ಭಾಗಮಂಡಲ, ಆ. ೨೭: ೨೦೨೫ -೨೬ರ ಸಾಲಿನಲ್ಲಿ ಸಂಘವು ರೂ ೭೦.೬೧ ಲಕ್ಷ ಲಾಭ ಗಳಿಸಿದ್ದು ಇದು ಕಳೆದ ವರ್ಷಕ್ಕಿಂತ ೭.೭೯ ಲಕ್ಷದಷ್ಟು ಹೆಚ್ಚಾಗಿದೆ ಎಂದು ಭಾಗಮಂಡಲದ ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಹೇಳಿದರು.
ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಕಳೆದ ವರ್ಷ ಸಂಘವು ರೂ. ೬೨.೮೧ ಲಕ್ಷ ಲಾಭಗಳಿಸಿತ್ತು. ಈ ವರ್ಷ ಲಾಭದ ಪ್ರಮಾಣದಲ್ಲಿ ಏರಿಕೆಯಾಗಿದೆ. ಸಂಘದಲ್ಲಿ ಎ ತರಗತಿ ಸದಸ್ಯತ್ವ ಹೊಂದಿದವರು೧೨೭೩ ಮಂದಿ ಆಗಿದ್ದು ಅವರ ಪಾಲು ಬಂಡವಾಳ ೨೫ ಲಕ್ಷಗಳಾಗಿವೆ. ಬಿ ತರಗತಿ ಸದಸ್ಯತ್ವ ಹೊಂದಿದವರು ೨೩ ಮಂದಿ ಇದ್ದು ಪಾಲು ಬಂಡವಾಳ ೪೬೦೦೦ ಆಗಿದ್ದು ಪಾಲು ಬಂಡವಾಳ ೨೫.೪೭ ಲಕ್ಷ ರೂಗಳಾಗಿವೆ ಎಂದರು.
೨೦೨೬ರ ಮಾರ್ಚ್ ಅಂತ್ಯಕ್ಕೆ ಮರಣ ನಿಧಿ ಸದಸ್ಯತ್ವ ಹೊಂದಿದವರು ೧೫೪೩ ಮಂದಿ ಆಗಿದ್ದು ೧೪ ಮಂದಿ ಮೃತಪಟ್ಟಿದ್ದು ಅವರಿಗೆ ಮರಣ ನಿಧಿ ೩ ಲಕ್ಷ ರೂಪಾಯಿಗಳನ್ನು ಪಾವತಿಸಲಾಗಿದೆ. ಸಂಘದ ದುಡಿಯುವ ಬಂಡವಾಳ ೧೩.೪೦ ಕೋಟಿ ರೂಪಾಯಿಗಳಾಗಿವೆ. ಸಂಘದ ವತಿಯಿಂದ ೨.೫೯ ಕೋಟಿ ರೂಪಾಯಿಗಳ ಜೇನು ಖರೀದಿಸಲಾಗಿದ್ದು, ೫.೨೦ ಕೋಟಿ ರೂಪಾಯಿಗಳ ಜೇನು ಮಾರಾಟ ಮಾಡಲಾಗಿದೆ. ಒಟ್ಟು ವ್ಯವಹಾರ ೨೯.೫೬ ಕೋಟಿ ರೂಪಾಯಿಗಳಾಗಿದ್ದು ಇದು ಈ ಹಿಂದಿನ ಆರು ವರ್ಷಗಳಲ್ಲಿ ಅತ್ಯಧಿಕ ವ್ಯವಹಾರವಾಗಿದೆ ಎಂದರು. ಸದಸ್ಯರಿಗೆ ಕಳೆದ ೨೨ ವರ್ಷಗಳಿಂದ ಶೇ. ೨೫ ರಷ್ಟು ಡಿವಿಡೆಂಡ್ ಪಾವತಿಸಲಾಗಿದೆ. ೭೮ ಮಂದಿ ಕೃಷಿಕರಿಗೆ ಸಹಾಯಧನ ವಿತರಿಸಲಾಗಿದೆ. ೪.೧೫ ಲಕ್ಷ ಮೌಲ್ಯದ ಈ ಸ್ಟ್ಯಾಂಪಿAಗ್ ತರಿಸಲಾಗಿದೆ. ಸಂಘದ ತಾವೂರು ಗ್ರಾಮದ ಸರ್ವೆ ನಂಬರ್ ೧೮೯/೬ ರಲ್ಲಿ ಇರುವ ಜಾಗದಲ್ಲಿ ೧.೬೯ ಲಕ್ಷ ವೆಚ್ಚದಲ್ಲಿ ಸಿಮೆಂಟ್ ಕಾಂಪೌAಡ್ ನಿರ್ಮಿಸಲಾಗಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಮುಖಾಂತರ ಸಂಘದ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ೫೦,೦೦೦ ಧನ ಸಹಾಯ ದೊರಕಿದ್ದು ಇದನ್ನು ಸಂಘಕ್ಕೆ ಸಿಸಿಟಿವಿ ಅಳವಡಿಕೆಗೆ ಬಳಕೆ ಮಾಡಿಕೊಳ್ಳಲಾಗಿದೆ. ತಾವೂರು ಜಾಗದ ಸರ್ವೆ ನಂಬರ್ ೧ /೩೮ರ ಜಾಗದ ಸರ್ವೆ ಕಾರ್ಯ ನಡೆಸಲಾಗಿದ್ದು ಮೂರು ಎಕರೆ ಜಾಗದಲ್ಲಿ ಎರಡು ಎಕರೆಯಷ್ಟು ಕಾಫಿ ತೋಟದಲ್ಲಿ ಒಂದು ಎಕರೆ ಒತ್ತುವರಿ ಆಗಿರುವುದನ್ನು ಸರ್ವೆ ಅಧಿಕಾರಿಗಳು ವರದಿ ನೀಡಿದ್ದು ಈ ವರದಿಯ ಅನ್ವಯ ಹಿಡುವಳಿದಾರರಿಗೆ ನೋಟೀಸ್ ನೀಡಿ ಆಡಳಿತ ಮಂಡಳಿ ಮಹಾಸಭೆಯಲ್ಲಿ ಚರ್ಚಿಸಿ ಒತ್ತುವರಿ ಹಿಡುವಳಿದಾರರಿಗೆ ಅವರ ಜಾಗವನ್ನು ಗುರುತಿಸಲು ಸರ್ವೆ ಕಾರ್ಯ ನಡೆಸಲು ಸಮಯಾವಕಾಶವನ್ನು ನೀಡಲಾಗಿದೆ ಎಂದು ತಿಳಿಸಿದರು. ಅನುಪಯುಕ್ತ ವಸ್ತುಗಳನ್ನು ಇಲಾಖೆಯ ಅನುಮೋದನೆ ಪಡೆದು ರೂ. ೪೦,೦೦೦ಕ್ಕೆ ಟೆಂಡರ್ ಪ್ರಕ್ರಿಯೆ ನಡೆಸಿ ಅ ವಿಲೇವಾರಿ ಮಾಡಲಾಗಿದೆ. ಕುಶಾಲನಗರ ಶಾಖೆಯು ನಷ್ಟದಲ್ಲಿ ಇರುವುದರಿಂದ ೨೦೨೬ ಜುಲೈ ತಿಂಗಳಿAದ ಶಾಖೆಯನ್ನು ಮುಚ್ಚಲಾಗಿದೆ ಎಂದರು. ಈ ಸಂದರ್ಭ ಸಭೆಯಲ್ಲಿ ರೈತ ಹೋರಾಟಗಾರ ಸುಬ್ರಮಣಿ, ಕಸ್ತೂರಿ ರಂಗನ್ ವರದಿ ವಿರೋಧಿಸಿ ನಿರ್ಣಯವನ್ನು ಕೈಗೊಳ್ಳುವಂತೆ ಸಭೆಗೆ ಮಾಹಿತಿ ಮಾಹಿತಿ ನೀಡಿದರು. ಬಳಿಕ ನಿರ್ಣಯ ಕೈಗೊಂಡು ಅಧಿಕಾರಿಗೆ ಕಳುಹಿಸುವಂತೆ ತೀರ್ಮಾನಿಸಲಾಯಿತು. ಈ ಸಂದರ್ಭ ಸದಸ್ಯರ ಮಕ್ಕಳಲ್ಲಿ ಪಿಯುಸಿ ಮತ್ತು ೧೦ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು
ಸಭೆಯಲ್ಲಿ ಕಾರ್ಯನಿರ್ವಹಣಾ ಅಧಿಕಾರಿ ಸುಧಾ, ಖಾದಿ ಮಂಡಳಿಯ ರಾಮಕೃಷ್ಣ, ನಿರ್ದೇಶಕರುಗಳಾದ ದಿನೇಶ್, ಗೋಪಾಲ, ಲೋಕನಾಥ್ ,ಅಶ್ವಥ್, ಎ.ದಿನೇಶ್ ಭಾಸ್ಕರ್, ಮೋಹನ್, ಜಯಂತ್, ಕುಸುಮ, ಲೋಕ ಪ್ರಕಾಶ್, ಬೋಪಣ್ಣ, ಸೌಮ್ಯ ಉಪಸ್ಥಿತರಿದ್ದರು
ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.
ಸುನಿಲ್