ಸಿದ್ದಾಪುರ, ಆ. ೨೭: ಸಿದ್ದಾಪುರದ ಅಂಬೇಡ್ಕರ್ ನಗರದ ಶ್ರೀ ಸಿದ್ಧಿ ವಿನಾಯಕ ಮಿತ್ರ ಮಂಡಳಿಯ ನೂತನ ಅಧ್ಯಕ್ಷರಾಗಿ ಹೆಚ್.ಎಸ್. ರವಿ ಆಯ್ಕೆಗೊಂಡಿದ್ದಾರೆ. ಅಂಬೇಡ್ಕರ್ ನಗರದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಸ್. ರವಿ, ಗೌರವ ಅಧ್ಯಕ್ಷರಾಗಿ ಸುರೇಶ್ ಬಾಬು , ಉಪಾಧ್ಯಕ್ಷರಾಗಿ ಸುರೇಶ್, ಕಾರ್ಯದರ್ಶಿಗಳಾಗಿ ಪ್ರಶಾಂತ್ ಮತ್ತು ಕೃಷ್ಣಪ್ಪ, ಖಜಾಂಚಿ ಶಿವ ಮತ್ತು ಟೋನಿ ಅವರುಗಳನ್ನು ಆಯ್ಕೆ ಮಾಡಲಾಯಿತು. ನಂತರ ಕಾರ್ಯಕಾರಿ ಸಮಿತಿಯ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಂಬರುವ ಗೌರಿ -ಗಣೇಶ ಉತ್ಸವವನ್ನು ವಿಜೃಂಭಣೆಯಿAದ ಆಚರಿಸಲು ನಿರ್ಧರಿಸಲಾಯಿತು.