತಿ ಗಂಟೆಗೊಮ್ಮೆ ಉಚಿತ ಕೂಪನ್ ಡ್ರಾ ಹಾಗೂ ಸಂಜೆ ೬ ಗಂಟೆಗೆ ಓಣಂ ಸಹಾಯಾರ್ಥ ಕೂಪನ್ ಡ್ರಾ ನೆರವೇರಲಿದೆ.
ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಪುರುಷರು ಬಿಳಿ ಪಂಚೆ ಹಾಗೂ ಮಹಿಳೆಯರು ಸೆಟ್ ಸೀರೆಯನ್ನು ಧರಿಸಿ ಬೆಳಿಗ್ಗೆ ೯ ಗಂಟೆಯೊಳಗೆ ತಲುಪುವಂತೆ, ಭಾಗವಹಿಸುವ ಎಲ್ಲರಿಗೂ ಗಡಿಯಾರ ಕಂಬದ ಬಳಿ ಉಚಿತ ಕೂಪನ್ ನೀಡಲಾಗುವುದು. ಅಲ್ಲದೆ ರಂಗೋಲಿ ಹಾಗೂ ಸಾಂಸ್ಕöÈತಿಕ ಸ್ಪರ್ಧೆಗೆ ಮುಂಚಿತವಾಗಿ ಹೆಸರು ನೋಂದಾಯಿಸಿಕೊAಡವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಸಮಾಜದ ಗೌರವಾಧ್ಯಕ್ಷ ಪದ್ಮನಾಭ ಟಿ.ಕೆ., ಸಲಹೆಗಾರ ಪಿ.ಜೆ. ವಿಶ್ವನಾಥ್, ಕಾರ್ಯದರ್ಶಿ ಸಿ.ಆರ್. ಬಾಬು, ಸಿ.ಆರ್. ಸಜೀವನ್, ಸತೀಶ್ ಎಂ.ಎಸ್. ಸೇರಿದಂತೆ ಇತರರು ಇದ್ದರು.