ನಾಪೋಕ್ಲು, ಆ. ೨೫: ಇಲ್ಲಿಗೆ ಸಮೀಪದ ಎಮ್ಮೆಮಾಡು ಪರಂಬು ಎಸ್.ವೈ.ಎಸ್, ಎಸ್.ಎಸ್.ಎಫ್ ಈಸ್ಟ್ ಯೂನಿಟ್ ಸಂಯುಕ್ತ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.

ಎಮ್ಮೆಮಾಡು ಪರಂಬು ಮುಖ್ಯ ರಸ್ತೆಯ ಬದಿಗಳಲ್ಲಿ ಇದ್ದ ಕಾಡು ಕಡಿದು ಸ್ವಚ್ಛತೆಗೊಳಿಸಲಾಯಿತು.

ಈ ಸಂದರ್ಭ ಈಸ್ಟ್ ಯೂನಿಟ್ ಅಧ್ಯಕ್ಷ ನೌಷಾದ್ ಪರಂಬು, ಕಾರ್ಯದರ್ಶಿ ಹನೀಫ್ ಪರಂಬು, ಕೋಶಾಧಿಕಾರಿ ಲತೀಫಿ ಎಮ್ಮೆಮಾಡು, ಜಮಾಲ್ ಹಾಜಿ ಮತ್ತು ಸದಸ್ಯರು ಭಾಗವಹಿಸಿದ್ದರು.