ಸಿದ್ದಾಪುರ, ಆ. ೨೫: ಪಾಲಿಬೆಟ್ಟ ಲೂರ್ಡ್ಸ್ ಹಿಲ್ ಕಾನ್ವೆಂಟ್‌ನ ಸುವರ್ಣ ಮಹೋತ್ಸವದ ಅಂಗವಾಗಿ ಅಂತರ್ ಶಾಲಾ ಚಿತ್ರಕಲಾ ಸ್ಪರ್ಧೆಯನ್ನು ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಪಾಲಿಬೆಟ್ಟ ಕ್ಲಸ್ಟರ್ ವ್ಯಾಪ್ತಿಯ ಲೂರ್ಡ್ಸ್ ಪ್ರೌಢಶಾಲೆ, ಕಾಪ್ಸ್, ಸರಕಾರಿ ಪ್ರೌಢಶಾಲೆ ಚೆನ್ನಯ್ಯನಕೋಟೆ, ಲಯನ್ಸ್ ಹೈಸ್ಕೂಲ್, ಬ್ರೆöÊಟ್ ಬಿಗಿನಿಂಗ್ ಪಾಲಿಬೆಟ್ಟ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ ಈ ಸ್ಪರ್ಧೆಯಲ್ಲಿ ಕಲೆಯನ್ನು ಅನಾವರಣಗೊಳಿಸಿದರು.

ಪಾಲಿಬೆಟ್ಟ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕರುಂಬಯ್ಯ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದೊಂದಿಗೆ ೧೯೭೬ರಲ್ಲಿ ಪ್ರಾರಂಭವಾದ ಶಾಲೆ ತನ್ನ ಸುವರ್ಣ ಮಹೋತ್ಸವ ಆಚರಣೆಯೊಂದಿಗೆ ಕ್ಲಸ್ಟರ್ ಮಟ್ಟದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿದೆ. ಎಂದರು. ಶಾಲೆಯ ಹಳೆ ವಿದ್ಯಾರ್ಥಿ ಸಿಬಿಪೌಲ್ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಲಾ ವ್ಯವಸ್ಥಾಪಕಿ ಸಿಸ್ಟರ್ ಕ್ಯಾಂಡಿಡ, ಶಾಲಾ ಸಂಚಾಲಕಿ ಸಿಸ್ಟರ್ ಸೆಲ್ಮ, ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ತೆರೇಸ್ ಆನ್, ನರ್ಸರಿ ಶಾಲಾ ಮುಖ್ಯ ಶಿಕ್ಷಕಿ ನಿತ್ಯ, ಹಿರಿಯ ಶಿಕ್ಷಕರಾದ ಅನಿತ, ವಿನ್ಸಿ, ಲಿಸೀಯ, ಪ್ರೀತೂ, ವಿಲ್ಮ ಡಿ.ಸೋಜ ಹಾಜರಿದ್ದರು.