ಪ್ರತಿಯೊಂದು ಊರಿಗೂ ಅದರದ್ದೇ ಆದ ಸಾಂಸ್ಕöÈತಿಕ ಚರಿತ್ರೆ ಇರುತ್ತದೆ. ಅಂತೆಯೇ ಪಂಜರಪೇಟೆಯ ಶ್ರೀ ವಿನಾಯಕ ಸೇವಾ ಸಮಿತಿಯ ಗಣೇಶೋತ್ಸವದ ಹಿಂದೆ ಸಾಮರಸ್ಯ, ತ್ಯಾಗ ಮತ್ತು ಊರಿನ ಒಗ್ಗಟ್ಟಿನ ರೋಚಕ ಕಥೆಯೊಂದಿದೆ.
ಇದೀಗ ೩೨ನೇ ವರ್ಷದ ಸಂಭ್ರಮಕ್ಕೆ ಕಾಲಿಡುತ್ತಿರುವ ಈ ಗಣೇಶೋತ್ಸವದ ಪಯಣ ಆರಂಭವಾಗಿದ್ದು ಕಲ್ಲುಬಾಣೆ ಯಲ್ಲಿ. ಮೂರು ದಶಕಗಳ ಹಿಂದೆ, ಕಲ್ಲುಬಾಣೆಯಲ್ಲಿ 'ವಿಘ್ನೇಶ್ವರ ಸೇವಾ ಸಮಿತಿ' ಎಂಬ ಹೆಸರಿನಲ್ಲಿ ಐದು ವರ್ಷಗಳ ಕಾಲ ಗಣೇಶೋತ್ಸವವನ್ನು ನಡೆಸಲಾಗುತ್ತಿತ್ತು. ಆ ಜಾಗವು ಊರಿನ ಒಳಭಾಗದಲ್ಲಿದ್ದುದರಿಂದ ಧಾರ್ಮಿಕ ಸಂಭ್ರಮ ಎಲ್ಲರಿಗೂ ಸುಲಭವಾಗಿ ತಲುಪಬೇಕು, ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂಬ ಕೆಲವರ ಅಭಿಪ್ರಾಯದಂತೆ ಕಲ್ಲುಬಾಣೆಯಲ್ಲಿದ್ದ ಉತ್ಸವವನ್ನು ಪಂಜರಪೇಟೆಯಲ್ಲಿದ್ದ ಖಾಸಗಿ ಬಾಣೆ ಜಾಗದಲ್ಲಿ ರಸ್ತೆ ಬದಿಯ ಆಯಕಟ್ಟಿನ ಸ್ಥಳಕ್ಕೆ ವರ್ಗಾಯಿಸಲಾಯಿತು. ಕಲ್ಲುಬಾಣೆ ಹಾಗೂ ಪಂಜರಪೇಟೆ ಜನರೆಲ್ಲರೂ ಒಗ್ಗೂಡಿ ಶ್ರೀ ವಿನಾಯಕ ಸೇವಾ ಸಮಿತಿ ಎಂದು ಹೊಸದಾಗಿ ನಾಮಕರಣ ಮಾಡಿ, ಹಬ್ಬವನ್ನು ಊರಿನ ಹಬ್ಬವಾಗಿ ಪರಿವರ್ತಿಸಿದರು.
ಬದಲಾವಣೆ ಸಂದರ್ಭ ದಿ. ವಿ.ಟಿ. ಚಂದ್ರಶೇಖರ್ ಮೊದಲಿಯಾರ್ ನೂತನ ಸಮಿತಿಯ ಮೊದಲ ಅಧ್ಯಕ್ಷರಾಗಿ ಈ ಧಾರ್ಮಿಕ ಕಾರ್ಯಕ್ಕೆ ಅಡಿಪಾಯ ಹಾಕಿದರು. ಅವರಿಗೆ ಹೆಗಲು ಕೊಟ್ಟು ನಿಂತವರು ಬೊಳಿಯಾಡಿರ ಪ್ರಭು ದೇವಯ್ಯ, ಟಿ.ಎ. ನಾರಾಯಣ, ಗಣೇಶ್ ಮೊದಲಿಯಾರ್ ಮೊದಲಾದವರು.
ಪಂಜರಪೇಟೆಯಲ್ಲಿ ಶ್ರೀ ಗಣೇಶನ ಆಗಮನವಾಗಲೇಬೇಕು ಎಂದು ಸಂಕಲ್ಪ ತೊಟ್ಟವರಲ್ಲಿ ದಿ. ವರ್ಗೀಸ್, ಕೂವಲೇರ ಉಮ್ಮರ್, ಮಳವಂಡ ರಮೇಶ್ ಹಾಗೂ ಪ್ರಮುಖರು. ಇವರ ಮುತುವರ್ಜಿ, ಶ್ರಮದಿಂದ ಹೊಸ ಸಮಿತಿ ಉದಯಿಸಿ, ಜಾತಿ-ಮತಗಳ ಹಿತಾಸಕ್ತಿಯನ್ನು ಮೀರಿದ ಭಾವೈಕ್ಯತೆಯ ಕೇಂದ್ರವಾಯಿತು.
ಈ ಗಣೇಶೋತ್ಸವಕ್ಕೆ ಮತ್ತೊಂದು ಭಕ್ತಿಪೂರ್ವಕ ಮೆರುಗು ನೀಡುತ್ತಿರುವುದು ಗಣೇಶ್ ಮೊದಲಿಯಾರ್ ಕುಟುಂಬ. ಗಣೇಶೋತ್ಸವ ಆರಂಭವಾದ ಮೊದಲ ವರ್ಷದಿಂದ ಇಂದಿನವರೆಗೂ, ವಿಘ್ನವಿನಾಯಕನ ಮೂರ್ತಿಯನ್ನು ಗಣೇಶ್ ಅವರ ಕುಟುಂಬವೇ ನೀಡುತ್ತಾ ಬಂದಿದೆ.
ಉತ್ಸವದ ಪ್ರತಿಷ್ಠಾಪನೆಗೂ ಮುನ್ನ ಗಣೇಶನ ಮೂರ್ತಿಯನ್ನು ಗಣೇಶ್ ಮೊದಲಿಯಾರ್ ಅವರ ನಿವಾಸದಿಂದಲೇ ಮಂಗಳವಾದ್ಯಗಳೊAದಿಗೆ, ಶಾಸ್ತೊçÃಕ್ತವಾಗಿ ಮೆರವಣಿಗೆಯ ಮೂಲಕ ಪ್ರತಿಷ್ಠಾಪನಾ ಮಂಟಪಕ್ಕೆ ತರಲಾಗುತ್ತದೆ. ಈ ಅಪರೂಪದ ಸಂಪ್ರದಾಯವು ಗಣೇಶೋತ್ಸವಕ್ಕೆ ವಿಶಿಷ್ಟವಾದ ಹಿರಿಮೆಯನ್ನು ತಂದಿಟ್ಟಿದೆ.
ಹಿರಿಯರು ಹಾಕಿಕೊಟ್ಟ ಭವ್ಯ ಪರಂಪರೆಯನ್ನು ಅತ್ಯಂತ ಗೌರವದಿಂದ ಮುನ್ನಡೆಸಿಕೊಂಡು ಹೋಗು ತ್ತಿದ್ದು, ಪ್ರಸ್ತುತ ಲವಕುಮಾರ್ ಅವರ ಅಧ್ಯಕ್ಷತೆಯಲ್ಲಿ, ಬಿ.ಟಿ. ಪದ್ಮನಾಭ (ಉಪಾಧ್ಯಕ್ಷರು), ಎನ್. ವಿನೋದ್ (ಕಾರ್ಯದರ್ಶಿ) ಹಾಗೂ ಮಾಜಿ ಯೊಧರಾದ ಜಿ.ಎನ್. ನಿತಿನ್ ತಿಮ್ಮಯ್ಯ (ಖಜಾಂಚಿ) ಅವರ ಶಿಸ್ತುಬದ್ಧ ನೇತೃತ್ವದಲ್ಲಿ ೩೨ನೇ ವರ್ಷದ ವೈಭವದ ಗಣೇಶೋತ್ಸವಕ್ಕೆ ಪಂಜರಪೇಟೆ ಸಜ್ಜಾಗಿದೆ.
ಹಿರಿಯರ ಕನಸು, ಗಣೇಶ್ ಮೊದಲಿಯಾರ್ ಕುಟುಂಬದ ಅಖಂಡ ಸೇವೆ, ಯುವಕರ ಉತ್ಸಾಹ ಹಾಗೂ ಊರಿನ ಜನರ ಪ್ರೀತಿ, ಎಲ್ಲವೂ ಸಮ್ಮಿಳಿತಗೊಂಡು ಪಂಜರಪೇಟೆ ಶ್ರೀ ವಿನಾಯಕ ಸೇವಾ ಸಮಿತಿಯು ಇಂದು ಸಾಂಸ್ಕöÈತಿಕ ಮತ್ತು ಧಾರ್ಮಿಕ ಏಕತೆಗೆ ಮಾದರಿಯಾಗಿ ಕಂಗೊಳಿಸುತ್ತಿದೆ.
-ರಜಿತ ಕಾರ್ಯಪ್ಪ,
ವೀರಾಜಪೇಟೆ.
ಮೊ: ೯೪೮೧೭೭೧೮೫೧