ಶ್ರೀಮಂಗಲ, ಆ. ೨೬: ಬಿರುನಾಣಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೫-೨೬ನೇ ಸಾಲಿನಲ್ಲಿ ರೂ.೩.೧೮ ಕೋಟಿ ವ್ಯಾಪಾರ ನಡೆಸಿ ರೂ.೧೬.೩೬ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್ ತಿಳಿಸಿದರು.

ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಆವರು, ೧೬೧೨ ಸದಸ್ಯರಿರುವ ಸಂಘದಲ್ಲಿ ರೂ.೨.೫೮ ಕೋಟಿ ಷೇರು ಬಂಡವಾಳ ಹೊಂದಿದ್ದು, ದುಡಿಯುವ ಬಂಡವಾಳ ರೂ.೨೭.೫೬ ಕೋಟಿಯಾಗಿದೆ ಎಂದು ತಿಳಿಸಿದರು. ಒಟ್ಟು ಠೇವಣಿ ರೂ.೬.೧೨ ಕೋಟಿಯಾಗಿದ್ದು, ಸದಸ್ಯರಿಗೆ ರೂ.೨೦.೮೬ ಕೋಟಿ ಸಾಲ ವಿತರಿಸಲಾಗಿದೆ, ಇದರಲ್ಲಿ ರೂ.೧೭.೩೮ ಕೋಟಿ ಕೆಸಿಸಿ ಸಾಲವಾಗಿದೆ ಎಂದು ವಿವರಿಸಿದರು.

ಅಡೀಟ್ ವರದಿಯಲ್ಲಿ ‘ಎ’ ವರ್ಗೀಕರಣ ಹೊಂದಿದೆ, ೧೯೭೬ರಲ್ಲಿ ಸಂಘ ಸ್ಥಾಪನೆಯಾಗಿದ್ದು ೫೦ ವರ್ಷ ತುಂಬುತ್ತಿರುವ ಹಿನ್ನೆಲೆ ಈ ವರ್ಷ ಸುವರ್ಣ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್.ಪಿ ಭಾರತಿ, ನಿರ್ದೇಶಕರುಗಳಾದ ಉಪಾಧ್ಯಕ್ಷ ಜಿ.ಕೆ. ಸುಬ್ರಮಣಿ, ಕೆ.ಎಂ. ಸುನಿಲ್, ಬಿ. ಕೆ. ನಾಣಯ್ಯ, ಎಂ. ಬಿ. ಮಂಜುನಾಥ್, ಬಿ. ಎಂ. ಸಂಪತ್, ಕೆ.ಬಿ. ಕುಶಾಲಪ್ಪ, ಎ.ಎನ್ ಗಣೇಶ್, ಕೆ.ಆರ್ ಮಧುರ, ಕೆ.ಡಿ ನಂಜಮ್ಮ, ಹೆಚ್.ಎ ಶಾರದಾ ಹಾಜರಿದ್ದರು.