ಶನಿವಾರಸAತೆ, ಆ. ೨೭: ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸರ್ವ ಸದಸ್ಯರ ಸಹಕಾರದಿಂದ ಅಭಿವೃದ್ಧಿ ಹೊಂದುತ್ತಿದ್ದು, ೨೦೨೫-೨೬ನೇ ಸಾಲಿನಲ್ಲಿ ರೂ. ೧,೧೫,೮೮,೧೦೦.೯೦ ನಿವ್ವಳ ಲಾಭ ಗಳಿಸಿದ್ದು ‘ಎ’ ಗ್ರೇಡ್ ಪಡೆದಿದೆ ಎಂದು ಸಂಘದ ಅಧ್ಯಕ್ಷ ಎಸ್.ಡಿ. ತಮ್ಮಯ್ಯ ಸಂತೋಷ ವ್ಯಕ್ತಪಡಿಸಿದರು.

ಕೊಡ್ಲಿಪೇಟೆಯ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘವು ಪೂರ್ಣ ಪ್ರಮಾಣದ ೪೪೦೭ ಸದಸ್ಯತ್ವವನ್ನು ಹೊಂದಿದ್ದು ೨೦೨೫-೨೬ನೇ ಸಾಲಿನವರೆಗೆ ರೂ. ೧೮,೫೧,೫೬.೩೦೮.೨೨ ಠೇವಣಿ ಸಂಗ್ರಹಿಸಲಾಗಿದೆ. ಲಾಭ ವಿಲೇವಾರಿ ಬಾಕಿ ಇದ್ದು ಪ್ರಸಕ್ತ ಸಾಲಿನಲ್ಲಿ ಶೇ. ೧೫ ಡಿವಿಡೆಂಡ್ ನೀಡಲಾಗುವುದು. ಸರ್ಕಾರದ ವತಿಯಿಂದ ೮೨೫ ಜನರಿಗೆ ಉಚಿತ ಅನ್ನಭಾಗ್ಯ ಯೋಜನೆಯನ್ನು ತಲುಪಿಸಲಾಗಿದೆ ಎಂದರು. ಸದಸ್ಯರುಗಳಾದ ಭಗವಾನ್ ಗೌಡ, ಸುಧೀರ್ ಕುಮಾರ್, ಇಂದ್ರೇಶ್, ಹರೀಶ್, ಕಿರಿಬಿಳಾಹ ಪ್ರಕಾಶ್, ಮಾಜಿ ನಿರ್ದೇಶಕರಾದ ಸುಬ್ರಮಣ್ಯ ಆಚಾರ್, ಊರುಗುತ್ತಿ ಅಶೋಕ್ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಅಗಲಿದ ಸದಸ್ಯರುಗಳಿಗೆ ಶ್ರದ್ಧಾಂಜಲಿ ಅರ್ಪಿಸಿ, ಮೌನಾಚರಣೆ ಮಾಡಲಾಯಿತು.ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ವೈ. ಮಂಜುನಾಥ್ ವಾರ್ಷಿಕ ವರದಿ, ಹಿಂದಿನ ವಾರ್ಷಿಕ ಮಹಾಸಭೆಯ ನಡಾವಳಿ, ಇತರ ವರದಿಗಳನ್ನು ಮಂಡಿಸಿದರು.

ಸAಘದ ಉಪಾಧ್ಯಕ್ಷ ಹೆಚ್.ಜೆ. ಪ್ರವೀಣ್, ನಿರ್ದೇಶಕರಾದ ಬಿ.ಕೆ.ಯತೀಶ್, ಜೆ.ಕೆ. ತೇಜ್ ಕುಮಾರ್, ಕೆ.ಎಂ. ವಹಾಬ್, ಡಾ. ಸಿ.ಆರ್.ಉದಯಕುಮಾರ್, ಕೆ.ಆರ್. ಚಂದ್ರಶೇಖರ್, ಕೆ.ಡಿ. ನಾಗರಾಜ್, ಬಿ.ಕೆ.ರಂಜಿತಾ, ಕೆ.ವಿ. ಮಲ್ಲೇಶ್, ಕೆ.ಎಂ. ಪುಷ್ಪಲತಾ, ಬಿ.ಎಸ್. ದೊಡ್ಡಯ್ಯ, ಕೆ.ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕ ಹೆಚ್.ಎನ್. ರಘು ಉಪಸ್ಥಿತರಿದ್ದರು.ಕಿರಿಯ ಸಹಾಯಕರು, ಸಿಬ್ಬಂದಿ ಹಾಗೂ ಪಿಗ್ಮಿ ಸಂಗ್ರಾಹಕರು ಹಾಜರಿದ್ದರು. ಸಂಘದ ಉಪಾಧ್ಯಕ್ಷ ಹೆಚ್.ಜೆ. ಪ್ರವೀಣ್ ಸ್ವಾಗತಿಸಿ, ನಿರ್ದೇಶಕ ಕೆ.ಆರ್.ಚಂದ್ರಶೇಖರ್ ವಂದಿಸಿದರು. ವ್ಯವಸ್ಥಾಪಕ ಯು.ವೈ. ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು.