ಕಡಂಗ, ಆ. ೨೮: ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಚೋಕ್ಕಂಡಳ್ಳಿ ಕಂದೂರಿ ಈದ್ ಮಿಲಾದ್ ಕಾರ್ಯಕ್ರಮ ತಾ. ೨೯ ಮತ್ತು ೩೦ ರಂದು ವೀರಾಜಪೇಟೆ ಬಿಳುಗುಂದ ಸಮೀಪದ ಚೋಕಂಡಳ್ಳಿ ಗ್ರಾಮದಲ್ಲಿ ನೆಡೆಯಲಿದೆ ಎಂದು ಈದ್ ಮಿಲಾದ್ ಸಂರಕ್ಷಣಾ ಸಮಿತಿ ಸದಸ್ಯ ಮಜಿದ್ ಪಿ.ಎ. ತಿಳಿಸಿದ್ದಾರೆ.

ತಾ. ೨೯ರಂದು ಸಂಜೆ ಅಸರ್ ನಮಾಜಿನ ಬಳಿಕ ಈದ್ ಮಿಲಾದ್ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಎಂ. ರಫಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ರಾತ್ರಿ ೮.೩೦ ಗಂಟೆಗೆ ಕೇರಳದ ಪ್ರಖ್ಯಾತ ಭಾಷಣಗಾರ ಲುಕ್ ಮಾನುಲ್ ಹಕೀಮ್ ಪಾಳಿಲಿ ಕಣ್ಣೂರ್ ಭಾಷಣ ಮಾಡಲಿದ್ದಾರೆ. ಕುಬೈಬ್ ಸಖಾಫಿ ಮುದರಿಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ತಾ. ೩೦ ರಂದು ಬೆಳಿಗ್ಗೆ ಮೌಲಿದ್ ಪಾರಾಯಣ ಮತ್ತು ಆಕರ್ಷಕ ದಫ್ ಪ್ರದರ್ಶನ ಮತ್ತು ಸಂದೇಶ ಜಾಥಾ ನಡೆಯಲಿದೆ,

ಮಧ್ಯಾಹ್ನ ೧೨ಕ್ಕೆ ಸಾರ್ವಜನಿಕ ಸಮಾರಂಭ ಕಾರ್ಯಕ್ರಮದ ಪ್ರಾರ್ಥನೆಯನ್ನು ಸಯ್ಯದ್ ಮಹದಿ ತಂಗಳ್ ಲಕ್ಷದ್ವೀಪ ಮತ್ತು ಮುಖ್ಯ ಭಾಷಣಗಾರರಾಗಿ ಫಾಜಿಲ್ ನೂರಾನಿ ಕ್ಯಾಲಿಕಟ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ನಂತರ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಈ ಸಂದರ್ಭ ಅಧ್ಯಕ್ಷÀ ರಫಿ ಕೆ.ಎಂ., ಕಾರ್ಯದರ್ಶಿ ಪಿ.ಎ. ಸಿರಾಜುದ್ದಿನ್, ಮಜೀದ್ ಪಿ.ಎ., ಹುಸೇನ್ ಬಿ.ವೈ., ಆಶಿಮ್ ಟಿ.ಎಂ. ಇದ್ದರು.