ಸೋಮವಾರಪೇಟೆ: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿಗೆ ತೆರಳುವ ರಸ್ತೆಯ ಬದಿಯಲ್ಲಿದ್ದ ಮರವೊಂದು ಇಂದು ಬೆಳಿಗ್ಗೆ ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಹೆಚ್ಚಿನ ಅನಾಹುತ ತಪ್ಪಿದೆ.
ಮೇಲಿನ ಮೈದಾನದ ರಸ್ತೆಯ ಬದಿಯಲ್ಲಿದ್ದ ಮರ ನಸುಕಿನ ವೇಳೆ ಮಳೆ-ಗಾಳಿಯಿಂದಾಗಿ ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಸದ್ಯ ಈ ಸಮಯದಲ್ಲಿ ರಸ್ತೆಯಲ್ಲಿ ಜನ-ವಾಹನ ಸಂಚಾರ ಇಲ್ಲದ್ದರಿಂದ ಅನಾಹುತ ತಪ್ಪಿದೆ. ಸಾಧಾರಣವಾಗಿ ಈ ರಸ್ತೆಯಲ್ಲಿ ಬೆಳಗ್ಗಿನ ಜಾವ ವಾಕಿಂಗ್ ತೆರಳುವವರು, ಮೈದಾನಕ್ಕೆ ಆಗಮಿಸುವ ಮಂದಿ ಸಾಗುತ್ತಿದ್ದರು. ಕೆಲವರು ವಾಹನಗಳನ್ನು ಮರದ ಕೆಳಗೆ ನಿಲ್ಲಿಸುತ್ತಿದ್ದರು. ಇದೀಗ ಹೆಚ್ಚು ಮಳೆಯಾದ್ದರಿಂದ ಸಾರ್ವಜನಿಕರ ಓಡಾಟ ಇರಲಿಲ್ಲ. ಇದರೊಂದಿಗೆ ನಸುಕಿನ ವೇಳೆಯಾದ್ದರಿಂದ ಶಾಲಾ ಕಾಲೇಜಿಗೆ ಮಕ್ಕಳು ಆಗಮಿಸುತ್ತಿರಲಿಲ್ಲ. ಹೀಗಾಗಿ ಅನಾಹುತ ತಪ್ಪಿದೆ ಎಂದು ಸ್ಥಳೀಯರಾದ ಪ್ರವೀಣ್ ಅಭಿಪ್ರಾಯಿಸಿದ್ದಾರೆ.