ಮಡಿಕೇರಿ, ಆ.೨೫: ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಹಿರಿಯರ ದಿನಾಚರಣೆ ಅಂಗವಾಗಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆ ವತಿಯಿಂದ ಹಿರಿಯರಿಗೆ ನಮನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯರಾದ ಶಾರದಾ ಕೆ.ಜೆ, ಅಬ್ದುಲ್ಲಾ ಎಂ. ಎ.,, ಕೋಡಿರ ಪ್ರಕಾಶ್ ಈರಪ್ಪ ಅವರನ್ನು ಸನ್ಮಾನಿಸಲಾಯಿತು

ಸನ್ಮಾನಿತರು ಮಾತನಾಡಿ, ಹಿಂದಿನ ದಿನಗಳ ಜೀವನಶೈಲಿ, ಸಂಪ್ರದಾಯಗಳು, ಸಂಬAಧಗಳ ಆತ್ಮೀಯತೆ., ನಮ್ಮ ಆಚರಣೆ, ಭಾಷೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕೆAಬ ಆಶಯ ವ್ಯಕ್ತಪಡಿಸಿದರು. ವೈದ್ಯಾಧಿಕಾರಿ ಡಾ.ಶುಭಾ ಕೆ.ಜಿ. ಮಾತನಾಡಿ, ಗುರು ಹಿರಿಯರನ್ನು ಗೌರವಿಸುವುದು ಕಿರಿಯರ ಆದ್ಯತೆಯಾಗಬೇಕು. ಎಲ್ಲಿ ಹಿರಿಯರಿಗೆ ಗೌರವ ದೊರಕುತ್ತದೆಯೋ ಅಲ್ಲಿ ನೆಮ್ಮದಿ ನೆಲೆಸಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮೋಹಿತ್ ಪೂಣಚ್ಚ , ಶಾಲಾ ಎಸ್ ಡಿ ಎಮ್ ಸಿ ಸದಸ್ಯೆ ಕಾವೇರಮ್ಮ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಹೇಮಾವತಿ ಎಚ್ ಎ, ಸ್ವಾಗತಿಸಿದರು. ವತ್ಸಲಾ ಶ್ರೀಶ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಎಂ.ಬಿ. ಶೋಭಾ ವಂದಿಸಿದರು.ಮಡಿಕೇರಿ : ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟಿçÃಯ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಿರಿಯರಿಗೆ ಗೌರವ ನಮನ ಕಾರ್ಯಕ್ರಮ ಆಯೋಜಿತವಾಗಿತ್ತು.

ಹಿರಿಯ ನಾಗರಿಕರಾದ ವೇದಾವತಿ, ಕೋರನ ವಿಶ್ವನಾಥ್, ನಿವೃತ್ತ ಶಿಕ್ಷಕ ಪಿ ಕೆ ಸೋಮಯ್ಯ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಜಗದೀಶ್ ಪ್ರಶಾಂತ್ ಹಿರಿಯರ ದಿನದ ಮಹತ್ವದ ಬಗ್ಗೆ ವಿವರಿಸಿದರು.

ಕಾಲೇಜು ಪ್ರಾಂಶುಪಾಲ ಮಂದಪ್ಪ ಮಾತನಾಡಿ, ಭಾರತೀಯ ಸಮಾಜದ ಭಾಗವಾಗಿದ್ದ ಅವಿಭಕ್ತ ಕುಟುಂಬವು ಇಂದು ಕಣ್ಮರೆಯಾಗಿದ್ದು ಇದರ ಪರಿಣಾಮ ಈ ಹಿಂದೆ ಹಿರಿಯ ನಾಗರಿಕರಿಗೆ ಸಿಗುತ್ತಿದ್ದ ರಕ್ಷಣೆ ಮತ್ತು ಪೋಷಣೆ ಕಡಿಮೆಯಾಗುತ್ತಿದೆ. ದೇಶದಲ್ಲಿ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿಯಾದ ವಿಚಾರವಾಗಿದೆ ಎಂದರು. ಮುಖ್ಯ ಶಿಕ್ಷಕಿ ರೀಟಾ ಸ್ವಾಗತಿಸಿ, ಉಪನ್ಯಾಸಕಿ ಸವಿತ ಅತಿಥಿಗಳನ್ನು ಪರಿಚಯಿಸಿ, ಉಪನ್ಯಾಸಕಿ ಸೀಮಾ ವಂದಿಸಿದರು. ರೋಟರಿ ಮಿಸ್ಟಿ ಹಿಲ್ಸ್ ನ ಪ್ರಿಯಾಪ್ರಶಾಂತ್ ಹಾಜರಿದ್ದರು.