ಪೊನ್ನಂಪೇಟೆ, ಆ. ೨೬: ರಾಷ್ಟಿçÃಯ ಮಾನವ ಶ್ರೇಷ್ಠತಾ ಪ್ರಶಸ್ತಿ-೨೦೨೬ಕ್ಕೆ ಭಾಜನರಾದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಡಿ.ಹೆಚ್. ಸೂಫಿ ಹಾಜಿ ಅವರನ್ನು ದುದ್ದಿಯಂಡ ಕುಟುಂಬಸ್ಥರ ಪರವಾಗಿ ಸನ್ಮಾನಿಸಲಾಯಿತು.
ವೀರಾಜಪೇಟೆ ಸಮೀಪದ ನಲ್ವತ್ತೋಕ್ಲಿನಲ್ಲಿ ಕುಟುಂಬದ ತಕ್ಕ ಮುಖ್ಯಸ್ಥರಾದ ಡಿ.ಎ. ಫಕ್ರುದ್ದೀನ್, ಮಾಹಿನ್ ಹಾಜಿ ಮತ್ತು ಅಬ್ದುಲ್ಲಾ ಅವರ ಸಮ್ಮುಖದಲ್ಲಿ ನಡೆದ ದುದ್ದಿಯಂಡ ‘ಕುಟುಂಬ ಸಂಗಮ’ದಲ್ಲಿ ದುದ್ದಿಯಂಡ ಕುಟುಂಬ ಸಂಘದ ಅಧ್ಯಕ್ಷರೂ ಆಗಿರುವ ಸೂಫಿಯವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಕ್ಕ ಮುಖ್ಯಸ್ಥರು, ಸಮಾಜ ಸೇವ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಸೂಫಿ ಹಾಜಿಯವರು ರಾಷ್ಟç ಪ್ರಶಸ್ತಿ ಪಡೆದಿರುವುದು ಕುಟುಂಬಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದುದ್ದಿಯಂಡ ಸೂಫಿ ಹಾಜಿ, ಜನ್ಮ ಪಡೆದ ಊರಿನಲ್ಲಿ ಸಿಗುವ ಗೌರವ ಮತ್ತು ಸನ್ಮಾನಕ್ಕೆ ಜಗತ್ತಿನ ಯಾವುದೇ ದೊಡ್ಡ ಪ್ರಶಸ್ತಿಯೂ ಸಮನಾಗಲು ಸಾಧ್ಯವಿಲ್ಲ ಎಂದರು.
ಇದೆ ವೇಳೆ ಕುಟುಂಬದ ಯುವಕರ ಬಳಗದಿಂದಲೂ ಸೂಫಿ ಹಾಜಿ ಅವರನ್ನು ಪ್ರತ್ಯೇಕವಾಗಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ನಲ್ವತ್ತೋಕ್ಲು ಮೊಹಿದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಪಿ. ಎ. ಹನೀಫ್, ನಿವೃತ್ತ ಜಿಲ್ಲಾ ಖಜಾನಾಧಿಕಾರಿ ದುದ್ದಿಯಂಡ ಎಂ. ಉಸ್ಮಾನ್ ಹಾಜಿ, ದುದ್ದಿಯಂಡ ಕುಟುಂಬ ಸಂಘದ ಕಾರ್ಯದರ್ಶಿ ಡಿ. ಇ. ಫಕ್ರುದ್ದೀನ್ ಸೇರಿದಂತೆ ಕುಟುಂಬ ಸಂಘದ ಪದಾಧಿಕಾರಿಗಳು, ಯುವಕರ ಬಳಗದ ಪದಾಧಿಕಾರಿಗಳು, ಗ್ರಾಮದ ಪ್ರಮುಖರು, ಸದಸ್ಯರು ಪಾಲ್ಗೊಂಡಿದ್ದರು.