ವೀರಾಜಪೇಟೆಯ ಗಣೇಶೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸುವ ಕಾವೇರಿ ಗಣೇಶೋತ್ಸವ ಸಮಿತಿ (ಮೂರ್ನಾಡು ರಸ್ತೆ)ಯ ಗಣೇಶೋತ್ಸವವು ಈ ಬಾರಿ ೩೬ನೇ ವರ್ಷದ ಸಂಭ್ರಮಕ್ಕೆ ಕಾಲಿಟ್ಟಿದೆ.
ಈ ಸಮಿತಿಯ ಗಣೇಶೋತ್ಸವ ಮಂಟಪವು ವೀರಾಜಪೇಟೆಯಿಂದ ಮಡಿಕೇರಿಗೆ ತೆರಳುವ ಪ್ರಮುಖ ಮೂರ್ನಾಡು ರಸ್ತೆ ಜಂಕ್ಷನ್ನಲ್ಲಿದೆ. ನಗರದ ಅತ್ಯಂತ ಪ್ರಮುಖ ಆಯಕಟ್ಟಿನ ಸ್ಥಳದಲ್ಲೇ ಈ ಉತ್ಸವ ನಡೆಯುವುದರಿಂದ, ನಿತ್ಯ ಸಾವಿರಾರು ಭಕ್ತಾದಿಗಳು ಹಾಗೂ ಸಾರ್ವಜನಿಕರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.
ಇತಿಹಾಸ ಮತ್ತು ಸಂಸ್ಥಾಪಕರ ಸ್ಮರಣೆ
ಆರಂಭದ ದಿನಗಳಲ್ಲಿ ಈ ಸಮಿತಿಯ ಗಣೇಶೋತ್ಸವಕ್ಕೆ ನಂಬುಡುಮಾಡ ಪೊನ್ನಪ್ಪ ಅವರು ಸಾರಥ್ಯ ವಹಿಸಿ, ತಮ್ಮ ವಿಶೇಷ ಮುತುವರ್ಜಿಯಿಂದ ಚಾಲನೆ ನೀಡಿದ್ದರು. ಆ ಕಾಲಘಟ್ಟದಲ್ಲಿ ಅವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗೆ ಹೆಗಲು ಕೊಟ್ಟು ಜತೆಯಲ್ಲಿ ನಿಂತ ಪ್ರಮುಖರಾದ ಸತ್ಯನಾರಾಯಣ, ನಾಗರಾಜು, ಪಾಪಣ್ಣ ಹಾಗೂ ಡಿಕ್ಕ ಅಚ್ಚಪ್ಪ ಅವರ ಶ್ರಮದ ಫಲವಾಗಿ ಈ ಸಂಸ್ಥೆ ಬಲವಾಗಿ ಬೇರೂರಿತು.
ಹಿರಿ iÀÄರು ಹಾಕಿಕೊಟ್ಟ ಈ ಬಲವಾದ ಅಡಿಪಾಯವೇ ಇಂದು ೩೬ ವರ್ಷಗಳ ಸುದೀರ್ಘ ಹಾಗೂ ಯಶಸ್ವಿ ಆಚರಣೆಗೆ ಕಾರಣವಾಗಿದೆ.
ಪ್ರಸ್ತುತ ೯೦ ಕ್ಕೂ ಹೆಚ್ಚು ಸದಸ್ಯ ಬಲ ಹೊಂದಿರುವ ಸಮಿತಿಯ ಅಧ್ಯಕ್ಷರಾಗಿ ನಂಬುಡುಮಾಡ ಆನಂದ್ ರಾಜಪ್ಪ, ಉಪಾಧ್ಯಕ್ಷರಾಗಿ ರಾಕೇಶ್, ಕಾರ್ಯದರ್ಶಿ ದರ್ಶನ್ ಅವರು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
೧೧ ದಿನಗಳ ಕಾಲ ಶ್ರೀ ದೇವರಿಗೆ ನಿತ್ಯ ಮೂರು ಹೊತ್ತು ಭಕ್ತಿಪೂರ್ವಕ ಪೂಜೆ-ಪುನಸ್ಕಾರಗಳನ್ನು ನೆರವೇರಿಸಲಾಗುತ್ತದೆ. ಪ್ರತಿನಿತ್ಯ ಪೂಜೆಯ ನಂತರ ಭಕ್ತಾದಿಗಳಿಗೆ ಫಲಹಾರ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯಲಿವೆ.
ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಂಪೂರ್ಣವಾಗಿ ಸ್ಥಳೀಯ ಕಲಾವಿದರು ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ವಿಶೇಷ ವೇದಿಕೆ ಕಲ್ಪಿಸಲಾಗುತ್ತದೆ.
ಕವಿಗೋಷ್ಠಿ, ಭಗವದ್ಗೀತೆ ಪಠಣ, ನೃತ್ಯ ಪ್ರದರ್ಶನ ಸೇರಿದಂತೆ ನಾನಾ ರೀತಿಯ ಸಾಂಸ್ಕöÈತಿಕ ಹಾಗೂ ಸ್ಪರ್ಧಾತ್ಮಕ ಕಾರ್ಯಕ್ರಮಗಳು, ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಸಹ ಆಯೋಜಿಸಿ ಸಾಮಾಜಿಕ ಕಳಕಳಿ ಮೆರೆಯಲಾಗುತ್ತಿದೆ.
ಉತ್ಸವದ ನೆಪದಲ್ಲಿ ಧಾರ್ಮಿಕತೆಯೊಂದಿಗೆ ಉಚಿತ ಆರೋಗ್ಯ ಸೇವೆ, ಕಲೆ, ಸಾಹಿತ್ಯ ಹಾಗೂ ಸಂಸ್ಕöÈತಿಯನ್ನು ಪೋಷಿಸಿ ಸಮಾಜಕ್ಕೆ ಶ್ರೇಷ್ಠ ಕೊಡುಗೆ ನೀಡಬೇಕು ಮತ್ತು ಸಮಾಜಕ್ಕೆ ಮಾದರಿಯಾಗಬೇಕು ಎಂಬ ಉನ್ನತ ಉದ್ದೇಶದಿಂದ ಕಾವೇರಿ ಗಣೇಶೋತ್ಸವ ಸಮಿತಿಯು ಈ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.
-ರಜಿತ ಕಾರ್ಯಪ್ಪ,
ವೀರಾಜಪೇಟೆ.
ಮೊ: ೯೪೮೧೭೭೧೮೫೧