ಮಡಿಕೇರಿ ಆ. ೨೮: ರೌಳತುಲ್ ಉಲೂಮ್ ದರ್ಸ್ ಸಂಘಟನೆಯ ಲಿವಾವ್ ಶರಿಯಾ ಸ್ಟುಡೆಂಟ್ ಅಸೋಸಿಯೇಷನ್ ವತಿಯಿಂದ ಸೆ.೩ ರಂದು ಬೆಳಿಗ್ಗೆ ೧೦ ಗಂಟೆಯಿAದ ರಾತ್ರಿ ೧೦ ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಕೋಶಾಧಿಕಾರಿ ರಶೀದ್ ಮುಸ್ಲಿಯಾರ್ ಪಯ್ಯಡಿ ಅವರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಿಗ್ಗೆ ೧೦ ಗಂಟೆಗೆ ದರ್ಸ್ ವಿದ್ಯಾರ್ಥಿಗಳಿಂದ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ೭ ಗಂಟೆಗೆ ಬೃಹತ್ ಮೌಲಿದ್ ಮಜ್ಲಿಸ್ ಹಾಗೂ ದುಆ ಮಜ್ಲಿಸ್ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಹಲವು ಸಾದಾತ್, ಉಲಮಾ, ಉಮರಾ ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಲವು ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದರ್ಸ್ ಕಾರ್ಯದರ್ಶಿ ಸಾಜಿದ್ ಪಯ್ಯಡಿ, ಜಲಾಲಿಯ ಅಧ್ಯಕ್ಷ ರಶೀದ್ ಮಕ್ಕಿ, ಸದಸ್ಯರಾದ ಮಜೀದ್ ಎಡೆಕೀರ, ರಾಶಿದ್ ಪಯ್ಯಡಿ ಹಾಗೂ ದರ್ಸ್ ವಿದ್ಯಾರ್ಥಿ ಆಶೀರ್ ಉಪಸ್ಥಿತರಿದ್ದರು.