ಚೆಟ್ಟಳ್ಳಿ, ಆ. ೨೬: ಕಾಫಿ ತೋಟ ಕಾರ್ಮಿಕರ ಮಕ್ಕಳಿಗೆ ರೂ. ೫ ಸಾವಿರ ಶೈಕ್ಷಣಿಕ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಕಾಫಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ನೋಂದಾಯಿತ ಕಾಫಿ ತೋಟಗಳು ಹಾಗೂ ಕಾಫಿ ಕ್ಯೂರಿಂಗ್ ಘಟಕಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರ ಮಕ್ಕಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ೧೦ನೇ ತರಗತಿ ಉತ್ತೀರ್ಣರಾಗಿ ಪ್ರಥಮ ಪಿಯುಸಿ, ಪಾಲಿಟೆಕ್ನಿಕ್, ಡಿಪ್ಲೊಮಾ ಅಥವಾ ಇತರೆ ವೃತ್ತಿಪರ ತರಬೇತಿ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರ, ಅಂಕಪಟ್ಟಿ, ವಿದ್ಯಾರ್ಥಿಯ ಗುರುತಿನ ಚೀಟಿ, ಆಧಾರ್ ಕಾರ್ಡ್, ಅನ್ವಯಿಸಿದಲ್ಲಿ ಎಸ್ಸಿ/ಎಸ್ಟಿ ಜಾತಿ ಪ್ರಮಾಣಪತ್ರ, ಕಾಫಿ ತೋಟ ಅಥವಾ ಕಾಫಿ ಕ್ಯೂರಿಂಗ್ ಘಟಕದ ಮಾಲೀಕರಿಂದ ನೀಡುವ ಉದ್ಯೋಗ ಪ್ರಮಾಣಪತ್ರ, ಅಧ್ಯಯನ ಪ್ರಮಾಣಪತ್ರ, ಆಧಾರ್ ಜೋಡಣೆಯ ಬ್ಯಾಂಕ್ ಪಾಸ್ಬುಕ್ ಹಾಗೂ ಪೋಷಕರು ಕೆಲಸ ಮಾಡುತ್ತಿರುವ ಕಾಫಿ ತೋಟದ ಆರ್ಟಿಸಿ/ಕಂದಾಯ ದಾಖಲೆಗಳನ್ನು ಸಲ್ಲಿಸಬೇಕು.
ಅರ್ಹ ವಿದ್ಯಾರ್ಥಿಗಳು ಸೆಪ್ಟೆಂಬರ್ ೮ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಾಫಿ ಮಂಡಳಿ, ಸೋಮವಾರಪೇಟೆ ಕಚೇರಿಯ ಸಂಪರ್ಕ ಸಂಖ್ಯೆ ೮೮೭೭೧೫೪೭೪೯ ಅನ್ನು ಸಂಪರ್ಕಿಸಬಹುದಾಗಿದೆ.