ಮಡಿಕೇರಿ, ಆ. ೨೫: ಜಿಲ್ಲೆಯಲ್ಲಿ ಸಾಮಾನ್ಯವಾಗಿ ಆಶ್ಲೇಷ ಮಳೆ ಈ ಹಿಂದಿನಿAದಲೂ ಆತಂಕ ಸೃಷ್ಟಿಸುತ್ತಿತ್ತು. ಮಖಾ ಮಳೆ ಅಷ್ಟೇನೂ ಹಾನಿ ಮಾಡಿರುವ ಸಂದರ್ಭ ಅಥವಾ ಭಾರೀ ಪ್ರಮಾಣದಲ್ಲಿ ಸುರಿದ ವಿದ್ಯಮಾನ ಇದುವರೆಗೆ ಕಂಡುಬAದಿಲ್ಲ. ಆದರೆ ಇದ್ದಕ್ಕಿದ್ದಂತೆ ನಿನ್ನೆ ಮಧ್ಯಾಹ್ನದ ಬಳಿಕ ಹಾಗೂ ರಾತ್ರಿ ವೇಳೆ ಮತ್ತು ಇಂದು ಬೆಳಗಿನ ಜಾವ ಜಿಲ್ಲೆಯ ಹಲವೆಡೆ ಭಾರೀ ಮಳೆೆ ಸುರಿದಾಗ ಜಲ್ಲೆಯ ಜನತೆಯಲ್ಲಿ ಸಹಜವಾಗಿ ಆತಂಕ ಮೂಡಿತು. ಮಡಿಕೇರಿಯಲ್ಲಿ ಬೆಳಗಿನ ಜಾವ ಗುಡಗು ಸಹಿತ ಮಳೆಯಾದಾಗ ಇದು ಮುಂಗಾರು ಮಳೆಯಲ್ಲ ಎನ್ನುವಂತಿತ್ತು. ಅನೇಕರು ಇದು ಮೋಡ ಬಿತ್ತನೆಯಿಂದ ಸುರಿಯುತ್ತಿದೆ ಎನ್ನಲಾರಂಭಿಸಿದರು. ಭಾಗಮಂಡಲದಲ್ಲಿಯೂ ಕಾವೇರಿಯ ನೀರಿನ ಮಟ್ಟ ಏರಿಕೆಯಾದಾಗÀ ಆತಂಕ ಕಂಡುಬAದಿತು. ಆದರೆ, ಇಂದು ಮಧ್ಯಾಹ್ನ ನಂತರ ಎಲ್ಲಡೆ ಮಳೆ ಕ್ಷೀಣಗೊಂಡು ನದಿ ನೀರಿನ ಮಟ್ಟವೂ ಇಳಿಮುಖಗೊಂಡಿತು.

ಈಗಾಗಲೇ ರಾಜ್ಯ ಸರಕಾರ ರಾಜ್ಯದಲ್ಲಿ ಮೋಡ ಬಿತ್ತನೆ ನಡೆಸಲು ನಿರ್ಧಾರ ಪ್ರಕಟಿಸಿರುವುದರಿಂದ ಮಳೆಗೆ ಇದೇ ಕಾರಣವಾಗಿದೆ ಎಂದು ಜನತೆ ಊಹಿಸುವಂತಾಯಿತು. ಆದರೆ, ಈಗಾಗಲೆ ಈ ಕುರಿತಾಗಿ ಸಚಿವ ಚೆಲುವರಾಯ ಸ್ವಾಮಿ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅವರು ಭೇಟಿಯಾಗಿ ಕೊಡಗಿನಲ್ಲಿ ಮೋಡ ಬಿತ್ತನೆಯಾಗುವುದಿಲ್ಲ ಎಂದು ವಿವರಣೆ ನೀಡಿದ್ದರೂ ಬೆಳೆÉಗಾರರÀ ವಲಯದಲ್ಲಿ ಸರಕಾರ ಮೋಡ ಬಿತ್ತನೆ ಕಾರ್ಯವನ್ನು ಕೊಡಗಿನಲ್ಲಿ ರಹಸ್ಯವಾಗಿ ಮಾಡಲಾರಂಭಿಸಿದೆ ಎನ್ನುವ ಸಂಶಯ ಮೂಡುವಂತಾಗಿದೆ.

ಈ ಕುರಿತಾಗಿ ಇಂದು ಜಿಲ್ಲಾಧಿಕಾರಿ ಎಸ್. ಜೆ. ಸೋಮಶೇಖರ್ ಅವರನ್ನು “ಶಕ್ತಿ” ಸಂಪರ್ಕಿಸಿದಾಗ “ ಮೋಡ ಬಿತ್ತನೆ ಜಿಲ್ಲೆಯಲ್ಲಿ ನಡೆದಿಲ್ಲ” ಎಂದು ಖಚಿತಪಡಿಸಿದರು. ಅಲ್ಲದೆ, ದಿಢೀರ್ ಮಳೆ ಜಾಸ್ತಿಯಾದುದಕ್ಕೆ ಬಂಗಾಳಕೊಲ್ಲಿಯಲ್ಲಿ ಸಾಗರ ಕೊರೆತದ ಪರಣಾಮವಿರಬಹುದು ಎಂದು ಮಾಹಿತಿಯಿತ್ತರು. ಜಿಲ್ಲೆಯಲ್ಲಿ ಹವಾಮಾನ ಮುನ್ನೆಚ್ಚರಿಕೆಯನ್ನು ಇಲಾಖೆ ನೀಡುತ್ತಿಲ್ಲವೇಕೆ ಎಂದಾಗ ಸಮುದ್ರ ಕೊರತೆಯಂತಹ ಸಂದರ್ಭ ದಿಢೀರ್ ಹವಾಮಾನ ಏರುಪೇರಾಗುವುದರಿಂದ ಮುನೆÀ್ನಚ್ಚರಿಕೆ ಲಭ್ಯವಾಗುವುದಿಲ್ಲ ಎಂದರು. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇಂದು ಹವಾಮಾನ ವ್ಯತ್ಯಾಸವಾಗಿದ್ದು ಕೊಡಗಿನಲ್ಲಿ ಮಳೆÉ ಕೆಲಕಾಲ ಹೆಚ್ಚಾಗಲು ಕಾರಣಾವಾಯಿತು ಎಂದರು.

ಜಿಲ್ಲೆಯ ಹಲವೆಡೆ ಮಳೆ

ಇಂದು ಮಧ್ಯಾಹ್ನದವರೆಗೆ ಕೂಡಿಗೆ, ಹೆಬ್ಬಾಲೆ, ಶಿರಂಗಾಲ, ಗೋಣಿಕೊಪ್ಪಲುವಿನ ಸುತ್ತಮುತ್ತ ಪ್ರದೇಶ, ಕರಿಕೆ ಮೊದಲಾದೆಡೆ ಮಳೆಯಾಗಿದೆ. ಸಿದ್ದಾಪುರ ಸುತ್ತಮುತ್ತಲ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಸಿದ್ದಾಪುರ, ನೆಲ್ಲಿಹುದಿಕೇರಿ ಗ್ರಾಮದ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾರ್ಮಿಕರಿಗೆ ಕೆಲಸಕ್ಕೆ ರಜೆ ನೀಡಲಾಗಿತ್ತು. ಮಳೆಯ ರಭಸ ತೀವ್ರವಾಗಿದ್ದು ಗುಡುಗಿನಿಂದಾಗಿ ಜನರು ಭಯಭೀತರಾದರು.

ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು ಜನ ಜೀವನ ಸಂಪೂರ್ಣವಾಗಿ ಏರುಪೇರಾಗಿದೆ. ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಪಟ್ಟಣದ ವಾರದ ಸಂತೆ ಮಾರುಕಟ್ಟೆ ಮಳೆಯಿಂದ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ಅನಾನುಕೂಲ ಉಂಟಾದ ದೃಶ್ಯ ಗೋಚರಿಸಿತು. ಕುಶಾಲನಗರದಲ್ಲಿ ಕಾವೇರಿ ನದಿಯಲ್ಲಿ ಒಂದು ದಿನದ ಅವಧಿಯಲ್ಲಿ ಮೂರು ಅಡಿಗಳಿಗೂ ಹೆಚ್ಚಿನ ಪ್ರಮಾಣದ ನೀರು ಹರಿಯತೊಡಗಿದೆ.

ಗುಡ್ಡೆಹೊಸೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ರಾತ್ರಿಯಿಂದ ನಿರಂತರ ಮಳೆ ಸುರಿದು ಜನ ಜೀವನ ಅಸ್ತವ್ಯಸ್ತÀ್ತಗೊಂಡಿತು. ತಗ್ಗು ಪ್ರದೇಶದ ಗದ್ದೆಗಳಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹಣೆಯಾಗಿದೆ. ಕಾವೇರಿ ನದಿ ನೀರಿನ ಹರಿವಿನಲ್ಲಿ ಭಾರಿ ಹೆಚ್ಚಳವಾಗಿದೆ. ಇದೇ ರೀತಿ ಮಳೆ ಮುಂದುವರಿದಲ್ಲಿ ಕಾವೇರಿ ನದಿಯಲ್ಲಿ ಗರಿಷ್ಠ ಮಟ್ಟದ ನೀರಿನ ಹರಿವು ಹೆಚ್ಚಾಗಲಿದೆ. ಹಾರಂಗಿ ಹಾಗೂ ಚಿಕ್ಲಿಹೊಳೆ ಜಲಾಶಯ ಮತ್ತೆ ಭರ್ತಿಯಾಗುವ ಲಕ್ಷಣ ಕಂಡು ಬರುತ್ತಿದೆ. ಈ ಭಾಗದ ಕೆಲವು ಕಡೆ ಮರಗಳು ತೋಟಗಳಲ್ಲಿ ಬೇರು ಸಮೇತ ನೆಲಕ್ಕುರುಳಿರುವ ವರದಿಯಾಗಿದೆ. ಹಲವು ಭಾಗಗಳಲ್ಲಿ ಕಾಡಂಚಿನ ನೀರು ಗ್ರಾಮಗಳಿಗೆ ನುಗ್ಗಿರುವ ಪ್ರಸಂಗ ನಡೆದಿದೆ.

ತಲಕಾವೇರಿ : ಎರಡು ದಿನದಲ್ಲಿ ೧೧ ಇಂಚು

ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಲ್ಲಿ ಒಟ್ಟು ೧೧ ಇಂಚು ಮಳೆಯಾಗಿರುವ ಕುರಿತು ವರದಿಯಾಗಿದೆ. ತಾ. ೨೪ರಂದು ಬೆಳಿಗ್ಗೆ ೮ ರ ವರೆಗೆ ಕಳೆದ ೨೪ ಗಂಟೆಗಳಲ್ಲಿ ಮೂರುವರೆ ಇಂಚು ಮಳೆ ಹಾಗೂ ತಾ. ೨೫ ಬೆಳಗ್ಗೆ ೮ ರ ವರೆಗೆ ೭:೫೦ ಇಂಚು ಸೇರಿ ಒಟ್ಟು ೧೧ ಇಂಚು ಮಳೆಯಾಗಿದೆ.

ಗಾಳಿಬೀಡಿಗೆ ೪ ಇಂಚು ಮಳೆ

ಕಳೆದ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಮಡಿಕೇರಿ ಸನಿಹದ ಗಾಳಿಬೀಡು ಗ್ರಾಮದಲ್ಲಿ ಕಳೆದ ೨೪ ಗಂಟೆ ಅವಧಿಯಲ್ಲಿ ೪ ಇಂಚುಗಳಷ್ಟು ಮಳೆ ಸುರಿದಿದೆ. ಜನವರಿಯಿಂದ ಇಲ್ಲಿಯವರೆಗೆ ಈ ಭಾಗದಲ್ಲಿ ೧೨೦ ಇಂಚುಗಳಷ್ಟು ಮಳೆಯಾಗಿರುವದಾಗಿ ಕೊಂಬಾರನ ರೋಶನ್ ಗಣಪತಿ ಮಾಹಿತಿ ನೀಡಿದ್ದಾರೆ. ಶನಿವಾರಸಂತೆ - ಕೊಡ್ಲಿಪೇಟೆ ಹೋಬಳಿಯಾದ್ಯಾಂತ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಉತ್ತಮ ಮಳೆಯಾಗಿದೆ. ಮಧ್ಯಾಹ್ನದ ನಂತರ ಸಂಜೆಯವರೆಗೆ ಬಿಡುವು ನೀಡುತ್ತಾ ಮಳೆ ಸುರಿಯಿತು.