ಕುಶಾಲನಗರ, ಆ. ೨೫: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ದುಬಾರೆ ಶಿಬಿರದಿಂದ ೫ ಆನೆಗಳು ತೆರಳಿದವು.

ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಕಾವೇರಿ ಆನೆಗಳಿಗೆ ಶಿಬಿರದಲ್ಲಿ ಪೂಜೆ ಸಲ್ಲಿಸಿ ನಂತರ ಅಧಿಕಾರಿ ಸಿಬ್ಬಂದಿ ವರ್ಗದವರು ಆನೆಗಳನ್ನು ಬೀಳ್ಕೊಟ್ಟರು. ಈ ೫ ಆನೆಗಳು ಕಳೆದ ಬಾರಿ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದವು. ಮೈಸೂರಿನಿಂದ ಬಂದ ಲಾರಿಗಳಲ್ಲಿ ಆನೆಗಳೊಂದಿಗೆ ಅವುಗಳ ಮಾವುತ ಕಾವಾಡಿಗರು ಮತ್ತು ಕುಟುಂಬ ಸದಸ್ಯರು ತೆರಳಿದರು.