ಮಡಿಕೇರಿ, ಆ. ೨೮: ಸೋಮವಾಪೇಟೆ ತಾಲೂಕು ಮಟ್ಟದ ಪದವಿಪೂರ್ವ ವಿಭಾಗದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜು ತಂಡ ಜಯಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.
ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಶನಿವಾರಸಂತೆಯ ಕಾವೇರಿ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಪಂದ್ಯಾವಳಿಯಲ್ಲಿ ಮಾದಾಪುರ ಕಾಲೇಜು ತಂಡ ಜಯಗಳಿಸಿದೆ. ಅಂತಿಮ ಪಂದ್ಯಾವಳಿಯಲ್ಲಿ ಮಾದಾಪುರ ತಂಡ ಶನಿವಾರಸಂತೆ ಭಾರತಿ ಪದವಿಪೂರ್ವ ಕಾಲೇಜು ತಂಡವನ್ನು ೨-೧ ಗೋಲುಗಳಿಂದ ಮಣಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.
ಮಾದಾಪುರ ತಂಡದ ತರಬೇತುದಾರ ಎಂ.ಎ. ನಾಚಪ್ಪ ಅವರ ಮಾರ್ಗದರ್ಶನದಲ್ಲಿ ತಂಡ ಪಂದ್ಯಾವಳಿಯಲ್ಲಿ ಪಾಲ್ಗೊಂಡಿತ್ತು.