ಮಡಿಕೇರಿ, ಆ. ೨೮: ಉಮ್ಮತ್ ಒನ್ ಕೊಡಗು ಸಂಘಟನೆಯ ವತಿಯಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ೧೫೦೧ನೇ ಜನ್ಮ ದಿನಾಚರಣೆಯ ಪ್ರಯುಕ್ತ ಕೊಡಗು ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಪ್ರಮುಖರಾದ ಸಿ.ಎಂ. ಹಮೀದ್ ಮೌಲವಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾದಿ ಪೈಗಂಬರವರು ಮನುಕುಲಕ್ಕೆ ನೀಡಿದ ಕೊಡುಗೆಗಳೇನು ಎಂಬ ವಿಷಯವನ್ನು ಮುಂದಿಟ್ಟುಕೊAಡು ಸ್ಪರ್ಧಿಗಳು ಕನ್ನಡದಲ್ಲಿ ಪ್ರಬಂಧವನ್ನು ಬರೆದು ಸೆ.೫ರ ಒಳಗಾಗಿ ಉಮ್ಮತ್‌ಒನ್ ಕೊಡಗು ಸಂಘಟನೆಯ ಮಡಿಕೇರಿ ಕಚೇರಿಗೆ ತಲುಪಿಸಬೇಕೆಂದು ಕೋರಿದರು.

ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವವರಿಗೆ ರೂ. ೧೫ ಸಾವಿರ, ದ್ವಿತೀಯ ರೂ. ೧೦ ಸಾವಿರ, ತೃತೀಯ ರೂ. ೫ ಸಾವಿರ ಬಹುಮಾನವನ್ನು ನೀಡಲಾಗುತ್ತದೆ ಎಂದರು. ಉಮ್ಮತ್ ಒನ್ ಕೊಡಗು ಸಂಘಟನೆಯ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.