ಮಡಿಕೇರಿ, ಆ. ೨೭: ಪ್ರತಿಯೊಬ್ಬರೂ ಒಳ್ಳೆಯ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಿರಂತರವಾಗಿ ಪ್ರಯತ್ನ ಮಾಡಬೇಕು ಎಂದು ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಪರಹಿತಾ ನಂದ ಮಹಾರಾಜ್ ಅವರು ಕರೆ ನೀಡಿದರು.

ವಿಶ್ವ ವೇದಾಂತ ವೇದಿಕೆ ಅಧ್ಯಕ್ಷ ಸ್ವಾಮಿ ಸೋಮನಾಥಾನಂದಪುರಿ ಅವರು ರಚಿಸಿರುವ ಓಂಕಾರ ಲೋಕ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ರಾಷ್ಟಿçÃಯ ಸ್ವಯಂಸೇವಕ ಸಂಘದ ಕೊಡಗು ಜಿಲ್ಲಾ ಸಂಘಚಾಲಕ್ ಹಾಗೂ ವನವಾಸಿ ಕಲ್ಯಾಣ ಆಶ್ರಯದ ರಾಜ್ಯ ಅಧ್ಯಕ್ಷ ಚಕ್ಕೇರ ಮನು ಕಾವೇರಪ್ಪ ಅವರು ಆಶಯ ನುಡಿಯಾಡಿದರು. ವಿಶ್ವ ಹಿಂದೂ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಾತಂಡ ಟಾಟಾ ಬೋಪಯ್ಯ ಅವರು ಈ ವೇಳೆ ಶುಭ ಹಾರೈಸಿದರು.

ಈ ವೇಳೆ ಸ್ವಾಮಿ ಸೋಮನಾಥಾನಂದಪುರಿ, ಆಶ್ರಮದ ಸ್ವಾಮಿ ಮಹಾ ಪ್ರೇಮಾನಂದರು ಹಾಗೂ ಉದ್ಯಮಿ ಸುರೇಶ್ ಬಾಬು ಎಂ. ಬಿ. ಪುನೀತ್ ಚಂಗಪ್ಪ ಸೇರಿದಂತೆ ಶ್ರೀ ಮಠದ ಅನುಯಾಯಿಗಳು ಉಪಸ್ಥಿತರಿದ್ದರು.