ಸಿದ್ದಾಪುರ, ಆ.೨೪: ಮೀಸಲು ಅರಣ್ಯ ಪ್ರದೇಶದೊಳಗೆ ಬೇಟೆಗೆ ತೆರಳಿದ್ದ ಕೇರಳ ಮೂಲದ ಇಬ್ಬರು ಹಾಗೂ ಕೊಡಗು ಜಿಲ್ಲೆಯ ಓರ್ವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಮಾಲ್ದಾರೆ ಸಮೀಪದ ದೊಡ್ಡಹಡ್ಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಭಾನುವಾರ ಹಾಡಹಗಲೇ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಅನುಮಾನಾಸ್ಪದ ಕಾರೊಂದು ನಿಂತಿರುವುದು ಕಂಡುಬAದಿದೆ. ಬಳಿಕ ಅರಣ್ಯ ಪ್ರದೇಶದತ್ತ ಸಾಗುವ ಕಾಲುದಾರಿಯಲ್ಲಿ ಚಪ್ಪಲಿ ಧರಿಸಿ ನಡೆದಿರುವ ಗುರುತುಗಳು ಪತ್ತೆಯಾಗಿವೆ. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಜಾಡು ಹಿಡಿದು ಮುಂದುವರಿದಾಗ ಬಂದೂಕು ಹಿಡಿದ ಕೆಲವರು ಓಡಿಹೋಗುತ್ತಿರುವುದು ಕಂಡುಬAದಿದೆ.

ತಕ್ಷಣ ಅವರನ್ನು ಬೆನ್ನಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ ಮೂವರನ್ನು ಸೆರೆಹಿಡಿದು ವಿಚಾರಣೆ ನಡೆಸಿದ್ದಾರೆ. ಬಂಧಿತರನ್ನು ಕೇರಳದ ತ್ರಿಶೂರು ಜಿಲ್ಲೆಯ ಥೋಮಸ್ (೫೫), ಸುರೇಶ್ (೫೫) ಹಾಗೂ ಮೂರ್ನಾಡು ಸಮೀಪದ ಕೊಂಡAಗೇರಿ ನಿವಾಸಿ ಮೊಹಮ್ಮದ್ ಹನೀಫ್ (೪೭) ಎಂದು ಗುರುತಿಸಲಾಗಿದೆ.

ಬೇಟೆ ಸಾಮಗ್ರಿ ಪತ್ತೆ

ಬಂಧಿತರನ್ನು ಪರಿಶೀಲಿಸಿದ ಸಂದರ್ಭದಲ್ಲಿ ಬ್ಯಾಗ್‌ಗಳಲ್ಲಿ ಅರಣ್ಯದಲ್ಲಿ ವಾಸ್ತವ್ಯ ಹೂಡಲು ಬೇಕಾದ ಬಟ್ಟೆ, ಅಡುಗೆ ಸಾಮಗ್ರಿಗಳು ಸೇರಿದಂತೆ ವನ್ಯಪ್ರಾಣಿಗಳ ಬೇಟೆಗೆ ಬಳಸಬಹುದಾದ ಸಾಮಗ್ರಿಗಳು ಪತ್ತೆಯಾಗಿವೆ. ಅಲ್ಲದೆ ಸಿಡಿಮದ್ದು, ಚಾಕು, ಗಾಂಜಾದAತಹ ಸೊಪ್ಪು ಹಾಗೂ ಲೋಹ ಶೋಧಕ ಸಾಧನ ಸೇರಿದಂತೆ ಹಲವು ವಸ್ತುಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.

ಆರೋಪಿ ಮೊಹಮ್ಮದ್ ಹನೀಫ್‌ನ ಮೊಬೈಲ್ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಪರಿಶೀಲಿಸಿದಾಗ ಥೋಮಸ್ ಬಂದೂಕಿನೊAದಿಗೆ ನಿಂತಿರುವ ಹಾಗೂ ಬಂಡೆಕಲ್ಲಿನ ಮೇಲೆ ಕುಳಿತಿರುವ ಛಾಯಾಚಿತ್ರಗಳು ಪತ್ತೆಯಾಗಿವೆ. ಇದರಿಂದ ಆರೋಪಿಗಳು ಮೀಸಲು ಅರಣ್ಯ ಪ್ರದೇಶಕ್ಕೆ ಕಳ್ಳಬೇಟೆ ಉದ್ದೇಶದಿಂದ ಬಂದಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಆನೆ ದಂತದ ವೀಡಿಯೋ ಪತ್ತೆ

ಹನೀಫ್‌ನ ಮೊಬೈಲ್‌ನಲ್ಲಿದ್ದ ವಾಟ್ಸಾö್ಯಪ್ ಸಂದೇಶಗಳನ್ನು ಪರಿಶೀಲಿಸುವ ವೇಳೆ ನೌಷಾದ್ ಎಂಬಾತನಿAದ ಕಳುಹಿಸಲಾಗಿದ್ದ ಆನೆ ದಂತಗಳಿರುವ ವೀಡಿಯೋ ಪತ್ತೆಯಾಗಿದೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಈ ವೀಡಿಯೋವನ್ನು ಮೂರ್ನಾಡು ಸಮೀಪದ ಕೊಂಡAಗೇರಿ ನಿವಾಸಿ ನೌಷಾದ್ ಕಳುಹಿಸಿದ್ದಾಗಿ ಹನೀಫ್ ಮಾಹಿತಿ ನೀಡಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. .

ವೀಡಿಯೋ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ ಆರೋಪಿಗಳು ಹಾಗೂ ನೌಷಾದ್ ಈ ಹಿಂದೆ ವನ್ಯಪ್ರಾಣಿಗಳ ಬೇಟೆ ಅಥವಾ ಹತ್ಯೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ತಲೆಮರೆಸಿಕೊಂಡಿರುವ ಮೂವರು ಸೇರಿದಂತೆ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಬಂಧಿತ ಮೂವರು ಆರೋಪಿಗಳ ವಿರುದ್ಧ ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್ ಆರ್. ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಈ ಸಂಬAಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿಯೂ ವಲಯ ಅರಣ್ಯಾಧಿಕಾರಿ ರಕ್ಷಿತ್ ಆರ್. ದೂರು ನೀಡಿದ್ದಾರೆ. ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಹಾಗೂ ಎಸಿಎಫ್ ನವೀನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್ ಮತ್ತು ಮಾಲ್ದಾರೆ ಉಪವಲಯ ಅರಣ್ಯಾಧಿಕಾರಿ ಹಂಸ ಅವರ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳಾದ ಚಂದ್ರಶೇಖರ್ ಹಾಗೂ ಅಜಯ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. - ವಾಸು