ಮಡಿಕೇರಿ, ಆ. ೨೬: ಹಿಂದೂ ಮಲಯಾಳಿ ಸಮುದಾಯದ ಪ್ರಮುಖ ಹಬ್ಬಗಳಲ್ಲೊಂದಾದ ತಿರು ಓಣಂ ಹಬ್ಬವನ್ನು ನಾಡಿನಾದ್ಯಂತ ಸಂಭ್ರಮದಿAದ ಆಚರಿಸಲಾಯಿತು.

ಕಳೆದ ಹತ್ತು ದಿನಗಳಿಂದ ಮನೆಯ ಮುಂದೆ ಹೂವಿನ ರಂಗೋಲಿ(ಪೂಕಳA) ಬಿಡಿಸುತ್ತಾ ಆಚರಣೆ ಮಾಡಿಕೊಂಡು ಬರಲಾಗಿದ್ದು, ಕೊನೆಯ ದಿನವಾದ ಇಂದು ಆಕರ್ಷಕ ರಂಗೋಲಿ ಬಿಡಿಸುವದರೊಂದಿಗೆ ಮನೆ ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಲಿ ಚಕ್ರವರ್ತಿಯನ್ನು ನೆನೆಯುತ್ತಾ, ಮಹಾವಿಷ್ಣುವಿಗೆ ನಮಿಸಿ ಹಬ್ಬಾಚರಣೆ ಮಾಡಲಾಯಿತು. ಹೊಸ ಬಟ್ಟೆ ತೊಟ್ಟು, ವಿವಿಧ ಬಗೆಯ ಖಾದ್ಯಗಳನ್ನು (ಓಣಂ ಸದ್ಯ) ತಯಾರಿಸಿ ಸಹಭೋಜನದೊಂದಿಗೆ ಸಂಭ್ರಮಿಸಲಾಯಿತು.

ಜಿಲ್ಲಾ ಕೇಂದ್ರ ಮಡಿಕೇರಿಯ ಶ್ರೀ ಮುತ್ತಪ್ಪನ್ ಕ್ಷೇತ್ರದಲ್ಲಿ ಬೆಳಿಗ್ಗೆ ಹೂವಿನ ರಂಗೋಲಿ ಬಿಡಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.