ಮಡಿಕೇರಿ, ಆ. ೨೮: ಮೂರ್ನಾಡಿನ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಪೆಬ್ಬಾಟಂಡ. ಎ. ಪೆಮ್ಮಯ್ಯ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನೆರವೇರಿತು.
ಸಂಘದ ಅಧ್ಯಕ್ಷ ಮಾತನಾಡಿ ಸಂಘವು ರೂ. ೧೭.೬೨ ಲಕ್ಷ ಪಾಲು ಬಂಡವಾಳ ಹೊಂದಿದ್ದು, ರೂ. ೧೨.೫೩ ಕೋಟಿ ದುಡಿಯುವ ಬಂಡವಾಳದೊAದಿಗೆ, ಪ್ರಸಕ್ತ ಸಾಲಿನಲ್ಲಿ ರೂ. ೧೪.೮೦ ಕೋಟಿ ವ್ಯಾಪಾರ ವಹಿವಾಟು ನಡೆಸಿ, ರೂ. ೮೭.೧೬ ಲಕ್ಷ ವ್ಯಾಪಾರ ಲಾಭದೊಂದಿಗೆ, ಈ ಸಾಲಿನಲ್ಲಿ ರೂ. ೪೦.೩೯ ಲಕ್ಷ ನಿವ್ವಳ ಲಾಭಗಳಿಸಿದೆ. ಹಾಗೆಯೇ ಸಂಘದ ಹಳೆಯ ಕಟ್ಟಡ ತೆರವುಗೊಳಿಸಿ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿರುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಮುಂಡAಡ ಕೆ. ಕುಟ್ಟಪ್ಪ, ನಿರ್ದೇಶಕರುಗಳಾದ ಪುದಿಯೊಕ್ಕಡ ಎಸ್. ಸೋಮಯ್ಯ, ವಾಂಚಿರ ಕೆ. ಸುಭಾಷ್, ಬಡುವಂಡ ಎ. ಚಿಣ್ಣಪ್ಪ, ಮೂಡೆರ ಡಿ. ಅಯ್ಯಪ್ಪ, ಕೈಪೆಟ್ಟಿರ ಎಸ್. ಅಯ್ಯಪ್ಪ, ನೆರವಂಡ ಎನ್. ಉತ್ತಯ್ಯ, ನಾಯಕಂಡ ಸಿ. ಚಂಗಪ್ಪ, ಅವರೆಮಾದಂಡ ಎಂ. ಸುಬ್ಬಯ್ಯ, ಆಂಗಿರ ಎಂ. ಮಾದಪ್ಪ, ತೆಕ್ಕಡ ಶೋಭಾ ಮೋಹನ್, ಎ.ಸಿ. ಕನ್ನಿಕ, ಎಂ.ಟಿ. ದೇವಪ್ಪ, ಹೆಚ್‌ಎಸ್. ಗೋಪಾಲ ಹಾಗೂ ಕಾರ್ಯದರ್ಶಿ ಕಟ್ರತನ ಎಸ್. ಜಗದೀಶ್ ಹಾಜರಿದ್ದರು.