ಮಡಿಕೇರಿ, ಆ. ೨೭: ಒಕಿನೊವ ಷೋರಿನ್-ರಿಯೋ ಕರಾಟೆ ಸಂಸ್ಥೆಯ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟçಮಟ್ಟದ ಇನ್ಡಿಪೆಂಡೆನ್ಸ್ ಕಪ್ ೨೦೨೬ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಮೂರ್ನಾಡಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಮೂರ್ನಾಡು ಎಜುಕೇಷನ್ ಸೊಸೈಟಿಯ ವಿದ್ಯಾರ್ಥಿಗಳಾದ ಅಲೈನಾ ಯು.ಎಸ್. ಅವರು ಕರಾಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಟ್ರೋಫಿ ಗಳಿಸಿದ್ದಾರೆ.
ರಿಫಾ ಫಾತಿಮಾ ಬಿ.ಆರ್. ಅವರು ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಟ್ರೋಫಿ ಪಡೆದಿದ್ದಾರೆ. ವರ್ಷಾ ಬಿ.ಎನ್. ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾರೆ.
ಮೂರ್ನಾಡು ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಬಿಪಿನ್ ಚಿಣ್ಣಪ್ಪ ಬಿ.ಎಂ. ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಟ್ರೋಫಿ ಗಳಿಸಿದ್ದಾರೆ. ದುಷ್ಯಂತ್ ಮುತ್ತಣ್ಣ ಕೆ.ವಿ. ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಟ್ರೋಫಿ ಪಡೆದಿದ್ದಾರೆ. ಸತೀಶ್ ಪಿ. ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದು ಹಾಗೂ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಜಿತೇಂದ್ರ ರಾತೋರ್ ಮತ್ತು ಆದಿ ಬೋಪಣ್ಣ ಟಿ.ಎಂ. ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾರೆ. ಚೇರಂಬಾಣೆಯ ಜಿ.ಹೆಚ್.ಪಿ. ಶಾಲೆಯ ಶ್ರಾವ್ಯ ಎಂ.ಕೆ. ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾರೆ.