ಮಡಿಕೇರಿ, ಆ. ೨೭: ನಂ. ೫೮೨ನೇ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೫-೨೬ನೇ ಸಾಲಿನಲ್ಲಿ ರೂ. ೪೬.೮೬ ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರ ಪಾಲು ಹಣದ ಮೇಲೆ ಶೇ. ೧೧.೫೦ ರಷ್ಟು ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿ, ಈ ಬಗ್ಗೆ ವಾರ್ಷಿಕ ಮಹಾಸಭೆಯ ಒಪ್ಪಿಗೆಗೆ ಮಂಡಿಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಮಂದ್ರೀರ ಎನ್. ತೇಜಸ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಘವು ಒಟ್ಟು ೧೨೬೧ ಎ ತರಗತಿ ಸದಸ್ಯರುಗಳನ್ನು ಒಳಗೊಂಡು ರೂ. ೧.೮೧ ಕೋಟಿ ಪಾಲು ಬಂಡವಾಳ ಹಾಗೂ ರೂ. ೨.೪೩ ಕೋಟಿ ಕ್ಷೇಮ ನಿಧಿಯನ್ನು ಹೊಂದಿದೆ. ಸಂಘದ ವಾರ್ಷಿಕ ವ್ಯವಹಾರ ರೂ.೧೪೪.೬೬ ಕೋಟಿಗಳಾಗಿದ್ದು, ಸಂಘದ ದುಡಿಯುವ ಬಂಡವಾಳ ರೂ.೨೭.೭೫ ಕೋಟಿಗಳಾಗಿದೆ. ಪ್ರಸ್ತುತ ರೂ. ೧೬.೩೯ ಕೋಟಿ ಠೇವಣಿಯನ್ನು ಸಂಗ್ರಹಿಸಿಲಾಗಿದ್ದು, ೨೦೨೫-೨೬ನೇ ಸಾಲಿನಲ್ಲಿ ಸದಸ್ಯರಿಗೆ ಕೃಷಿ ಮತ್ತು ಕೃಷಿಯೇತರ ಸಾಲವಾಗಿ ಒಟ್ಟು ರೂ. ೨೩.೦೨ ಕೋಟಿಯಷ್ಟು ಸಾಲ ವಿತರಿಸಲಾಗಿರುವುದಾಗಿ ತಿಳಿಸಿದರು.

ಸಂಘದ ಸ್ವಂತ ಬಂಡವಾಳದಿAದ ಸೂಮಾರು ರೂ. ೧೬.೨೦ ಕೋಟಿ ಸಾಲವನ್ನು ನೀಡಲಾಗಿದ್ದು, ವರದಿ ಸಾಲಿಗೆ ಶೇ.೯೯.೪೦ ರಷ್ಟು ಸಾಲ ವಸೂಲಿಯಾಗಿದೆ ಎಂದು ಅವರು ಮಾಹಿತಿ ನೀಡಿದರು. ಸಂಘವು ೧೯೭೩ ರಲ್ಲಿ ಸ್ಥಾಪಿತವಾಗಿ ಹಾಕತ್ತೂರು, ಬಿಳಿಗೇರಿ, ಕಗ್ಗೋಡ್ಲು, ಹಾಗೂ ಮೇಕೇರಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ. ಮೇಕೇರಿ ಶಾಖೆಯ ೬ ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. ಸಂಘವು ರೈತರಿಗೆ ಅನುಕೂಲವಾಗುವಂತೆ ಮಣ್ಣು ಪರೀಕ್ಷಾ ಯಂತ್ರವನ್ನು ಹಾಗೂ ಕಾಫಿ ಔಟರ್ನ್ ಯಂತ್ರ ಅಳವಡಿಸಿದ್ದು, ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.

ಸಂಘದಿAದ ಪ್ರತಿ ವರ್ಷವು ಸದಸ್ಯರ ಮಕ್ಕಳಲ್ಲಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ, ಮತ್ತು ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಗುತ್ತಿದೆ. ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ತಾ. ೨೯ ರಂದು ಪೂರ್ವಾಹ್ನ ೧೦.೩೦ ಕ್ಕೆ ಸಂಘದ ಮುಖ್ಯ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ ಉಮೇಶ್, ನಿರ್ದೇಶಕರುಗಳಾದ ಪರ್ಲಕೋಟಿ ಎ ಕಾವೇರಪ್ಪ, ತುಂತಜ್ಜಿರ ಆರ್ ತಿಮ್ಮಯ್ಯ, ಚೋಂಡಿರ ಜಿ ಚೆಂಗಪ್ಪ, ಹೆಚ್.ಆರ್. ವಾಸಪ್ಪ ಹಾಜರಿದ್ದರು.