ವೀರಾಜಪೇಟೆ, ಆ. ೨೮: ವೀರಾಜಪೇಟೆ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ವಿರಾಜಪೇಟೆ ನಗರ ಪೊಲೀಸರು ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಶುಕ್ರವಾರ ದಿಢೀರ್ ತಪಾಸಣೆ ನಡೆಸಿದರು.
ನಗರದ ಮಾರುಕಟ್ಟೆ, ಬಸ್ ನಿಲ್ದಾಣ ಹಾಗೂ ಮೀನು ಮಾರುಕಟ್ಟೆ ಪರಿಸರದಲ್ಲಿ ತಪಾಸಣೆ ಹಾಗೂ ಅಸ್ಸಾಂ ಮೂಲದ ಕಾರ್ಮಿಕರನ್ನು ಪರಿಶೀಲಿಸಿದ ಪೊಲೀಸರು, ಅವರ ಗುರುತಿನ ಚೀಟಿ ಹಾಗೂ ವಾಸಸ್ಥಳದ ಮಾಹಿತಿಯನ್ನು ಕಲೆಹಾಕಿದರು.
ನಗರ ಪೊಲೀಸ್ ಠಾಣಾಧಿಕಾರಿ ಹೆಚ್.ಎಸ್. ಪ್ರಮೋದ್ ಕುಮಾರ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ತಪಾಸಣೆಯಲ್ಲಿ ಅಪರಾಧ ವಿಭಾಗದ ಪಿಎಸ್‌ಐ ಕಾವೇರಪ್ಪ ಟಿ.ಎಂ., ಎಎಸ್‌ಐಗಳಾದ ಮಂಜುನಾಥ್ ಟಿ.ಪಿ., ಚಂದ್ರಶೇಖರ್ ಸಿ., ಪ್ರಭಾಕರ್ ಸೇರಿದಂತೆ ಪೋಲಿಸ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಪಟ್ಟಣದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬAದಲ್ಲಿ ಸಾರ್ವಜನಿಕರು ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಈ ಸಂದರ್ಭ ಪೊಲೀಸರು ಮನವಿ ಮಾಡಿದರು.