ನೆಹರೂ ನಗರವು ಭೌಗೋಳಿಕವಾಗಿ ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶ. ಪ್ರತಿಯೊಬ್ಬ ಸ್ಥಳೀಯನಿಗೂ ಹಬ್ಬದ ವಾತಾವರಣ ತಲುಪಬೇಕು, ಊರಿನ ಪ್ರತಿಯೊಬ್ಬ ಯುವಕನೂ ಒಂದೆಡೆ ಸೇರಿ ಸಾಮರಸ್ಯದಿಂದ ಕಾರ್ಯನಿರ್ವಹಿಸಬೇಕು ಎಂಬ ಪವಿತ್ರ ಆಶಯದೊಂದಿಗೆ ೩೭ ವರ್ಷಗಳ ಹಿಂದೆ ಶ್ರೀ ನೇತಾಜಿ ಉತ್ಸವ ಸಮಿತಿ ವತಿಯಿಂದ ಗಣೇಶ ಪ್ರತಿಷ್ಠಾಪನೆಗೆ ನಾಂದಿ ಹಾಡಲಾಯಿತು.

ಆರಂಭದ ದಿನಗಳಲ್ಲಿ ಸಣ್ಣ ಚಪ್ಪರ ಹಾಕಿ ೩ ದಿನಗಳಿಗೆ ಮಾತ್ರ ಸೀಮಿತವಾಗಿದ್ದ ಈ ಉತ್ಸವವು, ಇಂದು ಇಡೀ ಊರೇ ಹೆಮ್ಮೆಪಡುವಂತಹ ವೈಭವವನ್ನು ಪಡೆದು ಕೊಂಡಿದೆ. ಚಪ್ಪರದಿಂದ ಪ್ರಾರಂಭವಾದ ಪಯಣವು ಇಂದು ಸುಸಜ್ಜಿತ ಸಮುದಾಯ ಭವನದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವ ಹಂತಕ್ಕೆ ತಲುಪಿದೆ.

ಉತ್ಸವವೆಂದರೆ ಕೇವಲ ಪೂಜೆ-ಪುನಸ್ಕಾರಗಳಿಗೆ ಸೀಮಿತವಾಗಿರದೆ, ಸೇವೆಯೂ ಸೇರಿಕೊಂಡಾಗ ಮಾತ್ರ ಅದು ಸಾರ್ಥಕತೆ ಪಡೆಯುತ್ತದೆ ಎನ್ನುವ ನಿಟ್ಟಿನಲ್ಲಿ ೧೧ ದಿನಗಳ ಕಾಲ ನಡೆಯುವ ಈ ದಿವ್ಯ ಉತ್ಸವದಲ್ಲಿ ಪ್ರತಿದಿನ ರಾತ್ರಿ ಸ್ಥಳೀಯರಿಗೆ ಹಾಗೂ ಆಗಮಿಸುವ ಭಕ್ತಾದಿಗಳಿಗೆ ಅನ್ನದಾನ ನೆರವೇರಲಿದೆ.

ಪ್ರತಿಷ್ಠಾಪನೆಯ ನಂತರದ ೪ನೇ ದಿನ ದಂದು ನೆಹರೂ ನಗರದ ಸ್ಥಳೀಯ ಉದಯೋನ್ಮುಖ ಪ್ರತಿಭೆಗಳಿಗೆ ಹಾಗೂ ಮಕ್ಕಳಿಗೆ ತಮ್ಮ ಕಲಾತ್ಮಕ ಸಾಮರ್ಥ್ಯವನ್ನು ಪ್ರದರ್ಶಿ ಸಲು ವಿಶೇಷ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಯಾವುದೇ ಸಂಸ್ಥೆ ಅಥವಾ ಸಮಿತಿ ಹೆಮ್ಮರವಾಗಬೇಕಾದರೆ ಅದರ ಬೇರುಗಳು ಗಟ್ಟಿಯಾಗಿರಬೇಕು. ದಿ. ಮಂಜು (ನಾಟಕ ಮಂಜು) ಅವರ ನೇತೃತ್ವ ಹಾಗೂ ಅಧ್ಯಕ್ಷತೆಯಲ್ಲಿ ಸಂಸ್ಥಾಪನೆಗೊAಡ ಈ ಸಮಿತಿಯಲ್ಲಿ ದಿ. ಪಿ.ಕೆ. ಪದ್ಮನಾಭ, ದಿ. ಕೆ.ಆರ್. ಮನೋಹರ, ಕೆ.ಕೆ. ರಾಜ, ಹಾಗೂ ಬಿ.ಎಸ್. ಚೆನ್ನಪ್ಪ ಹಾಗೂ ಸಂಗಡಿಗರೊAದಿಗೆ ಹಂತ ಹಂತವಾಗಿ ಬೆಳೆಯಿತು. ತದನಂತರ ಅವರಂತಹ ದೂರದೃಷ್ಟಿಯುಳ್ಳ ನಾಯಕರ ಮುಂದಾಳತ್ವದಲ್ಲಿ ನೇತಾಜಿ ಉತ್ಸವ ಸಮಿತಿಯು ಅತ್ಯಂತ ಶಿಸ್ತು ಮತ್ತು ಭಕ್ತಿಯಿಂದ ಸಂಘಟಿತಗೊAಡಿದೆ.

ವೀರಾಜಪೇಟೆಯ ಎಲ್ಲಾ ಸಮಿತಿಗಳೊಂದಿಗೆ ಒಂದಾಗಿ, ಒಂದೇ ಗೂಡಿನಲ್ಲಿ ಶೋಭಾಯಾತ್ರೆಯಲ್ಲಿ ಭಾಗವಹಿಸುವುದು ನೇತಾಜಿ ಉತ್ಸವ ಸಮಿತಿಯ ಬದ್ಧತೆಯನ್ನು ತೋರಿಸುತ್ತದೆ. ಪ್ರಸ್ತುತ ರಂಜಿತ್ ಅಧ್ಯಕ್ಷರಾಗಿ, ಸುರೇಶ್ ಉಪಾಧ್ಯಕ್ಷ, ಕಾರ್ಯದರ್ಶಿ ದಿನು, ಗೌರವ ಅಧ್ಯಕ್ಷ ಶಶಿ, ಖಜಾಂಚಿ ಸುನಿಲ್ ಸೇರಿದಂತೆ ಹಲವರ ತಂಡ ಕಾರ್ಯನಿರ್ವಹಿಸುತ್ತಿದೆ.

ಹಬ್ಬಗಳು ಕೇವಲ ಆಚರಣೆಯಲ್ಲ, ಅವು ನಮ್ಮ ಸಮಾಜವನ್ನು ಒಂದಾಗಿಸುವ ಶಕ್ತಿ. ಭೇದ-ಭಾವಗಳನ್ನು ಮರೆತು ಯುವಜನತೆ ಸನ್ಮಾರ್ಗದಲ್ಲಿ ಸಾಗಲು, ಸಮಾಜಕ್ಕೆ ಸೇವೆಯ ಸಂದೇಶ ನೀಡಲು ಮತ್ತು ನಮ್ಮ ನಾಡಿನ ಪರಂಪರೆಯನ್ನು ಎತ್ತಿಹಿಡಿಯಲು ಈ ಗೌರಿ ಗಣೇಶ ಉತ್ಸವ ಸ್ಪೂರ್ತಿಯಾಗಿದೆ. ಈ ೩೭ನೇ ವರ್ಷದ ವೈಭವದ ಆಚರಣೆಯಲ್ಲಿ ಮತ್ತು ವಿರಾಜಪೇಟೆಯ ಶೋಭಾಯಾತ್ರೆಯಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕಿದೆ.

-ರಜಿತ ಕಾರ್ಯಪ್ಪ,

ವೀರಾಜಪೇಟೆ.

ಮೊ: ೯೪೮೧೭೭೧೮೫೧