ಮಡಿಕೇರಿ, ಆ. ೨೭: ಮಡಿಕೇರಿ-ಮೈಸೂರು ರಸ್ತೆಯ ಚೈನ್ ಗೇಟ್ ಬಳಿಯ ಬಸ್ ತಂಗುದಾಣದಲ್ಲಿ ಅಪರಿಚಿತ ವ್ಯಕ್ತಿಯೋರ್ವರು ಅಸ್ವಸ್ಥನಾಗಿದ್ದು, ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ತಾ.೧೯ ರಂದು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ತಾ.೨೪ ರಂದು ವ್ಯಕ್ತಿ ಮೃತಪಟ್ಟಿದ್ದು, ಚಿಕಿತ್ಸೆಗೆ ದಾಖಲಾಗುವ ಸಂದರ್ಭ ಅವರ ಹೆಸರು ಮೋಹನ್ ಎಂಬುದಾಗಿ ತಿಳಿಸಿದ್ದಾರೆ.

ಅಂದಾಜು ೪೫ ವರ್ಷ ಪ್ರಾಯದ ಈ ವ್ಯಕ್ತಿಯ ವಾರಿಸುದಾರರು ಯಾರಾದರು ಇದ್ದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣೆ, ದೂ: ೦೮೨೭೨-೨೨೯೩೩೩ ಅನ್ನು ಸಂಪರ್ಕಿಸುವAತೆ ಕೋರಿದೆ.