ಸೋಮವಾರಪೇಟೆ, ಆ. ೨೮: ಮೈಸೂರಿನಲ್ಲಿ ನಡೆದ ಮೆಂಬರ್ಶಿಪ್ ಡೆವಲಪ್‌ಮೆಂಟ್ ಸೆಮಿನಾರ್ - ಅನ್ವೇಷಣಾ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ರೋಟರಿ ಹಿಲ್ಸ್ಗೆ ಪ್ರಶಸ್ತಿ ಲಭಿಸಿದೆ.

ಸೋಮವಾರಪೇಟೆ ರೋಟರಿ ಹಿಲ್ಸ್ಗೆ ಅತೀ ಹೆಚ್ಚಿನ ಮಂದಿಯನ್ನು ಸದಸ್ಯರನ್ನಾಗಿ ಸೇರ್ಪಡೆಗೊಳಿಸಿದ ಹಿನ್ನೆಲೆ ಅಧ್ಯಕ್ಷ ಬಿ.ಎಸ್. ಸುಂದರ್ ಅವರಿಗೆ ಪ್ರಶಸ್ತಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಪದಾಧಿಕಾರಿಗಳಾದ ಎ.ಎಸ್. ಮಲ್ಲೇಶ್, ಜಿ.ಡಿ. ನವೀನ್, ಲಿಖಿತ್ ದಾಮೋಧರ್, ವಿದ್ಯಾ ಸುಂದರ್, ಪೂರ್ಣಿಮಾ ಪ್ರೀತಮ್, ತೇಜಸ್ವಿನಿ ಪ್ರೀತಮ್, ನೇತ್ರಾ ಮಲ್ಲೇಶ್, ಲತಾ ನವೀನ್, ಶಿವಕುಮಾರ್, ರಾಜಶ್ರೀ ಸದಾನಂದ್, ಮಾಯಾ ಗಿರೀಶ್, ಹರ್ಷಿತಾ ಅಭಿನಂದನ್, ಪಿ.ಕೆ. ರವಿ, ಗಿರೀಶ್ ಅವರುಗಳು ಇದ್ದರು.